ದುಬೈ: ಕೋವಿಡ್-19 ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ
ದುಬೈ (ಯುನೈಟೆಡ್ ಅರಬ್ ಎಮಿರೇಟ್ಸ್), ಡಿ. 24: ದುಬೈಯಲ್ಲಿ ಕೋವಿಡ್-19 ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಗಿದೆ ಎಂದು ಸರಕಾರ ತಿಳಿಸಿದೆ. ಓರ್ವ ಹಿರಿಯ ನಾಗರಿಕ ಮತ್ತು ಓರ್ವ ನರ್ಸ್‌ಗೆ ಫೈಝರ್-ಬಯೋಎನ್‌ಟೆಕ್ ಲಸಿಕೆಯ ಮೊದಲ ಡೋಸ್‌ಗಳನ್ನು ನೀಡಲಾಗಿದೆ.
ರಾಜಧಾನಿ ಅಬುಧಾಬಿ ಮತ್ತು ದುಬೈ ಸೇರಿದಂತೆ ಏಳು ಎಮಿರೇಟ್‌ಗಳನ್ನು ಒಳಗೊಂಡ ಯುಎಇ ಮಂಗಳವಾರ ಫೈಝರ್-ಬಯೋಎನ್‌ಟೆಕ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಅದೇ ದಿನ ಮೊದಲ ಬ್ಯಾಚ್‌ನ ಲಸಿಕೆ ಆಗಮಿಸಿದೆ ಎಂದು ಅಧಿಕೃತ ಡಬ್ಲುಎಎಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮೊದಲ ಹಂತದಲ್ಲಿ, 60 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಪ್ರಜೆಗಳು ಮತ್ತು ನಿವಾಸಿಗಳು, ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ವಯಸ್ಕರು, ವಿಶೇಷ ಕಾಳಜಿಯ ಅಗತ್ಯವಿರುವ ಜನರು ಮತ್ತು ಮುಂಚೂಣಿಯಲ್ಲಿ ಕೆಲಸ ಮಾಡುವ ಆರೋಗ್ಯ ಸಿಬ್ಬಂದಿಗೆ ಲಸಿಕೆಗಳನ್ನು ನೀಡಲಾಗುವುದು ಎಂದು ದುಬೈ ಮಾಧ್ಯಮ ಕಚೇರಿ ಟ್ವೀಟ್ ಮಾಡಿದೆ.
Next Story