ಜಿಟಿಎಂಡ್ಟಿಸಿನಲ್ಲಿ ಉಚಿತ ತಾಂತ್ರಿಕ ತರಬೇತಿಗೆ ಅರ್ಜಿ ಆಹ್ವಾನ
ಉಡುಪಿ, ಡಿ.8: ಉಪ್ಪೂರಿನ ಕೊಳಲಗಿರಿಯಲ್ಲಿರುವ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಎಸೆಸೆಲ್ಸಿ, ಐಟಿಐ, ಡಿಪ್ಲೋಮಾ ಹಾಗೂ ಬಿಇ ಪಾಸಾದ ಅ್ಯರ್ಥಿಗಳಿಂದ ಸಿಎನ್ಸಿ ಟೆಕ್ನಾಲಜಿಸ್ಟ್, ಮಾಸ್ಟರ್ ಇನ್ ಸಿಎನ್ಸಿ, ಟರ್ನರ್, ಮಿಲ್ಲರ್ ಮತ್ತು ಕ್ಯಾಡ್ಕ್ಯಾಮ್ ಸ್ಪೆಷಾಲಿಸ್ಟ್ ಕೋರ್ಸ್ಗಳ ಉಚಿತ ತಾಂತ್ರಿಕ ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಅ್ಯರ್ಥಿಗಳು ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಡಿ.31 ಕೊನೆಯ ದಿನವಾಗಿದ್ದು, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0820-2950101, 9880510585ನ್ನು ಸಂಪರ್ಕಿಸುವಂತೆ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ.
Next Story