ಎಂ.ಎಚ್. ಮುಹಮ್ಮದ್ ಕುಂಞಿ ನಿಧನ
ಮಂಗಳೂರು, ಜ. 4: ಮಂಜೇಶ್ವರ ಸಮೀಪದ ಮಚ್ಚಂಪಾಡಿ ನಿವಾಸಿ ಎಂ.ಎಚ್. ಮುಹಮ್ಮದ್ ಕುಂಞಿ (58) ರವಿವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರಿಯರು ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
'ವಾರ್ತಾಭಾರತಿ' ಪತ್ರಿಕಾ ಕಚೇರಿಯಲ್ಲಿ ಉದ್ಯೋಗಿಯಾಗಿದ್ದ ಅವರು ಈ ಹಿಂದೆ ಕೆಲಕಾಲ ಗಲ್ಫ್ನಲ್ಲೂ ಉದ್ಯೋಗದಲ್ಲಿದ್ದರು. ಅತ್ಯಂತ ಲವಲವಿಕೆಯಿಂದಿದ್ದ ಅವರ ರಕ್ತದೊತ್ತಡ ಕಡಿಮೆಯಾದ ಕಾರಣ ರವಿವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 12:30ಕ್ಕೆ ಕೊನೆಯುಸಿರೆಳೆದರು.
ಮೃತರ ದಫನ ಕಾರ್ಯವು ಇಂದು ಮಧ್ಯಾಹ್ನ ದೇರಳಕಟ್ಟೆ ಸಮೀಪದ ಬೆಳ್ಮ ರೆಂಜಾಡಿ ಕೇಂದ್ರ ಜುಮಾ ಮಸೀದಿಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Next Story