ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ವತಿಯಿಂದ ಕ್ಲೀನ್ ಆಫ್ ದಿ ವರ್ಲ್ಡ್-2020
ಯುಎಇ: ದುಬೈ ಮಹಾನಗರ ಪಾಲಿಕೆಯ ಆಹ್ವಾನದ ಮೇರೆಗೆ ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ವತಿಯಿಂದ ಕ್ಲೀನ್ ಆಫ್ ದಿ ವರ್ಲ್ಡ್ ಕ್ಯಾಂಪೇನ್-2020, ಡಿ.4ರಂದು ಶುಕ್ರವಾರ ಬೆಳಗ್ಗೆ ಕೆಸಿಎಫ್ ನಾಯಕರ ಮತ್ತು ಕಾರ್ಯಕರ್ತರ ಸಹಕಾರದಲ್ಲಿ ಮನ್ಝರ್ ಬೀಚ್ ನಲ್ಲಿ ನಡೆಯಿತು.
ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿರವರ ದುವಾದೊಂದಿಗೆ ಅಭಿಯಾನ ಪ್ರಾರಂಭಿಸಲಾಯಿತು. ದುಬೈ ಮಹಾನಗರಪಾಲಿಕೆಯ ಅಧಿಕಾರಿಯೋರ್ವರು ಮಾತನಾಡಿ, ಅಭಿಯಾನದಲ್ಲಿ ಪಾಲ್ಗೊಂಡ ಎಲ್ಲಾ ಸದಸ್ಯರನ್ನು ಪ್ರಶಂಸಿಸಿದರು. ಕೆಸಿಎಫ್ ರಾಷ್ಟ್ರೀಯ ಅಧ್ಯಕ್ಷರು ಸ್ವಚ್ಛತಾ ಕಾರ್ಯದ ಪ್ರಾಮುಖ್ಯತೆ ಬಗ್ಗೆ ವಿವರಿಸಿದರು.
ರಾಷ್ಟ್ರೀಯ ವೆಲ್ಫೇರ್ ಅಧ್ಯಕ್ಷ ಝೈನುದ್ದೀನ್ ಹಾಜಿ ಶಾರ್ಜಾ ಮಾತನಾಡಿ, ವೆಲ್ಫೇರ್ ಸಮಿತಿಯು ನಡೆಸುತ್ತಿರುವ ಹಲವಾರು ಸಾಂತ್ವನ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ಕೆಸಿಎಫ್ ಅಂತರ್ರಾಷ್ಟ್ರೀಯ ಸಮಿತಿ ನಾಯಕ ಉಸ್ಮಾನ್ ಹಾಜಿ ನಾಪೋಕ್ಲು, ರಾಷ್ಟ್ರೀಯ ನಾಯಕರಾದ ಮೂಸ ಹಾಜಿ ಬಸರ, ಇಕ್ಬಾಲ್ ಕಾಜೂರು, ರಫೀಕ್ ಜಪ್ಪು, ರಫೀಕ್ ಕಲ್ಲಡ್ಕ, ಯು.ಟಿ ನೌಷಾದ್ ಹಾಗೂ ರಾಷ್ಟ್ರೀಯ ನಾಯಕರು, ದುಬೈ ನೋರ್ತ್ ಝೋನ್ ಅಧ್ಯಕ್ಷ ಇಸ್ಮಾಯಿಲ್ ಮದನಿ ನಗರ, ದುಬೈ ಸೌತ್ ಝೋನ್ ಅಧ್ಯಕ್ಷ ಅಝೀಝ್ ಅಹ್ಸನಿ, ಶಾರ್ಜಾ ಝೋನ್ ಅಧ್ಯಕ್ಷ ಅಬೂಸ್ವಾಲಿಹ್ ಮುಸ್ಲಿಯಾರ್, ಝೋನ್ ನಾಯಕರು ಹಾಗೂ ಸೆಕ್ಟರ್ ನಾಯಕರು ಉಪಸ್ಥಿತರಿದ್ದರು. 150ಕ್ಕೂ ಹೆಚ್ಚು ಸದಸ್ಯರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ರಿಫಾಈ ಗೂನಡ್ಕ ಕಾರ್ಯಕ್ರಮ ನಿರೂಪಣೆ ಮಾಡಿದರು. ಅಬ್ದುಲ್ ರೆಹಮಾನ್ ಕೋಡಿ ಧನ್ಯವಾದ ಸಮರ್ಪಿಸಿದರು.