ದ.ಕ. ಜಿಲ್ಲೆ: ಎರಡಂಕೆಗೆ ಇಳಿದ ಕೋವಿಡ್ ಸೋಂಕಿತರ ಸಂಖ್ಯೆ
ಮಂಗಳೂರು, ನ.14: ದ.ಕ.ಜಿಲ್ಲೆಯಲ್ಲಿ ಶನಿವಾರ ಕೋವಿಡ್ ಸೋಂಕಿತರ ಸಂಖ್ಯೆ ಎರಡಂಕೆಗೆ ಮತ್ತು ಮೃತಪಟ್ಟವರ ಸಂಖ್ಯೆ ಒಂದಂಕೆಗೆ ಇಳಿದಿದೆ. ಶನಿವಾರ 40 ಮಂದಿಗೆ ಕೊರೋನ ಪಾಸಿಟಿವ್ ಆಗಿದ್ದು, ಒಬ್ಬರು ಮೃತಪಟ್ಟಿದ್ದಾರೆ.
ಈವರೆ 2,98,352 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದೆ. ಆ ಪೈಕಿ 2,67,127 ಮಂದಿಯ ವರದಿ ನೆಗೆಟಿವ್ ಮತ್ತು 31,225 ಮಂದಿಯ ವರದಿ ಪಾಸಿಟಿವ್ ಬಂದಿದೆ. ಅಲ್ಲದೆ ಶನಿವಾರ 92 ಮಂದಿ ಗುಣಮುಖರಾಗಿದ್ದಾರೆ. ಒಟ್ಟಾರೆ ಈವರೆಗೆ ಗುಣಮುಖರಾದವರ ಸಂಖ್ಯೆ 29,714ಕ್ಕೇರಿದೆ. ಅಲ್ಲದೆ ಮೃತಪಟ್ಟವರ ಸಂಖ್ಯೆ 691ಕ್ಕೇರಿದೆ. ಶನಿವಾರದವರೆಗೆ ಜಿಲ್ಲೆಯಲ್ಲಿ 820 ಸಕ್ರಿಯ ಪ್ರಕರಣಗಳಿವೆ.
ಮಾಸ್ಕ್ ಧರಿಸದೆ ಕೋವಿಡ್ -19 ನಿಯಮ ಉಲ್ಲಂಘಿಸಿದ ಘಟನೆಗೆ ಸಂಬಂಧಿಸಿ ಈವರೆಗೆ 12,770 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ 13,86,057 ರೂ.ವನ್ನು ಸಂಗ್ರಹಿಸಲಾಗಿದೆ.
Next Story