ಜ.7: ಮಂಗಳೂರಿನ ವಿವಿಧೆಡೆ ವಿದ್ಯುತ್ ನಿಲುಗಡೆ
ಮಂಗಳೂರು, ಜ.5: ಬಿಜೈ ಹಾಗೂ ಕಾಟಿಪಳ್ಳ ಉಪಕೇಂದ್ರದಿಂದ ಹೊರಡುವ ಫೀಡರ್ಗಳಲ್ಲಿ ದುರಸ್ತಿ ಕಾಮಗಾರಿ ಹಮ್ಮಿಕೊಂಡಿದ್ದು, ಜ.7ರಂದು ಮಂಗಳೂರಿನ ವಿವಿಧೆಡೆ ವಿದ್ಯುತ್ ನಿಲುಗಡೆಯಾಗಲಿದೆ.
ಅಂದು ಬೆಳಗ್ಗೆ 10ರಿಂದ ಸಂಜೆ 5:30ರವರೆಗೆ 110/33/11 ಕೆ.ವಿ. ಬಿಜೈ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಹ್ಯಾಟ್ಹಿಲ್ ಫೀಡರ್ನಲ್ಲಿ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದ ಆದರ್ಶನಗರ, ಕಾಪಿಕಾಡ್ 6ನೇ ಕ್ರಾಸ್, ಚಿಲಿಂಬಿ ಗುಡ್ಡೆ, ಪಿಡಬ್ಲ್ಯೂಡಿ ಆಫೀಸ್ ಕ್ವಾರ್ಟ್ರಸ್, ಇಂಡಿಯನ್ ಏರ್ಲೈನ್ ಆಫೀಸ್, ವೈದ್ಯನಾಥ ದೇವಸ್ಥಾನ ಸುತ್ತಮುತ್ತ, ಡಿಟಿಸಿಎಲ್ ಪೆಟ್ರೋಲ್ ಪಂಪ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಕಾಟಿಪಳ್ಳ: ಜ.7ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ 33/11 ಕೆ.ವಿ. ಕಾಟಿಪಳ್ಳ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ತಡಂಬೈಲ್, ಸುರತ್ಕಲ್, ಕಾನ ಫೀಡರ್ಗಳಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ತಡಂಬೈಲ್, ಮುಕ್ಕ, ಸಸಿಹಿತ್ಲು, ಕಾನ, ಸುರತ್ಕಲ್ ಸಿಟಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.