ಡಿ. 6 :ಆನ್‌ಲೈನ್ ಸಲಫಿ ಸಮ್ಮೇಳನದ ಘೋಷಣಾ ಸಮಾವೇಶ
ಮಂಗಳೂರು : ವಿಸ್ಡಮ್ ಇಸ್ಲಾಮಿಕ್ ಆರ್ಗನೈಝೇಶನ್ ಇದರ ವತಿಯಿಂದ 2021ರ ಎ.1, 2, 3 ಮತ್ತು 4ರಂದು ಜರಗಲಿರುವ ಆನ್‌ಲೈನ್ ಸಮ್ಮೇಳನದ ಮಂಗಳೂರು ಪ್ರಾದೇಶಿಕ ಪೂರ್ವಭಾವೀ ಸಭೆಯು ಝೂಮ್ ಆನ್‌ಲೈನ್ ವೇದಿಕೆಯ ಮೂಲಕ ನಡೆಯಿತು.
ಇಸ್ಲಾಮಿನ ಏಕ ದೇವ ವಿಶ್ವಾಸ ಮತು ಶಾಂತಿಯ ಸಂದೇಶವನ್ನು ಜನಮಾನಸಕ್ಕೆ ತಲುಪಿಸುವ ಮಹತ್ತಾದ ಉದ್ದೇಶದಿಂದ ಆಯೋಜಿಸಲಾಗಿರುವ ಆನ್‌ಲೈನ್ ಸಮ್ಮೇಳನದ ಭಾಗವಾಗಿ ನಡೆಯಲಿರುವ ವಿವಿಧ ಚಟುವಟಿಕೆಗಳ ಕುರಿತು ವಿಸ್ಡಮ್ ಇಸ್ಲಾಮಿಕ್ ಆರ್ಗನೈಝೇಶನ್ ಇದರ ಕೇರಳ ರಾಜ್ಯ ನಾಯಕರಾದ ಟಿ.ಕೆ. ಆಶ್ರಫ್ ವಿವರಿಸಿದರು.
ಸಮ್ಮೇಳನದ ಭಾಗವಾಗಿ ವಿವಿಧ ಭಾಷೆಗಳಲ್ಲಿ ಪ್ರಚಾರ ಸಭೆಗಳು ಮತ್ತು ಇತರ ಕಾರ್ಯಕ್ರಮಗಳು ನಡೆಯಲಿದ್ದು, ಸಮ್ಮೇಳನದ ಘೋಷಣಾ ಸಮಾವೇಶವು ಡಿ. 6ರಂದು ಜರಗಲಿದ್ದು ಇದರ ನೇರಪ್ರಸಾರವನ್ನುWisdom Islamic Organisation facebook page ಮತ್ತು Wisdom Global TV YouTube Channel ನಲ್ಲಿ ಆಲಿಸಬಹುದು.
ಸಮ್ಮೇಳನದ ರೂಪುರೇಶೆಗಳ ಕುರಿತು ಸಿ.ಪಿ.ಸಲೀಂ ಸಭೆಗೆ ತಿಳಿಸಿದರು. ಇಸ್ಲಾಮೀ ಬೋಧನಾ ಚಟುಚಟಿಕೆಗಳ ಪ್ರಾಮುಖ್ಯತೆಯನ್ನು ಹುಸೈನ್ ಸಲಫಿ ಅವರು ಶಾರ್ಜಾದಿಂದ ಮಾತನಾಡುತ್ತಾ ಸಭೆಗೆ ವಿವರಿಸಿದರು.
ಸಭೆಯಲ್ಲಿ ಕರ್ನಾಟಕ ಸಲಫಿ ಎಸೋಸಿಯೇಷನ್(ರಿ), ಮಂಗಳೂರು ಇದರ ಅಧ್ಯಕ್ಷರಾದ ಅಬ್ದುರಶೀದ್ ಇಂಜಿನಿಯರ್ ಮತ್ತು ವಿವಿಧ ಪ್ರದೇಶಗಳಿಂದ ಕೆಸ್‌ಎಯ ಕಾರ್ಯಕರ್ತರು ಭಾಗವಹಿಸಿದರು. ಕರ್ನಾಟಕ ಸಲಫಿ ಎಸೋಸಿಯೇಷನ್(ರಿ), ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಮೌಲವಿ ಇಜಾಝ್ ಸ್ವಲಾಹಿ ಸ್ವಾಗತಿಸಿ, ಅನ್ಫಾಝ್ ವಂದಿಸಿದರು.