ನ. 8ರಿಂದ ರಾಜ್ಯ ಫೈಝೀಸ್ ಸದಸ್ಯತ್ವ ಅಭಿಯಾನ
ಬಿ.ಸಿ.ರೋಡ್ : ಪಟ್ಟಿಕ್ಕಾಡ್ ಜಾಮಿಅ: ನೂರಿಯಾ: ಅರಬಿಯ್ಯಾ: ಪ್ರತಿಪಾದಿಸುವ ಪವಿತ್ರ ಇಸ್ಲಾಮಿನ ಸುಂದರ ಸಂದೇಶಗಳನ್ನು ರಾಜ್ಯಾದ್ಯಂತ ವ್ಯಾಪಿಸಲು ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೇವೆಗೈಯ್ಯುವ ಫೈಝಿ ಉಲಮಾಗಳನ್ನು ಒಂದುಗೂಡಿಸುವ ಸಲುವಾಗಿ "ದಅವತ್ತಿಗೊಂದು ಸಿದ್ಧತೆ" ಎಂಬ ಧ್ಯೇಯವಾಕ್ಯದೊಂದಿಗೆ ನ. 8 ರಿಂದ ಡಿ. 30 ರ ತನಕ ರಾಜ್ಯ ಫೈಝೀಸ್ ಸದಸ್ಯತ್ವ ಅಭಿಯಾನ ನಡೆಯಲಿದೆ.
ನ. 8 ರಂದು ಅಪರಾಹ್ನ 3 ಗಂಟೆಗೆ ಪರ್ಲಡ್ಕ ಶಂಸುಲ್ ಉಲಮಾ ಶರೀಅತ್ ಕಾಲೇಜಿನಲ್ಲಿ ಅಭಿಯಾನಕ್ಕೆ ಖ್ಯಾತ ವಿದ್ವಾಂಸ, ಸಮಸ್ತ ಉಲಮ ಒಕ್ಕೂಟದ ಕಾರ್ಯದರ್ಶಿ, ಸಮಸ್ತ ವಿದ್ಯಾಭ್ಯಾಸ ಮಂಡಳಿಯ ಪ್ರಧಾನ ಕಾರ್ಯದರ್ಶಿಗಳೂ ಆದ ಶೈಖುನಾ ಎಂ.ಟಿ. ಉಸ್ತಾದ್ ಚಾಲನೆ ನೀಡಲಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳ ಆಯ್ದ ಸ್ಥಳಗಳಲ್ಲಿ ಸದಸ್ಯತ್ವ ನೋಂದಣಿ ಪ್ರಕ್ರಿಯೆಗಳು ನಡೆಯಲಿದ್ದು ಅದಕ್ಕಾಗಿ 31 ಮಂದಿ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ರಾಜ್ಯದ ವಿವಿಧ ಸ್ಥಳಗಳಲ್ಲಿ ರುವ ಫೈಝಿ ವಿದ್ವಾಂಸರು ಈ ಅಭಿಯಾನದೊಂದಿಗೆ ಕೈಜೋಡಿಸಿ ಸಹಕರಿಸುವಂತೆ ರಾಜ್ಯ ಫೈಝೀಸ್ ಅಧ್ಯಕ್ಷರಾದ ಉಸ್ಮಾನುಲ್ ಫೈಝಿ ತೋಡಾರ್ ಹಾಗೂ ಪ್ರಧಾನ ಕಾರ್ಯದರ್ಶಿ ಅಶ್ರಫ್ ಫೈಝಿ ಮಿತ್ತಬೈಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ