ಸಿಪ್ರಿಯಾನ್ ಮೊಂತೇರೊಗೆ ಪಿಎಚ್ಡಿ ಪದವಿ
ಮಂಗಳೂರು, ಡಿ.7: ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಹಾಗೂ ಮಂಗಳೂರು ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಸಿಪ್ರಿಯಾನ್ ಮೊಂತೇರೊ ಮಂಡಿಸಿದ ‘ಪ್ರೌಢಶಾಲೆಗಳಲ್ಲಿ ಅನುಷ್ಠಾನಗೊಂಡಿರುವ ಐಸಿಟಿ (ಹಂತ-1 ಮತ್ತು ಹಂತ-2) ಮೌಲ್ಯ ಮಾಪನಾತ್ಮಕ ಅಧ್ಯಯನ’ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿಎಚ್ಡಿ ಪದವಿ ನೀಡಿ ಗೌರವಿಸಿದೆ.
ಇವರಿಗೆ ಅಸೋಸಿಯೇಟ್ ಪ್ರೊಫೆಸರ್ (ನಿವೃತ್ತ) ಡಾ.ಶಶಿಕಲಾ ಮಾರ್ಗದರ್ಶನ ನೀಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story