ಎಲ್ಲ ವರ್ಗದ ಜನರ ಆರೋಗ್ಯ ರಕ್ಷಣೆಯಲ್ಲಿ ಸರಕಾರ ವಿಫಲ: ಡಿ.ಕೆ.ಶಿವಕುಮಾರ್
ಬೆಂಗಳೂರು, ನ.22: 'ರಾಜ್ಯದ ಎಲ್ಲ ವರ್ಗದ ಜನರ ಆರೋಗ್ಯ ರಕ್ಷಣೆ ಸರಕಾರದ ಜವಾಬ್ದಾರಿ. ಆದರೆ ಈ ವಿಚಾರದಲ್ಲಿ ಸರಕಾರ ವಿಫಲವಾಗಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಅವರು ರವಿವಾರ ಬಳ್ಳಾರಿಯ ಹೊಸಪೇಟೆಗೆ ತೆರಳುವ ಮಾರ್ಗಮಧ್ಯೆ ಹಿರಿಯೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಹೊಸ ಜಿಲ್ಲೆ ರಚನೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ನೂತನ ಜಿಲ್ಲೆ ರಚನೆ ಬಗ್ಗೆ ಮಾಹಿತಿ ಇಲ್ಲ. ಈವರೆಗೂ ಸರಕಾರ ಆದೇಶ ಹೊರಡಿಸಿಲ್ಲ. ಈ ಬಗ್ಗೆ ಅಧಿಕೃತ ಆದೇಶ ಬಂದ ನಂತರ ನಾನು ಮಾತನಾಡುತ್ತೇನೆ' ಎಂದರು.
Next Story