ಜೆ.ಎಂ ಫ್ಯಾಮಿಲಿ ನಾವೂರು: ಕುಟುಂಬ ಸಮ್ಮಿಲನ
ಮದ್ದಡ್ಡ: ಜೆ.ಎಂ ಫ್ಯಾಮಿಲಿ ನಾವೂರು ಇದರ ಕುಟುಂಬ ಸಮ್ಮಿಲನ ಕಾರ್ಯಕ್ರಮ ನ.11 ರಂದು ಮದ್ದಡ್ಕದ ಲಾಡಿ ಅಬೂಬಕ್ಕರ್ ಅವರ ಮನೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಟುಂಬದ ಹಿರಿಯರಾದ ಜೆ. ಮಹಮ್ಮದ್ ನಾವೂರು ವಹಿಸಿದ್ದರು. ಕುಟುಂಬದ ಹಿರಿಯ ಮೊಮ್ಮಗ ಅಬ್ದುಲ್ ಖಾದರ್ ಮದನಿ ಕನ್ಯಾರಕೋಡಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.
ಲಾಕ್ಡೌನ್ ಅವಧಿಯಲ್ಲಿ ಕುಟುಂಬದ ಸದಸ್ಯರಿಗಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದವರಿಗೆ ಈ ವೇಳೆ ಬಹುಮಾನ ವಿತರಣಾ ಸಮಾರಂಭವೂ ನಡೆಯಿತು.
ಕಾರ್ಯಕ್ರಮದಲ್ಲಿ ಶಾಹುಲ್ ಹಮೀದ್ ಇಂದಬೆಟ್ಟು, ಇಸ್ಮಾಯಿಲ್ ಮದನಿ ನಾವೂರು, ನಾಸಿರುದ್ದೀನ್ ನಾವೂರು, ಶರಫುದ್ದೀನ್ ನಾವೂರು, ಸಿರಾಜುದ್ದೀನ್ ನಾವೂರು, ಹಮೀದ್ ಬೆಳಾಲು, ಇಬ್ರಾಹಿಂ ನಾವೂರು, ಅಬೂಬಕ್ಕರ್ ಲಾಡಿ, ಮಹಮ್ಮದ್ ಮದನಿ ದಿಡುಪೆ, ದಾವೂದ್ ಚಕ್ಕಮಕ್ಕಿ, ಅಬ್ದುರ್ರಹ್ಮಾನ್ ಫೈಝಿ ಕುಂಟಿನಿ ಹಾಜರಿದ್ದರು. ರಾಶಿದ್ ಅಹ್ಮದ್ ಡಿ.ಸಿ ಸ್ವಾಗತಿಸಿ ವಂದಿಸಿದರು.
Next Story