ಕತರ್ ರಾಷ್ಟ್ರೀಯ ದಿನಾಚರಣೆ : ಕ್ಯೂಐಎಸ್ಎಫ್ ವತಿಯಿಂದ ರಕ್ತದಾನ ಶಿಬಿರ
ದೋಹಾ : ಕತರ್ ರಾಷ್ಟ್ರೀಯ ದಿನಾಚರಣೆಯ ಪ್ರಯುಕ್ತ ಕತರ್ ಇಂಡಿಯನ್ ಸೋಶಿಯಲ್ ಫೋರಮ್ (ಕ್ಯೂಐಎಸ್ಎಫ್), ಬ್ಲಡ್ ಡೋನರ್ಸ್ ಮಂಗಳೂರು, ವಾರಿಯರ್ಸ್ ಕ್ರೀಡಾ ಕೇಂದ್ರ ಹಾಗೂ ಹಮದ್ ವೈದ್ಯಕೀಯ ನಿಗಮದ ಸಹಯೋಗದೊಂದಿಗೆ ದೋಹಾದಲ್ಲಿ ಶುಕ್ರವಾರ ರಕ್ತದಾನ ಶಿಬಿರ ಆಯೋಜಿಸಿತ್ತು.
ಕ್ಯೂಐಎಸ್ಎಫ್ ಕರ್ನಾಟಕ ರಾಜ್ಯ ಅಧ್ಯಕ್ಷ ನಝೀರ್ ಪಾಷಾ ಸ್ವಾಗತಿಸಿದರು. ಇಂಡಿಯನ್ ಕಮ್ಯುನಿಟಿ ಬೆನೆವೊಲೆಂಟ್ ಫೋರಮ್ (ಐಸಿಬಿಎಫ್) ಅಧ್ಯಕ್ಷ ಪಿ.ಎನ್. ಬಾಬುರಾಜನ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು.
'ಕ್ಯೂಐಎಸ್ಎಫ್' ಪ್ರಾರಂಭದಿಂದಲೂ ಮಾನವೀಯ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಇಂತಹ ಸಾಮೂಹಿಕ ಕಾರ್ಯಕ್ರಮವನ್ನು ಆಯೋಜಿಸಲು ಪ್ರತಿಯೊಬ್ಬರ ಪ್ರಯತ್ನ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಅಗತ್ಯವಿದ್ದಾಗ ಸಂಪೂರ್ಣ ಬೆಂಬಲ ನೀಡುವೆ ಎಂದು ಬಾಬುರಾಜನ್ ಹೇಳಿದರು.
ರಾವದತ್ ಅಲ್ ಖೈರ್ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಅಮಿತ್ ವರ್ಮಾ ರಕ್ತ ದಾನಿಗಳನ್ನು ಪ್ರೇರೇಪಿಸಿದರು. ಒಬ್ಬ ವ್ಯಕ್ತಿ ರಕ್ತದಾನ ಮಾಡಿದರೆ ಮೂರು ಜೀವಗಳನ್ನು ಉಳಿಸುತ್ತಾನೆ. ದಾನ ಮಾಡಿದ ರಕ್ತವನ್ನು ಕೆಂಪುಕೋಶಗಳು, ಪ್ಲೇಟ್ಲೆಟ್ ಗಳು ಹಾಗೂ ಪ್ಲಾಸ್ಮಾ ಎಂದು ವರ್ಗೀಕರಿಸಲಾಗುತ್ತದೆ ಎಂದು ಡಾ.ಅಮಿತ್ ವರ್ಮಾ ತಿಳಿಸಿದರು.
ಈ ಸಂದರ್ಭ 145 ಮಂದಿ ರಕ್ತದಾನ ಮಾಡಿದರು.
ಕ್ಯೂಐಎಸ್ಎಫ್ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಶೀರ್ ಅಹ್ಮದ್, ಕ್ಯೂಐಎಸ್ಎಫ್ ರಾಜ್ಯ ಹಾಗೂ ಶಾಖಾ ಸಮಿತಿ ಸದಸ್ಯರಾದ ಲತೀಫ್ ಮಡಿಕೇರಿ, ಝಕಾರಿಯಾ ಪಾಂಡೇಶ್ವರ, ನಯೀಮ್ ಬೆಳಪು, ಖಾಲಿದ್ ಬೆಳಪು, ನೌಫಲ್ ಪುತ್ತೂರು, ಅನ್ವರ್ ಅಂಗರಗುಂಡಿ, ರಿಝ್ವಾನ್ ಕಲ್ಲಡ್ಕ, ರಫೀಕ್ ಉಪ್ಪಿನಂಗಡಿ, ನವೀದ್, ಅನ್ವರ್ ಬೋಳಿಯಾರ್, ಖಲಂದರ್ ಶಾ, ಜುನೈದ್, ಶಬ್ಬೀರ್, ಶವಾಝ್ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.
ಕ್ಯೂ ಐಎಸ್ಎಫ್ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಹಾಗೂ ಕೆಎಂಸಿಎ ಉಪಾಧ್ಯಕ್ಷರಾದ ಝಿಯಾವುಲ್ ಹಕ್ ಕಾರ್ಯಕ್ರಮ ನಿರೂಪಿಸಿದರು.