ವಾರ್ತಾಭಾರತಿ 18ನೇ ವಾರ್ಷಿಕ ವಿಶೇಷಾಂಕ
ಫೈಝ್ ಅಹ್ಮದ್ ಫೈಝ್ ಅವರು ಆಯ್ದ ದ್ವಿಪದಿಗಳು

ಫೈಝ್ ಅಹ್ಮದ್ ಫೈಝ್
ವೊ ಬಾತ್,ಸಾರೇ ಫಸಾನೇ ಮೇ ಜಿಸ್ಕಾ ಝಿಕ್ರ್ ನಥಾ
ವೊ ಬಾತ್ ಉನ್ಕೋ ಬಹುತ್ ನಾಗವಾರ್ ಗುಜ್ರೀ ಹೈ
ಯಾವ ವಿಷಯವು ಕಥೆಯೊಳಗೆ ಎಲ್ಲೂ ಇರಲೇ ಇಲ್ಲವೋ
ಅದೇ ವಿಷಯವು ಅವರಿಗೆ ತೀರಾ ಅಪ್ರಿಯವೆನಿಸಿಬಿಟ್ಟಿತು.
*-*-*-*-*-*-*-*-*-*
ನಹೀ ನಿಗಾಹ್ ಮೇ ಮಂಝಿಲ್ ತೊ ಜುಸ್ತಜೂ ಹಿ ಸಹೀ ನಹೀ
ವಿಸಾಲ್ ಮಾಯೆಸ್ಸಾರ್ ತೊ ಆರಝು ಹಿ ಸಹೀ
ಗುರಿ, ಕಣ್ಣ ಮುಂದೆ ಇಲ್ಲದಿದ್ದರೇನಂತೆ, ಶ್ರಮ ಮುಂದುವರಿಸೋಣ
ಮಿಲನದ ಸೌಭಾಗ್ಯ ಇಲ್ಲದಿದ್ದರೇನಂತೆ, ಆಶೆಯನ್ನು ಉಳಿಸಿಕೊಳ್ಳೋಣ
*-*-*-*-*-*-*-*-*-*-*
ಆಯೇ ತೊ ಯೂನ್ ಕೆ ಜೈಸೇ ಹಮೇಶಾ ಥೇ ಮೆಹರ್ಬಾನ್
ಭೂಲೇ ತೊ ಯೂನ್ ಕೆ ಗೋಯಾ ಕಭೀ ಆಶ್ನಾ ನ ಥೇ
ಅವರು ಬಂದ ವರಸೆ ನೋಡಿದರೆ, ಸದಾ ಪರಮಾಪ್ತರಾಗಿದ್ದರೋ ಎಂಬಂತಿತ್ತು
ಇದೀಗ ಮರೆತು ಬಿಟ್ಟ ವಿಧ ನೋಡಿದರೆ ಎಂದೂ ಪರಿಚಯವೇ ಇರಲಿಲ್ಲವೋ ಎಂಬಂತಿದೆ
*-*-*-*-*-*-*-*-*
ವೊ ಆರಹೇ ಹೈನ್, ವೊ ಆತೇ ಹೈನ್, ಆರಹೇ ಹೋಂಗೇ
ಶಬೆ ಫಿರಾಕ್, ಎ ಕಹ್ ಕರ್ ಗುಝಾರ್ ದೀ ಹಮ್ ನೇ
ಅವರು ಬರಲಿರುವರು, ಇದೋ ಬಂದುಬಿಟ್ಟರು, ಬರುತ್ತಲಿರಬಹುದು
ಹೀಗೆಲ್ಲಾ ಅಂದುಕೊಂಡೇ ವಿರಹದ ಇರುಳನ್ನು ಕಳೆದೆವು ನಾವು
*-*-*-*-*-*-*-*-*
ಜಾನ್ತಾ ಹಯ್ ಕೆ ವೋ ನ ಆಯೇಂಗೆ
ಫಿರ್ ಭೀ ಮಸ್ರೂಫೆ ಇಂತಿಝಾರ್ ಹೈ ದಿಲ್
ಅದಕ್ಕೆ ತಿಳಿದಿದೆ, ಅವರು ಬರಲಾರರೆಂದು
ಆದರೂ ಮನಸ್ಸು ಕಾಯುತ್ತಲೇ ಇದೆ.
*-*-*-*-*-*-*-*-*-*
ಕಬ್ ಟಹರೇಗಾ ದರ್ದ್ ಅಯ್ ದಿಲ್? ಕಬ್ ರಾತ್ ಬಸರ್ ಹೋಗಿ?
ಸುನ್ತೇ ಥೇ ವೋ ಆಯೇಂಗೇ ಸುನ್ತೇ ಥೇ ಸೆಹರ್ ಹೋಗೀ
ಈ ನೋವು ಎಂದು ಶಮನವಾದೀತು ಓ ಮನಸೇ? ಈ ಇರುಳು ಎಂದು ಮುಗಿದೀತು?
ಅವರು ಬರುವರೆಂದು ಕೇಳಿದ್ದೆವು! ಬೆಳಗಾಗುವುದು ಎಂದು ಕೇಳಿದ್ದೆವು!
*-*-*-*-*-*-*-*-*
ಹಮ್ ಶೇಖ್, ನ ಲೀಡರ್ ನ ಮಸಾಹಿಬ್, ನ ಸಹಾಫಿ
ಜೋ ಖುದ್ ನಹೀ ಕರ್ತೆ ವೊ ಹಿದಾಯತ್ ನ ಕರೇಂಗೆ
ನಾವು ಪುರೋಹಿತರಲ್ಲ, ನಾಯಕರಲ್ಲ, ಆಸ್ಥಾನಿಗರಲ್ಲ, ಪತ್ರಕರ್ತರಲ್ಲ
ಆದ್ದರಿಂದ, ಸ್ವತಃ ನಾವು ಮಾಡದ್ದನ್ನು ನಾವು ಜನರಿಗೆ ಉಪದೇಶಿಸುವುದಿಲ್ಲ.
*-*-*-*-*-*-*-*-*
ಉಠ್ ಕರ್ ತೊ ಆಗಯೇ ಹೈನ್ ತೆರೇ ಬಜ್ಮ್ ಸೇ ಮಗರ್
ಕುಛ್ ದಿಲ್ ಹೀ ಜಾನ್ತಾ ಹಯ್ ಕೆ ಕಿಸ್ ದಿಲ್ ಸೇ ಆಯೇ ಹೈನ್
ನಿನ್ನ ಸಂಗದಿಂದ ನಾವು ಎದ್ದು ಬಂದಿರುವುದೇನೋ ನಿಜ, ಆದರೆ
ಎಂತಹ ಮನಸ್ಥಿತಿಯೊಂದಿಗೆ ಬಂದಿರುವೆವೆಂಬುದು ಮನಸ್ಸಿಗೆ ಮಾತ್ರವೇ ಗೊತ್ತು.
*-*-*-*-*-*-*-*-*-*
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ