ಕಾಸರಗೋಡು : ಮೆಡಿಕಲ್ ಶಾಪ್, ತರಕಾರಿ ಅಂಗಡಿಯಿಂದ ಕಳವು
ಕಾಸರಗೋಡು : ಮೆಡಿಕಲ್ ಶಾಪ್ ಮತ್ತು ತರಕಾರಿ ಅಂಗಡಿಗೆ ನುಗ್ಗಿ ನಗದು ಕಳವುಗೈದ ಘಟನೆ ಕಾಸರಗೋಡು ನಗರದಲ್ಲಿ ಶನಿವಾರ ಬೆಳಕಿಗೆ ಬಂದಿದೆ.
ಎಂ . ಜಿ ರಸ್ತೆಯಲ್ಲಿರುವ ಟಿ.ಎ ಅಬ್ದುಲ್ಲ ಅವರ ಮಾಲಕತ್ವದ ಮೆಡಿಕಲ್ ಶಾಪ್ ಮತ್ತು ಸಮೀಪ ಇರುವ ವಿಜಯನ್ ಎಂಬವರ ತರಕಾರಿ ಅಂಗಡಿಗೆ ನುಗ್ಗಿ ಕೃತ್ಯ ನಡೆಸಲಾಗಿದೆ. ಎರಡೂ ಅಂಗಡಿಯ ಹಿಂಬದಿಯ ಗೋಡೆ ಕೊರೆದು ಈ ಕೃತ್ಯ ನಡೆಸಲಾಗಿದೆ. ಬೆಳಗ್ಗೆ ಬಾಗಿಲು ತೆರೆದು ಒಳ ಬಂದ ಬಳಿಕ ಕೃತ್ಯ ಬೆಳಕಿಗೆ ಬಂದಿದೆ.
ಮೆಡಿಕಲ್ ಶಾಪ್ ನಲ್ಲಿದ್ದ 60 ಸಾವಿರ ರೂ . ನಗದು ಮತ್ತು ಅಂಗಡಿಯಲ್ಲಿದ್ದ ಆರು ಸಾವಿರ ರೂ . ನಗದು ಕಳವು ಮಾಡಲಾಗಿದೆ . ಕಾಸರಗೋಡು ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.