ಕೆಲವರಿಗೆ ಇತರರಿಗಿಂತ ಹೆಚ್ಚು ಚಳಿಯಾಗುವುದೇಕೆ?
ಸಾಂದರ್ಭಿಕ ಚಿತ್ರ
ಚಳಿಗಾಲದಲ್ಲಿ ಕೆಲವರು ಮನೆಯಿಂದ ಹೊರಗೆ ಬೀಳುವಾಗ ಸ್ವೆಟರ್,ಶಾಲು ಇತ್ಯಾದಿಗಳನ್ನು ಧರಿಸಿಕೊಂಡಿರುತ್ತಾರೆ. ಇನ್ನು ಕೆಲವರು ಅವುಗಳ ಹಂಗಿಲ್ಲದೆ ಓಡಾಡುತ್ತಿರುತ್ತಾರೆ. ಹೀಗೇಕೆಂದು ಅಚ್ಚರಿಯೇ? ತಾಪಮಾನ ಮತ್ತು ಗಾಳಿ ಎಲ್ಲರಿಗೂ ಒಂದೇ ಆಗಿದ್ದರೂ ಕೆಲವರು ಹೆಚ್ಚು ಚಳಿಯನ್ನು ಅನುಭವಿಸುತ್ತಾರೆ. ಇದಕ್ಕೆ ಕಾರಣಗಳು ಇಲ್ಲಿವೆ.
ಶರೀರ ತಣ್ಣಗಾಗುವುದು ಮತ್ತು ತಂಪಿನ ಅನುಭವವಾಗುವುದು ಇವೆರಡರ ನಡುವೆ ವ್ಯತ್ಯಾಸವಿದೆಯೇ? ಹೌದು,ಇವೆರಡೂ ಬೇರೆ ಬೇರೆ ಸ್ಥಿತಿಗಳಾಗಿವೆ. ಶರೀರವು ತಣ್ಣಗಾಗುವುದು ಅಪಾಯಕಾರಿಯಾಗಿದ್ದರೆ,ತಂಪು ಅನುಭವಿಸುವುದರಲ್ಲಿ ಯಾವುದೇ ಅಪಾಯವಿಲ್ಲ. ಶರೀರದ ಉಷ್ಣತೆ ಸ್ವಲ್ಪವೇ ಕಡಿಮೆಯಾದರೂ ಅದು ಹೈಪೊಥರ್ಮಿಯಾ ಅಥವಾ ಲಘೂಷ್ಣತೆಗೆ ಕಾರಣವಾಗುತ್ತದೆ ಮತ್ತು ಇದು ಶರೀರಕ್ಕೆ ಗಂಭೀರ ಹಾನಿಯನ್ನುಂಟು ಮಾಡಬಹುದು. ಶರೀರದ ಉಷ್ಣತೆಯು ಸಹಜವಾಗಿದ್ದಾಗ,ಆದರೆ ಬಾಹ್ಯ ಅಂಶಗಳು ಚಳಿಯನ್ನುಂಟು ಮಾಡಿದರೆ ತಂಪಿನ ಅನುಭವವಾಗುತ್ತದೆ. ಅಲ್ಲದೆ,ಚಳಿಯಾದಾಗ ಶರೀರವು ಉಷ್ಣತೆಯನ್ನು ಕಾಯ್ದುಕೊಳ್ಳಲು ಪ್ರಯತ್ನಿಸುತ್ತದೆ,ಹೀಗಾಗಿ ಚಳಿಯು ಶರೀರದ ತಾಪಮಾನ ಹೆಚ್ಚುವಂತೆ ಮಾಡುತ್ತದೆ.
ಅತ್ಯಂತ ಚಳಿಯಾಗುತ್ತಿದ್ದರೆ ನೀವು ಬೆಚ್ಚಗಿನ ಉಡುಪನ್ನು ಧರಿಸಬಹುದು. ಬಿಸಿಯಾದ ಆಹಾರ ಮತ್ತು ಪಾನೀಯಗಳನ್ನು ಸೇವಿಸಬಹುದು. ತಲೆಗೆ ಟೊಪ್ಪಿಗೆ ಮತ್ತು ಕಾಲುಚೀಲಗಳನ್ನು ಧರಿಸಬಹುದು. ಸಕ್ರಿಯರಾಗಿದ್ದರೆ ಚಳಿಯು ಕಡಿಮೆಯಾಗುತ್ತದೆ.
* ಕಡಿಮೆ ಕೊಬ್ಬು
ಶರೀರದಲ್ಲಿ ಹೆಚ್ಚು ಕೊಬ್ಬು ಹೊಂದಿರುವವರಿಗೆ ತೀವ್ರ ಚಳಿಯಿಂದ ತೊಂದರೆಯಾಗದಿರುವ ಹೆಚ್ಚಿನ ಸಾಧ್ಯತೆಗಳಿರುತ್ತವೆ. ಶರೀರದಲ್ಲಿ ಕೊಬ್ಬು ಕಡಿಮೆಯಿರುವವರು ಇತರರಿಗಿಂತ ಹೆಚ್ಚು ಚಳಿಯನ್ನು ಅನುಭವಿಸುತ್ತಾರೆ. ಆರೋಗ್ಯಯುತ ಜನರಲ್ಲಿ ಶಾರೀರಿಕ ವ್ಯವಸ್ಥೆಗಳು ಹೈಪೊಥರ್ಮಿಯಾ ಉಂಟಾಗುವುದನ್ನು ತಡೆಯುತ್ತವೆ.
* ಹೈಪೊಥೈರಾಯ್ಡ್
ಹಲವರಲ್ಲಿ ಹೈಪೊಥೈರಾಯ್ಡ್ ಸಾಮಾನ್ಯ ಕಾಯಿಲೆಯಾಗಿರುತ್ತದೆ. ಇಂತಹವರಲ್ಲಿ ಅತಿಯಾಗಿ ಥೈರಾಯ್ಡ್ ಹಾರ್ಮೋನ್ಗಳು ಉತ್ಪತ್ತಿಯಾಗುತ್ತವೆ. ನಿಮ್ಮಲ್ಲಿ ಹೈಪೊಥೈರಾಯ್ಡಿನ ಯಾವುದೇ ಲಕ್ಷಣಗಳಿಲ್ಲದಿದ್ದಲ್ಲಿ,ಆದರೆ ಶರೀರದಲ್ಲಿ ಥೈರಾಯ್ಡ್ ಹಾರ್ಮೋನ್ಗಳು ಕಡಿಮೆ ಪ್ರಮಾಣದಲ್ಲಿದ್ದರೆ ಇದು ಹೆಚ್ಚು ಚಳಿಯುಂಟಾಗಲು ಕಾರಣವಾಗುತ್ತದೆ.
* ಲಿಂಗ
ಪುರುಷರಿಗಿಂತ ಮಹಿಳೆಯರು ಹೆಚ್ಚಾಗಿ ಚಳಿಯಿಂದ ಬಾಧೆ ಪಡುತ್ತಾರೆ. ಅವರ ಶರೀರದ ಉಷ್ಣತೆಯಲ್ಲಿ ಏರಿಳಿತವು ವಂಶವಾಹಿ ಅಂಶವಾಗಿರುತ್ತದೆ.
* ನಿದ್ರೆ ಮತ್ತು ಬಳಲಿಕೆ
ನಿಮಗೆ ಬಳಲಿಕೆಯಾಗುತ್ತಿದ್ದರೆ ಮತ್ತು ದಿನವಿಡೀ ನಿದ್ರಿಸುತ್ತಿದ್ದರೆ ನಿಮ್ಮ ಶರೀರವು ಸಾಕಷ್ಟು ಉಷ್ಣತೆಯನ್ನು ಉತ್ಪಾದಿಸುವುದಿಲ್ಲ. ಶರೀರವು ಸರಿಯಾಗಿ ಕಾರ್ಯ ನಿರ್ವಹಿಸಲು ಸೂಕ್ತ ನಿದ್ರೆಯ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.
* ವಯಸ್ಸು
ಕೆಲವರಿಗೆ ಇತರರಿಗಿಂತ ಹೆಚ್ಚು ಚಳಿಯಾಗಲು ವಯಸ್ಸು ಕೂಡ ಒಂದು ಕಾರಣವಾಗಿದೆ. ನಮಗೆ ವಯಸ್ಸಾಗುತ್ತ ಹೋದಂತೆ ಉಷ್ಣತೆಯನ್ನು ನಿಯಂತ್ರಿಸುವ ಶರೀರದ ಸಾಮರ್ಥ್ಯವೂ ಕಡಿಮೆಯಾಗುತ್ತ ಹೋಗುತ್ತದೆ.