ಕೆಸಿಎಫ್ ವತಿಯಿಂದ ಯುಎಇ ರಾಷ್ಟ್ರೀಯ ದಿನಾಚರಣೆ ಮತ್ತು ವಿಶೇಷ ಪುರವಣಿ ಬಿಡುಗಡೆ
ಯುಎಇ: ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ವತಿಯಿಂದ ಯುಎಇ 49ನೇ ರಾಷ್ಟ್ರೀಯ ದಿನವನ್ನು ಆಚರಿಸಲಾಯಿತು.
ನೂರಾರು ಅನಿವಾಸಿ ಕನ್ನಡಿಗರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ, ಕರ್ನಾಟಕ ಮಾಜಿ ವಿಧಾನಸಭಾ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್, ಮಾಜಿ ಪೊಲೀಸ್ ಕಮಿಷನರ್ ಜಿ.ಎ ಬಾವಾ, ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಶಾಫೀ ಸಅದಿ ಬೆಂಗಳೂರು, ಯುಎಇಯ ಖ್ಯಾತ ಬರಹಗಾರ ಅಹ್ಮದ್ ಇಬ್ರಾಹೀಂ, ನಾಸರ್ ವಾನಿಯಂಬಳಂ, ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷ ಡಾ.ಶೈಖ್ ಬಾವ ಮಂಗಳೂರು, ಹಮೀದ್ ಸಅದಿ ಈಶ್ವರಮಂಗಿಲಂ, ಪಿ.ಎಂ.ಎಚ್ ಹಮೀದ್, ಇಬ್ರಾಹೀಂ ಹಾಜಿ ಬ್ರೈಟ್ ಮಾರ್ಬಲ್ ಪಾಲ್ಗೊಂಡಿದ್ದರು.
ಕೋವಿಡ್-19 ಸಂದರ್ಭದಲ್ಲಿ ಅನಿವಾಸಿ ಕನ್ನಡಿಗರಿಗಾಗಿ ಕೆಸಿಎಫ್ ನಡೆಸಿದ ಮಾನವೀಯ ಸೇವೆಗಳನ್ನು ಮತ್ತು ಕೆಸಿಎಫ್ ಯೋಜನೆಗಳನ್ನು ಪರಿಚಯಿಸುವ “ಕೆಸಿಎಫ್ ಭರವಸೆಯ ಬೆಳಕು” ವಿಶೇಷ ಪುರವಣಿಯನ್ನು ರಮೇಶ್ ಕುಮಾರ್ ಬಿಡುಗಡೆ ಗೊಳಿಸಿದರು.
ಕೆಸಿಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದರು. ಮೂಸ ಹಾಜಿ ಸ್ವಾಗತಿಸಿ, ಇಕ್ಬಾಲ್ ಕಾಜೂರು ಸಾಂದರ್ಭಿಕವಾಗಿ ಮಾತನಾಡಿದರು. ಎನ್.ಕೆ ಸಿದ್ದೀಕ್ ಅಳಿಕೆ ವಂದಿಸಿದರು.