varthabharthi


ವಾರ್ತಾಭಾರತಿ 18ನೇ ವಾರ್ಷಿಕ ವಿಶೇಷಾಂಕ

ಪೆದ್ದು ಮನವೇ, ಇದೇನಾಗಿ ಬಿಟ್ಟಿದೆ ನಿನಗೆ?

ವಾರ್ತಾ ಭಾರತಿ : 5 Jan, 2021
ಉರ್ದು ಮೂಲ - ಮಿರ್ಝಾ ಘಾಲಿಬ್, ಕನ್ನಡಕ್ಕೆ: ಯೂಸುಫ್ ಪುತ್ತಿಗೆ

ದಿಲೆ ನಾದಾಂ ತುಜೇ ಹುವಾ ಕ್ಯಾ ಹೈ?

ಆಖಿರ್ ಇಸ್ ದರ್ದ್ ಕಿ ದವಾ ಕ್ಯಾ ಹೈ

ಪೆದ್ದು ಮನವೇ, ಇದೇನಾಗಿ ಬಿಟ್ಟಿದೆ ನಿನಗೆ?

ಈ ನೋವಿಗೆ ಮದ್ದಾದರೂ ಏನಿದೆ?
 

ಹಮ್ ಹೇಂ ಮುಶ್ತಾಕ್, ಔರ್ ಓ ಬೇಝಾರ್ ಯಾ ಇಲಾಹೀ ಏ ಮಾಜ್ರಾ ಕ್ಯಾ ಹೈ?

ನಮಗೆ ಅವರನ್ನು ಕಾಣುವ ಕೌತುಕ, ಅವರಿಗೆ ತೀರಾ ನಿರಾಸಕ್ತಿ,

ಅಯ್ಯೋ ದೇವರೇ, ಇದೇನಾಗಿ ಬಿಟ್ಟಿದೆ?
 

ಮೈಭೀ ಮೂ ಮೇ ಝುಬಾನ್ ರಖ್ತಾ ಹೂಂ

ಕಾಶ್ ಪೂಛೋ ಕೆ ಮದ್ದುವಾ ಕ್ಯಾ ಹೈ?

ಮಾತನಾಡುವ ನಾಲಿಗೆ ನನ್ನ ಬಾಯಲ್ಲೂ ಇದೆ

ಸಮಾಚಾರವೇನೆಂದು ನೀನು ಕೇಳಿ ನೋಡಿದರೆ ತಾನೇ?
 

ಜಬ್ ಕೆ ತುಜ್ಹ್ ಬಿನ್ ನಹೀ ಕೋಯೀ ಮೌಜೂದ್

ಫಿರ್ ಏ ಹಂಗಾಮಾ ಅಯ್ ಖುದಾ ಕ್ಯಾ ಹೈ?

ನೀನಲ್ಲದೆ ಇನ್ನೊಬ್ಬರು ಇಲ್ಲಿಲ್ಲ ಎನ್ನುವರಲ್ಲಾ!

ಹಾಗಾದರೆ ದೇವರೇ, ಇಲ್ಲಿ ಇಷ್ಟೆಲ್ಲಾ ಗದ್ದಲವೇಕಿದೆ?
 

ಏ ಪರೀ ಚೆಹರಾ ಲೋಗ್ ಕೈಸೇ ಹೈಂ

ಘಮ್ಜ ಒ ಇಶ್ವ ಒ ಅದಾ ಕ್ಯಾ ಹೈ !

ಈ ಸುರ ಸುಂದರ ಮುಖದವರೆಲ್ಲ ಇಲ್ಲಿ ಯಾಕಿದ್ದಾರೆ?

ಅವರ ನೋಟ, ಸೊಬಗು, ವರಸೆ ಇದೆಲ್ಲಾ, ಏನಿದು !
 

ಶಿಕನೆ ಝುಲ್ಫೆ ಅಂಬರೀಂ ಕ್ಯೋಂ ಹೈ?

ನಿಗಾಹೆ ಚಷ್ಮೆ ಸುರ್ಮಾ ಸಾ ಕ್ಯಾ ಹೈ?

ಘಮಘಮಿಸುವ ಮುಂಗುರುಳು ಇಲ್ಲಿ ಏಕಿದೆ?

ಕಾಡಿಗೆ ಹಚ್ಚಿದ ಕಣ್ಣುಗಳು ಆ ನೋಟ ಬೀರುತ್ತಿರುವುದೇಕೆ?
 

ಸಬ್ಝ ಓ ಗುಲ್ ಕಹಾಂಸೆ ಆಯೇ ಹೈ?

ಅಬ್ರ್ ಕ್ಯಾ ಚೀಜ್ ಹಯ್, ಹವಾ ಕ್ಯಾ ಹೈ?

ಈ ಹಸಿರು ಎಲೆಗಳು, ಈ ಹೂವುಗಳು ಎಲ್ಲಿಂದ ಬಂದಿವೆ?

ಮೋಡದ ಔಚಿತ್ಯವೇನು? ಇಲ್ಲಿ ತಂಗಾಳಿ ಇರುವುದೇಕೆ?

 

ಹಮ್ ಕು ಉನ್ ಸೆ ವಫಾ ಕಿ ಹೈ ಉಮ್ಮೀದ್, ಜೋ ನಹೀಂ ಜಾನ್ತೇ ವಫಾ ಕ್ಯಾ ಹೈ?

ನಾವು ಅವರಿಂದ ನಿಷ್ಠೆಯನ್ನು ನಿರೀಕ್ಷಿಸುತ್ತಿದ್ದೇವೆ ನಿಷ್ಠೆ ಅಂದರೇನೆಂಬ ಅರಿವೇ ಇಲ್ಲ ಅವರಿಗೆ.
 

ಹಾಂ, ಭಲಾ ಕರ್, ತೇರಾ ಭಲಾ ಹೋಗಾ

ಔರ್ ದರ್ವೇಶ್ ಕೀ ಸದಾ ಕ್ಯಾ ಹೈ?

ಒಳಿತನ್ನು ಮಾಡು ನೀನು, ಒಳಿತಾಗುವುದು ನಿನಗೆ,

ಫಕೀರನ ಮೊರೆ ಇಷ್ಟಲ್ಲದೆ ಬೇರೇನಿಲ್ಲ ತಾನೇ?
 

ಜಾನ್ ತುಮ್ ಪರ್ ನಿಸಾರ್ ಕರ್ತಾ ಹೂಂ

ಮೈ ನಹೀ ಜಾನ್ತಾ ದುಆ ಕ್ಯಾ ಹೈ?

(ದೇವರೇ,) ನನ್ನ ಜೀವವನ್ನು ಮುಡಿಪಾಗಿಟ್ಟಿರುವೆನು ನಿನಗೆ
ಪ್ರಾರ್ಥನೆ ಅಂದರೆ ಏನೆಂಬುದು ತಿಳಿಯದು ನನಗೆ

 

ಮೈನೇ ಮಾನಾ ಕೆ ಕುಛ್ ನಹೀ ಘಾಲಿಬ್

ಮುಫ್ತ್ ಹಾಥ್ ಆಯೇ ತೊ ಬುರಾ ಕ್ಯಾ ಹೈ?

ಘಾಲಿಬ್ ಯಾವ ಕೆಲಸಕ್ಕೂ ಬಾರದವನು, ಗೊತ್ತು

ನನಗೆ ಆದರೂ ಅವನು ಉಚಿತವಾಗಿ ಸಿಕ್ಕರೆ, ಬೇಡವೆನ್ನಲೇಕೆ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)