ಭಾರತೀಯ ಹೆಣ್ಣುಮಕ್ಕಳ ಮನೆಮನೆಯ ದೀಪ ಸಾವಿತ್ರಿಬಾಯಿ ಫುಲೆ
ಪತ್ರಕರ್ತೆ ಮೃದು ವರ್ಮ ಇಂದು ಪ್ಯಾಷನ್ ಆಗಿರುವ ಸ್ತ್ರೀ ವಿಮೋಚನೆ 150 ವರ್ಷಗಳ ಹಿಂದೆ ಭಾರತದ ಐಕಾನ್ ಆಗಿದ್ದ ಸಾವಿತ್ರಿ ಬಾಯಿಯವರಿಗೆ ಮಹಿಳಾ ಶೋಷಣೆಯ ನಿಜವಾದ ಅರ್ಥದ ಅರಿವಾಗಿತ್ತು ಎಂದು ಬರೆಯುತ್ತಾರೆ.
ಥಾಮ್ಸ್ ವುಲ್ಫ್ ಮತ್ತು ಸುಜನ ಅಂಡ್ರೆಡೆ ಎಂಬ ತತ್ವಶಾಸ್ತ್ರಜ್ಞ ಆಧುನಿಕ ಶಿಕ್ಷಣದ ತಾಯಿ ಸಾವಿತ್ರಿಬಾಯಿ ಫುಲೆಗೆ ನೀನು ಚಿರಋಣಿಯಾಗಿರಬೇಕು. ಆದರೆ ನಿನಗೆ ಆಕೆಯ ಪರಿಚಯವಿದೆಯಾ? ನೀನು ಓದು ಬರಹ ಕಲಿತ ಮಹಿಳೆಯಾಗಿದ್ದರೆ ಆಕೆಗೆ ಋಣಿಯಾಗಿರಬೇಕು. ನೀನು ಶಿಕ್ಷಿತ ಭಾರತೀಯ ಮಹಿಳೆಯಾಗಿದ್ದರೆ ಆಕೆಗೆ ನೀನು ಋಣಿಯಾಗಿರಬೇಕು. ನೀನು ಭಾರತೀಯ ಶಾಲಾಬಾಲಕಿಯಾಗಿದ್ದು, ಈ ಅಧ್ಯಾಯವನ್ನು ಇಂಗ್ಲೀಷ್ನಲ್ಲಿ ಓದುತ್ತಿದ್ದರೆ ಆಕೆಗೆ ನೀನು ಋಣಿಯಾಗಿರಬೇಕು. ನೀನು ಅಂತರರಾಷ್ಟ್ರೀಯ ಮಟ್ಟದ ಶಿಕ್ಷಿತ ದೇಸಿಮಹಿಳೆಯಾಗಿದ್ದರೆ ಆಕೆಗೆ ನೀನು ಋಣಿಯಾಗಿರಬೇಕು ಎಂದು ಬರೆಯುತ್ತಾನೆ
186 ವರ್ಷಗಳ ಹಿಂದೆ ದಮನಿತ ಸಮುದಾಯಗಳಿಗೆ ಆಧುನಿಕ ಶಿಕ್ಷಣವನ್ನು ಕೊಟ್ಟಂತಹ ಮೊದಲ ಶಿಕ್ಷಕಿ ಮಾತೆ ಸಾವಿತ್ರಿಬಾಪುಲೆ 1831 ರಲ್ಲಿ ಮಹಾರಾಷ್ಟ್ರದ ಸತಾರ್ ಜಿಲ್ಲೆಯ ದೈಗಾಂವ್ ನಲ್ಲಿ ಜನಿಸಿ, 9 ವರ್ಷಕ್ಕೆ ಮದುವೆಯಾದ ಇವರು, ಆಧುನಿಕ ಫೆಮಿನಿಸಂನ ಚಳುವಳಿಯ ತಾಯಿಯೆಂದು ಗುರುತಿಸಲ್ಪಡುತ್ತಾರೆ.
ಮಹಿಳೆಯರ ಹಕ್ಕುಗಳಿಗಾಗಿ ನಿರಂತರವಾಗಿ ಚಳುವಳಿಗಳನ್ನು ಸಂಘಟಿಸಿದ ಸಾವಿತ್ರಿಬಾಯಿ 1848 ರಲ್ಲಿ ಪುಣೆಯ ನಾರಾಯಣ ಪೇಟೆಯ ಬಿಂದೇವಾಪದಲ್ಲಿ ಪತಿ ಜ್ಯೋತಿಬಾರೊಂದಿಗೆ ಕೈಜೋಡಿಸಿ ಮೊದಲ ಬಾರಿಗೆ ಬಾಲಕಿಯರ ಶಾಲೆಯನ್ನು ಪ್ರಾರಂಭಿಸಿದರು. 1851 ರ ವೇಳೆಗೆ ಇವರು ಸ್ಥಾಪಿಸಿದ ಶಾಲೆಗಳ ಸಂಖ್ಯೆ ಮೂರಕ್ಕೇರುತ್ತದೆ. ವಿದ್ಯಾರ್ಥಿಗಳ ಸಂಖ್ಯೆ 500 ಕ್ಕೆ ದಾಟುತ್ತದೆ. ಇಂದು ಸರ್ವ ಶಿಕ್ಷಣ ಅಭಿಯಾನ, ಶಿಕ್ಷಣ ಹಕ್ಕು ಕಾಯಿದೆ, ಬಿಸಿಯೂಟದ ಸರ್ಕಾರಿ ಯೋಜನೆಗಳನ್ನು ಕ್ರಾಂತಿಕಾರಿಗಳೆಂದೇ ಕೊಂಡಾಡಲಾಗುತ್ತಿದೆ. ಆದರೆ 150 ವರ್ಷಗಳ ಹಿಂದೆಯೇ ಶಾಲೆಯನ್ನು ತೊರೆಯದ ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಕೊಡುವ ಯೋಜನೆ ತಂದಿದ್ದರು. ಸ್ಪರ್ಧೆಯಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನದ ಬದಲು ಗ್ರಂಥಗಳನ್ನು ವಿತರಿಸುತ್ತಿದ್ದರು. ಪೋಷಕರು ಮತ್ತು ಶಿಕ್ಷಕರ ನಡುವೆ ನಿಯಮಿತವಾಗಿ ಮಾತುಕತೆಗಳನ್ನು ಆ ಕಾಲದಲ್ಲಿಯೇ ಜಾರಿಗೊಳಿಸಿದ್ದರು.
1852 ರಲ್ಲಿ ಪುಣೆಯ ಮಹಿಳಾ ಮಂಡಳಿಯನ್ನು ಸ್ಥಾಪಿಸಿ, ಎಲ್ಲಾ ವರ್ಗದ ಮಹಿಳೆಯರನ್ನು ಜಾಗೃತಿಗೊಳಿಸುತ್ತಿದ್ದರು ಮತ್ತು ಫ್ಯೂಜಲ್ ಯಜಮಾನತ್ವವನ್ನು ತೀವ್ರವಾಗಿ ಟೀಕಿಸುತ್ತಿದ್ದರು. ವರದಕ್ಷಿಣೆಪಿಡುಗು ತಡೆಯಲು ಸರಳ ವಿವಾಹ ಏರ್ಪಡಿಸುತ್ತಿದ್ದರು. ಬರಗಾಲದ ಸಂದರ್ಭದಲ್ಲಿ ದಲಿತರಿಗೆ ತಮ್ಮ ಮನೆಯ ಬಾವಿಯನ್ನು ಬಿಟ್ಟುಕೊಟ್ಟರು. ಕ್ಷಾಮದಿಂದ ತತ್ತರಿಸಿದ ಜನಕ್ಕಾಗಿ ವಿಕ್ಟೋರಿಯಾ ಬಾಲಾಶ್ರಮ ಸ್ಥಾಪಿಸಿಸ್ವತಹಃ ತಾವೆ ಬೀದಿ ಬೀದಿಗಳಲ್ಲಿ ನೆರವಿಗಾಗಿ ನಿಂತರು. ಪತಿ ಜ್ಯೋತಿಬಾಪುಲೆ ತೀರಿಕೊಂಡಾಗ ಸ್ವತಹ ತಾವೆ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದು, ಅಂದಿನ ಸಂಪ್ರದಾಯಸ್ಥರಿಂದ ಟೀಕೆಗೆ ಗುರಿಯಾಯಿತು. ವಿವಾಹ ಬಾಹಿರ ಗರ್ಭಿಣಿ ಸ್ತ್ರೀಯರಿಗಾಗಿ ಪುನರ್ ವಸತಿ ಕೇಂದ್ರ. ವಿವಾಹ ಬಾಹಿರ ಮಕ್ಕಳಿಗೆ ಶಿಶುಕೇಂದ್ರ, ಕ್ಷೌರಿಕರನ್ನು ಸಂಘಟಿಸಿ ವಿದವೆಯರ ಕೇಶ ಮಂಡನೆಯನ್ನು ವಿರೋಧಿಸಿದರು. ಇದೆಲ್ಲವನ್ನು ಸಹಿಸದ ಸಮಾಜದಿಂದಲೂ ಮತ್ತು ಮನೆಯಿಂದಲೂ ಅವರು ಬಹಿಷ್ಕಾರಗೊಂಡರು.ಆದರೂ, ಅವರು ಎದೆಗುಂದಲಿಲ್ಲ. 1897 ರಲ್ಲಿ ಪ್ಲೇಗ್ ಪೀಡಿತ ರೋಗಿಗಳ ಸೇವೆಯಲ್ಲಿದ್ದಾಗ ಸ್ವತಹ ತಮಗೆ ಪ್ಲೇಗ್ ಬಂದು ಮರಣಿಸಿದರು.
ಸ್ವತಹ ಕವಯಿತ್ರಿಯಾಗಿದ್ದ ಸಾವಿತ್ರಿ ಬಾ ಫುಲೆ ರವರು ಕಾವ್ಯ ಅರಳಿದೆ ಎಂಬ ಕಾವ್ಯ, ಅಪ್ಪಟ ಮುತ್ತುಗಳ ಸಾಗರಎಂಬ ಕೃತಿ ರಚಿಸಿ ಜ್ಞಾನವೆನ್ನುವುದು ಬಡವರ ನೆರಳು ಆಶ್ರಯತಾಣ, ಇದು ತಾಯ್ತನ ಸ್ವರೂಪಿ ಎಂದು ಜ್ಞಾನದ ಮಹಿಮೆ ಹೇಳುತ್ತಾ ಬಲಿಚಕ್ರವರ್ತಿಯ ಸಾವಿನಲ್ಲಿ ಭಾರತದ ನೋವುಗಳು ಅಡಗಿದೆ ಎಂದು ಚಿಂತಿಸಿ, ಇಂಗ್ಲೀಷ್ ಶಿಕ್ಷಣವನ್ನು ಅಂದೆ ಪ್ರತಿಪಾಧಿಸಿದರು. ಇವರ ಶಾಲೆಯಲ್ಲಿ ಕಿಲಿತ ಮುಕ್ತಾಬಾಯಿ ಎಂಬ 11 ವರ್ಷದ ಹೆಣ್ಣು ಮಗಳ ಪ್ರಬಂಧವೊಂದು ಇಂದಿಗೂ ಕ್ರಾಂತಿಕಾರಕ ಕ್ಷೇತ್ರದಲ್ಲಿ ತನ್ನ ಚಾಪನ್ನು ಮೂಡಿಸುವಂತಿದೆ. ಇಂತಹ ಕ್ರಾಂತಿಗಳು ಭಾರತದಂತಹ ನೆಲದಲ್ಲಿ ನಡೆದಿದ್ದರು. ಇಂದುಕೂ, ಅಮಾಯಕ ಸ್ತ್ರೀ ಶೋಷಣೆ ನಡೆಯುತ್ತಿದೆ. ರಾಜಕಾರಣಿಗಳು ಪಟ್ಟಾಭದ್ರ ಹಿತಾಶಕ್ತಿಗಳು ಹೆಣ್ಣನ್ನು ಹೈಜಾಕ್ ವಸ್ತುವಾಗಿ ಬಳಸಿಕೊಳ್ಳುತ್ತಿದ್ದಾರೆ. ಇಂದಿಗೂ ಹಳ್ಳಿಗಳಲ್ಲಿ ಮುಟ್ಟಾದ ಸ್ತ್ರೀ ಮೂರು ದಿನ ಮನೆಯಿಂದ ಹೊರನಿಲ್ಲಬೇಕಿದೆ. ಗಂಡನನ್ನು ಕಳೆದುಕೊಂಡ ಹೆಣ್ಣು ಮಕ್ಕಳಿಗೆ ಮುಕ್ತ ಸ್ವಾತಂತ್ರ್ಯವಿಲ್ಲ. ಹೆಣ್ಣು ಭ್ರೂಣ ಹತ್ಯೆ ಅತ್ಯಾಧಿಕವಾಗಿದೆ. ಕಛೇರಿಗಳಲ್ಲಿ ಸ್ತ್ರೀ ಶೋಷಣೆ ತಾಂಡವಾಡುತ್ತಿರುವಂತಹ ಈ ಸಂದರ್ಭದಲ್ಲಿ ಸಾವಿತ್ರಿ ಬಾಪುಲೆ ಇಲ್ಲಿ ಮತ್ತೊಮ್ಮೆ ಸ್ತ್ರೀವಾದದ ಜೀವಸಲೆಯಾಗಬೇಕಿದೆ.
ಸಾವಿತ್ರಿಬಾಯಿ ಫುಲೆಯವರು ತಮ್ಮ ಪತಿ ಜ್ಯೋತಿ ಬಾಪುಲೆಗೆ ದುಃಖದಿಂಧ ಹೀಗೆ ಹೇಳಿದರು. ರೀ ನಾನು ಶಾಲೆಗೆ ಹೋಗುವಾಗ ಬೀದಿಯಲ್ಲಿ ಚೀಡಿಸುತ್ತಾರೆ. ಸಗಣಿಯಿಂದ ಹೊಡೆಯುತ್ತಾರೆ. ಗಲೀಜುಗಳನ್ನು ಮೈಲೇಲೆ ಎಸೆಯುತ್ತಾರೆ. ಬಟ್ಟೆಯೆಲ್ಲಾ ಮಲೀನಗೊಳ್ಳುತ್ತದೆ ಎಂದು, ಅದಕ್ಕೆ ಪುಲೆ ಉತ್ತರಿಸುತ್ತಾ ಸಾವಿತ್ರಿ ನೀನು ಮತ್ತೊಂದು ಜೊತೆ ಬಟ್ಟೆಯನ್ನು ಶಾಲೆಗೆ ಕೊಂಡ್ಹೋಗು. ಶಾಲೆಯಲ್ಲಿ ಮಲೀನವಾದ ಬಟ್ಟೆ ಬಿಚ್ಚಿಟ್ಟು, ಶುಭ್ರವಾದ ಬಟ್ಟೆ ತೊಟ್ಟು ಪಾಠಮಾಡು. ನಂತರ ಬರುವಾಗ ಮಲೀನವಾದ ಬಟ್ಟೆಯನ್ನು ಮತ್ತೆ ಧರಿಸಿ ಬಾ. ಮುಂದೆ ಭಾರತದ ಸ್ತ್ರೀಕುಲ ನಿನ್ನನ್ನು ಸ್ಮರಿಸುತ್ತದೆ ಎಂದರು ಸಾವಿತ್ರಿಪುಯು ಹಾಗೆ ಮಾಡಿದರು. ಈಗ ಉಳಿದಿರುವುದು ಇಂದಿನ ಭಾರತ ಅವರನ್ನು ಸ್ಮರಿಸಬೇಕಿದೆ.