ಅಂದರ್ ಬಾಹರ್: ಆರು ಮಂದಿ ಸೆರೆ
ಕಾಪು, ಡಿ.4: ಪಾಂಗಾಳ ಗ್ರಾಮದ ಪಾಂಗಾಳಗುಡ್ಡೆ ಎಂಬಲ್ಲಿ ಡಿ.3ರಂದು ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ ಆರು ಮಂದಿಯನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಪಾಂಗಾಳಗುಡ್ಡೆಯ ಸಂದೇಶ(30), ಕಟಪಾಡಿ ಮಟ್ಟುವಿನ ಹರೀಶ(44), ಉಮೇಶ(32), ಪಾಂಗಾಳದ ರಾಜೇಶ(39), ಪ್ರಸಾದ(32), ಮಹೇಶ (39) ಬಂಧಿತ ಆರೋಪಿಗಳು. ಇವರಿಂದ 11,075ರೂ. ನಗದು ವಶಪಡಿಸಿಕೊಳ್ಳ ಲಾಗಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story