ಸಿಟಿ ಗೋಲ್ಡ್ನಿಂದ ‘ಮೆಗಾ ಮಂಗಳೂರು ಫೆಸ್ಟ್’ : 4ನೇ ವಾರದ ಲಕ್ಕೀ ಡ್ರಾ ಸಮಾರಂಭ
ಮಂಗಳೂರು, ಡಿ.23: ಪ್ರತಿಷ್ಠಿತ ಆಭರಣ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಸಿಟಿ ಗೋಲ್ಡ್ನ 20ನೇ ವಾರ್ಷಿಕೋತ್ಸವ ಪ್ರಯುಕ್ತ ನಗರದ ಕಂಕನಾಡಿ ಬೈಪಾಸ್ ರಸ್ತೆಯಲ್ಲಿನ ಸಿಟಿ ಗೋಲ್ಡ್ ಮಳಿಗೆಯಲ್ಲಿ ಡಿಸೆಂಬರ್ವರೆಗೆ ‘ಮೆಗಾ ಮಂಗಳೂರು ಫೆಸ್ಟ್’ ಆಯೋಜಿಸಿದೆ. ಈ ಪ್ರಯುಕ್ತ ನಾಲ್ಕನೇ ವಾರದ ಲಕ್ಕೀ ಡ್ರಾ ಸಮಾರಂಭವು ಬುಧವಾರ ಸಂಜೆ ನಡೆಯಿತು.
ನಾಲ್ಕನೇ ಲಕ್ಕೀ ಡ್ರಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಕಿನ್ನಿಗೋಳಿ ಬೀಡಿ ಕಾಂಟ್ರಾಕ್ಟರ್ ಕೆ. ಖಾದರ್, ಸಂಸ್ಥೆಯು ವರ್ಷದಿಂದ ವರ್ಷಕ್ಕೆ ಏಳಿಗೆ ಕಾಣುತ್ತಿದೆ. ವ್ಯಾಪಾರದ ಜೊತೆಗೆ ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿರುವುದು ಸ್ವಾಗತಾರ್ಹ. ಜನರ ಪ್ರೀತಿ, ವಿಶ್ವಾಸ ಗಳಿಸಲು ಸಂಸ್ಥೆಯು ಕೊಡುಗೆ ನೀಡುತ್ತಿದೆ ಎಂದರು.
ಮೆಟ್ರೋ ಬೀಡಿ ವರ್ಕ್ಸ್ ಗುರುಪುರ ಹಾಜಿ ಜಿ.ಎಂ. ಶಾಹುಲ್ ಹಮೀದ್ ಮಾತನಾಡಿ, ಬಡವರು ದುಡಿಮೆಯ ಭಾಗದಲ್ಲಿ ಉಳಿತಾಯ ಮಾಡಿ ಚಿನ್ನ ಖರೀದಿಸುತ್ತಾರೆ. ಅಂತಹವರಲ್ಲಿ ಅದೃಷ್ಟಶಾಲಿಗಳಿಗೆ ಸಿಟಿ ಗೋಲ್ಡ್ನಿಂದ ಡೈಮಂಡ್ ರಿಂಗ್ ನೀಡುತ್ತಿರುವುದು ಶ್ಲಾಘನೀಯ. ಗ್ರಾಹಕರಿಗೆ ಸಂತೈಸಲು ಸಂಸ್ಥೆಯು ತನ್ನ ಆದಾಯದಲ್ಲೇ ಒಂದು ಭಾಗವನ್ನು ಕೊಡುಗೆಯಾಗಿ ನೀಡುತ್ತಿರುವುದು ಸಂತಸದ ವಿಚಾರ. ಸಂಸ್ಥೆಯು ತನ್ನ ವ್ಯಾಪಾರ-ವಹಿವಾಟನ್ನು ವೃದ್ಧಿಗೊಳಿಸಲಿ ಎಂದು ಶುಭ ಹಾರೈಸಿದರು.
ನಂಡೇ ಪೆಂಙಳ್ ಅಧ್ಯಕ್ಷ ನೌಶಾದ್ ಹಾಜಿ ಸೂರಲ್ಪಾಡಿ ಕಾರ್ಯಕ್ರಮದಲ್ಲಿ ಶುಭ ಹಾರೈಸಿದರು. ನಾಲ್ಕನೇ ವಾರದ ಲಕ್ಕೀ ಡ್ರಾದ ಅದೃಷ್ಟಶಾಲಿಯಾಗಿ ಸಿರಾಜ್ ತುಂಬೆ ಆಯ್ಕೆಯಾದರು. ಇದೇ ಸಂದರ್ಭ ಮೂರನೇ ವಾರದ ಲಕ್ಕೀ ಡ್ರಾದ ವಿಜೇತೆ ಝುಬೈದಾ ಫಳ್ನೀರ್ ಅವರಿಗೆ ಹಾಜಿ ಜಿ.ಎಂ.ಶಾಹುಲ್ ಹಮೀದ್ ಡೈಮಂಡ್ ರಿಂಗ್ ನೀಡಿದರು.
ಸಮಾರಂಭದಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ನಾಸಿರ್ ಸಾಮಣಿಗೆ, ಯೂಸುಫ್ ಹಾಜಿ ಮಜ್ದ ಗುರುಪುರ, ಖಾದರ್ ಹಾಜಿ ಉಳ್ಳಾಲ್, ರಝಾಕ್ ಹಾಜಿ ತೋಡಾರ್, ಸಿಟಿಗೋಲ್ಡ್ ಸಂಸ್ಥೆಯ ಮ್ಯಾನೇಜರ್ ಅಹ್ಮದ್ ಹಫೀಝ್, ಮಾರ್ಕೆಟಿಂಗ್ ಮ್ಯಾನೇಜರ್ ಇಮ್ರಾನ್ ವಿ., ಸಂಸ್ಥೆಯ ಸಿಬ್ಬಂದಿ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.
ಬಂಪರ್ ಬಹುಮಾನ: ಸಿಟಿ ಗೋಲ್ಡ್ನ ಮೆಗಾ ಮಂಗಳೂರು ಫೀಸ್ಟ್ ಅಂಗವಾಗಿ ಗ್ರಾಹಕರಿಗೆ ಬಂಪರ್ ಬಹುಮಾನಗಳನ್ನು ಪ್ರಕಟಿಸಲಾ ಗುತ್ತಿದೆ. ಎಕ್ಸ್ಕ್ಲೂಸಿವ್ ಡೈಮಂಡ್ ನೆಕ್ಲೆಸ್ನ್ನು ಬಂಪರ್ ಬಹುಮಾನವಾಗಿ ಗೆಲ್ಲುವ ಸುವರ್ಣಾವಕಾಶವನ್ನು ಗ್ರಾಹಕರಿಗೆ ನೀಡಲಾಗುತ್ತಿದೆ.
ವೀಕ್ಲಿ ಲಕ್ಕೀ ಡ್ರಾ: ಸಿಟಿ ಗೋಲ್ಡ್ನಿಂದ ಗ್ರಾಹಕರಿಗಾಗಿ ಹಲವು ವಿಶೇಷ ಕೊಡುಗೆಗಳನ್ನು ಸಮರ್ಪಿಸುತ್ತಿದ್ದು, ಪ್ರತೀ ವಾರವೂ ಲಕ್ಕೀ ಡ್ರಾ ಹಮ್ಮಿಕೊಳ್ಳಲಾಗಿದೆ. ನೊರಾ ಇಟಾಲಿಯನ್ ಕಲೆಕ್ಷನ್ಸ್, ಕೆನ್ನಾ ಯುನಿಕ್ ಡೈಮಂಡ್ಸ್ ಪ್ರದರ್ಶನ, ಮಾರಾಟವನ್ನು ಆಯೋಜಿಸಲಾಗುತ್ತಿದೆ.
ಮೇಕಿಂಗ್ ಚಾರ್ಜೆಸ್ ಕಡಿತ: ಗೋಲ್ಡ್ನಲ್ಲಿ ಶೇ.55, ಡೈಮಂಡ್ಸ್ನಲ್ಲಿ ಶೇ.25, ಅನ್ಕಟ್ ಆಭರಣಗಳಲ್ಲಿ ಶೇ.25 ರಷ್ಟು ಕಡಿತದ ಸೌಲಭ್ಯವನ್ನು ಸಂಸ್ಥೆ ಒದಗಿಸುತ್ತಿದೆ. ಅಲ್ಲದೆ, ಬೆಲೆಬಾಳುವ ನೆಕ್ಲೇಸ್ ಮೇಲೆ ಯಾವುದೇ ರೀತಿಯ ಮೇಕಿಂಗ್ ಚಾರ್ಜೆಸ್ ಇರುವುದಿಲ್ಲ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.