'ದುಬೈ ಹೆಮ್ಮೆಯ ಯುಎಇ ಕನ್ನಡಿಗರು' ತಂಡದಿಂದ ಇಂದು ರಕ್ತದಾನ ಶಿಬಿರ
ಅಬುಧಾಬಿ, ಡಿ.3: ಕನ್ನಡ ರಾಜ್ಯೋತ್ಸವ ಮತ್ತು ಯುಎಇ ರಾಷ್ಟ್ರೀಯ ದಿನಾಚರಣೆ ಪ್ರಯುಕ್ತ ದುಬೈ ಹೆಮ್ಮೆಯ ಯುಎಇ ಕನ್ನಡಿಗರು ತಂಡದ ವತಿಯಿಂದ ರಕ್ತದಾನ ಶಿಬಿರವನ್ನು ಡಿ.3ರಂದು ದುಬೈ ಹೆಲ್ತ್ ಕೇರ್ ಸಿಟಿಯಲ್ಲಿರುವ ಶೇಖ್ ಲತೀಫಾ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂದು ಅಪರಾಹ್ನ 2ರಿಂದ ರಾತ್ರಿ 8 ಗಂಟೆಯ ವರೆಗೆ ಶಿಬಿರ ನಡೆಯಲಿದೆ ದುಬೈ ಹೆಮ್ಮೆಯ ಕನ್ನಡಿಗರು ತಂಡದ ಅಧ್ಯಕ್ಷ ಸುದೀಪ್ ದಾವಣಗೆರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story