ಬೆಳ್ಮ ಬಡಕಬೈಲ್ ತಾಜುಲ್ ಉಲಮಾ ಮಸೀದಿ ಉದ್ಘಾಟನೆ
ಉಳ್ಳಾಲ : ಅನ್ನಜಾತ್ ಎಜ್ಯುಕೇಶನ್ ಟ್ರಸ್ಟ್ ಬೆಳ್ಮ ಬಡಕಬೈಲ್ ಮತ್ತು ಇಂಡಿಯಾನ್ ಗ್ರ್ಯಾಂಡ್ ಸುಲ್ತಾನುಲ್ ಉಲಮಾ ಸಾರಥ್ಯದಲ್ಲಿ ನಿರ್ಮಾಣವಾದ ತಾಜುಲ್ ಉಲಮಾ ಮಸೀದಿಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಸಯ್ಯದ್ ಖುರ್ರತುಸ್ಸಾದಾತ್ ಫಝಲ್ ಕೋಯಮ್ಮ ಕೂರತ್ ತಂಙಳ್ ಬೆಳ್ಮ ಬಡಕಬೈಲ್ ತಾಜುಲ್ ಉಲಮಾ ಮಸೀದಿಯನ್ನು ಉದ್ಘಾಟಿಸಿದರು. ಮುಡಿಪು ಎಜ್ಯು ಮಾಕ್೯ ಸಂಸ್ಥೆಯ ಅಧ್ಯಕ್ಷ ಅಸ್ಸಯ್ಯಿದ್ ಅಶ್ರಫ್ ಅಸ್ಸಖಾಫ್ ತಂಙಳ್ ಅದೂರು ದುಅ ಆಶಿರ್ವಚನ ಗೈದರು. ಬೆಳ್ಮ ಕೇಂದ್ರ ಜುಮಾ ಮಸೀದಿ ಖತೀಬ್ ಅದಂ ಫೈಝಿ ಬದ್ರ್ ಮೌಲಿದ್ ಮಜ್ಲಿಸ್ ಗೆ ನೇತೃತ್ವ ವಹಿಸಿದರು.
ಹುಸೈನ್ ಸಅದಿ ಕೆ.ಸಿ ರೋಡು ಮುಖ್ಯ ಪ್ರಭಾಷಣಗೈದರು. ಆರ್ ಸಿಎಫ್ ಕೋಝಿಕ್ಕೋಡು ಇದರ ಮುಖ್ಯಸ್ಥ ತಸ್ಲೀಮ್ ಸಖಾಫಿ, ಇಂಜಿನಿಯರ್ ಮನ್ನಾಫ್, ಬೆಳ್ಮ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಬಿ.ಎ ಹನೀಫ್, ಕೋಶಾಧಿಕಾರಿ ಹಸನ್ ಕುಂಞಿ, ಅನ್ನಜಾತ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಬಿ.ಶೇಖಬ್ಬ ಬಡಕಬೈಲ್, ಅಬ್ದುಲ್ ಖಾದರ್ ಮುಸ್ಲಿಯಾರ್, ಮುಹಮ್ಮದ್ ಇಫಾಝ್ ತಮೀಮ್ ಮರ್ ಝೂಖಿ ಕಾನೆಕೆರೆ, ಸಮಾಜ ಸೇವಕ ಯೂಸುಫ್ ಉಪಸ್ಥಿತರಿದರು.
ಅನ್ನಜಾತ್ ಎಜ್ಯುಕೇಶನ್ ಟ್ರಸ್ಟ್ ಉಪಾಧ್ಯಕ್ಷ ವಿ.ಯು ಇಸ್ಹಾಕ್ ಝುಹುರಿ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಸ್ವಾಲಿಹ್ ಬಿ ವಂದಿಸಿದರು.