ಕತರ್ ಬಹಿಷ್ಕಾರ ತೆರವು ಮಾತುಕತೆಯಲ್ಲಿ ಪ್ರಗತಿ: ಸೌದಿ ಅರೇಬಿಯ
ರಿಯಾದ್ (ಸೌದಿ ಅರೇಬಿಯ), ಡಿ. 5: ಕೊಲ್ಲಿ ಅರಬ್ ದೇಶಗಳು ಕತರ್ ವಿರುದ್ಧ ವಿಧಿಸಿರುವ ಮೂರು ವರ್ಷಗಳ ಬಹಿಷ್ಕಾರವು ಕೊನೆಗೊಳ್ಳುವ ಹಂತದಲ್ಲಿದೆ ಎಂಬ ಭರವಸೆಯನ್ನು ಸೌದಿ ಅರೇಬಿಯದ ವಿದೇಶ ಸಚಿವ ರಾಜಕುಮಾರ ಫೈಸಲ್ ಬಿನ್ ಫರ್ಹಾನ್ ಹೇಳಿದ್ದಾರೆ.
ಖತರ್ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ, ಸೌದಿ ಅರೇಬಿಯ, ಯುಎಇ, ಬಹರೈನ್ ಮತ್ತು ಈಜಿಪ್ಟ್ ದೇಶಗಳು 2017ರ ಜೂನ್ ತಿಂಗಳಲ್ಲಿ ಆ ದೇಶದೊಂದಿಗಿನ ರಾಜತಾಂತ್ರಿಕ ಹಾಗೂ ವ್ಯಾಪಾರ ಸಂಬಂಧಗಳನ್ನು ಕಡಿದುಕೊಂಡಿದ್ದವು.
‘‘ಕಳೆದ ಕೆಲವು ದಿನಗಳಲ್ಲಿ ನಾವು ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದೇವೆ’’ ಎಂದು ಶುಕ್ರವಾರ ಇಟಲಿಯ ವಾರ್ಷಿಕ ‘ಮೆಡಿಟರೇನಿಯನ್ ಡಯಲಾಗ್ಸ್’ನಲ್ಲಿ ಮಾತನಾಡಿದ ರಾಜಕುಮಾರ ಫೈಸಲ್ ಬಿನ್ ಫರ್ಹಾನ್ ಹೇಳಿದರು.
ಆದರೆ, ಬಹಿಷ್ಕಾರ ಹಾಕಿರುವ ಇತರ ದೇಶಗಳಾದ ಬಹರೈನ್, ಯುಎಇ ಮತ್ತು ಈಜಿಪ್ಟ್‌ಗಳು, ಮಾತುಕತೆಯಲ್ಲಿ ಪ್ರಗತಿಯಾಗಿರುವುದನ್ನು ತಕ್ಷಣಕ್ಕೆ ಅನುಮೋದಿಸಿಲ್ಲ.
Next Story