ಉದ್ಯೋಗ ಇಲ್ಲದೆ ಮಾನಸಿಕ ಖಿನ್ನತೆಗೆ ಒಳಗಾದ ಪದವೀಧರನ ರಕ್ಷಣೆ
ಉಡುಪಿ, ನ.13: ಉದ್ಯೋಗ ಇಲ್ಲದೆ ಮಾನಸಿಕ ಖಿನ್ನತೆಗೆ ಒಳಗಾದ ಚಿತ್ರದುರ್ಗ ಜಿಲ್ಲೆಯ ಪದವೀಧರರೊಬ್ಬರನ್ನು ಉಡುಪಿಯ ಸಾಮಾಜಿಕ ಕಾರ್ಯಕರ್ತರು ಗುರುವಾರ ಉಡುಪಿ ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ರಕ್ಷಿಸಿ ದೊಡ್ಡಣಗುಡ್ಠೆ ಡಾ. ಎ.ವಿ.ಬಾಳಿಗ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ನಿವಾಸಿಯಾದ ಈ ವ್ಯಕ್ತಿ ಡಿಪ್ಲೋಮಾ ಪದವೀಧರರಾಗಿದ್ದು, ಉದ್ಯೋಗ ಇಲ್ಲದೆ ಮಾನಸಿಕವಾಗಿ ನೊಂದು ಮನೆ ಬಿಟ್ಟು ಬಂದಿದ್ದಾರೆ. ಇವರನ್ನು ಸಮಾಜ ಸೇವಕರಾದ ವಿಶು ಶೆಟ್ಟಿ ಅಂಬಲಪಾಡಿ, ತಾರಾನಾಥ್ ಮೇಸ್ತ ಶಿರೂರು ಅವರು ರಕ್ಷಿಸಿದ್ದು, ಐಸಿರಿ ಸುರೇಂದ್ರ ಕುಕ್ಯಾನ್ ಸಹಕರಿಸಿದ್ದಾರೆ.
ಯುವಕ ಪತ್ತೆಯಾಗಿರುವ ವಿಷಯವನ್ನು ಹೆತ್ತವರಿಗೆ ತಿಳಿಸಿದ್ದು, ಮಗನ ಹುಡುಕಾಟ ನಡೆಸುತ್ತಿದ್ದ ಹೆತ್ತವರು ಉಡುಪಿಗೆ ಬರುವುದಾಗಿ ಹೇಳಿಕೊಂಡಿ ದ್ದಾರೆ.
Next Story