varthabharthi


ವಾರ್ತಾಭಾರತಿ 18ನೇ ವಾರ್ಷಿಕ ವಿಶೇಷಾಂಕ

ಪೂರ್ವಿಕ ಅಸ್ಮಿತೆ? ಆತ್ಮಗೌರವದ ಪರ್ಯಾಯ ಸಂಸ್ಕೃತಿಯತ್ತ....

ವಾರ್ತಾ ಭಾರತಿ : 5 Jan, 2021
ಲಕ್ಷ್ಮೀಪತಿ ಕೋಲಾರ

ಇಂದು ಜಗತ್ತಿನಾದ್ಯಂತ ಹರಡಿಕೊಂಡಿರುವ ಎಲ್ಲಾ ಆಧುನಿಕ ಮಾನವರ, ಅಂದರೆ ಹೋಮೋ ಸೇಪಿಯನ್ ಸೇಪಿಯನ್ನರ ಮೂಲ ನಿಸ್ಸಂಶಯವಾಗಿಯೂ ಆಫ್ರಿಕವೇ. ಎಲ್ಲರ ಪೂರ್ವಿಕ ಪಿತೃವೂ ಒಬ್ಬನೇ? ಕೋಯಿ ಸ್ಯಾನ್ ಬುಷ್‌ಮನ್ ಬುಡಕಟ್ಟಿನವನು. ಹಾಗಾಗಿಯೇ ಕ್ರಿಸ್ ಸ್ಟ್ರಿಂಜರ್ ಎಂಬ ವಿಜ್ಞಾನಿ ಹೇಳಿದ್ದು: (We are all Africans under the skin) ಎಂಬ ಮಾತನ್ನು. ಈ ಮೂಲ ಸತ್ಯವನ್ನು ಜೀರ್ಣಿಸಿಕೊಂಡವರ್ಯಾರೂ ಈ ಭೂಮಿಯ ಮೇಲಿನ ತನ್ನ ಸಹಜೀವಿಯನ್ನು ತನ್ನ ಶತ್ರು ಎಂದು ಭಾವಿಸುವುದು ಸಾಧ್ಯವೇ ಇಲ್ಲ? ಅದೂ ವಿನಾಕಾರಣವಾಗಿ!

ಲಕ್ಷ್ಮೀಪತಿ ಕೋಲಾರ ಅವರು ಹವ್ಯಾಸಿ ಪತ್ರಕರ್ತರು, ಕವಿ, ವಿಮರ್ಶಕ, ನಾಟಕಕಾರ, ಜಾನಪದ ಸಂಶೋಧಕರು. ದಕ್ಷಿಣ ದಂಡಾಜೀವಿಕ, ಅಲ್ಲಮನ ಬಯಲಾಟ (ನಾಟಕ) ಕೃತಿಗಳನ್ನು, ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಗಿರೀಶ್ ಕಾಸರವಳ್ಳಿ, ನಾಗಾಭರಣ ನಿರ್ದೇಶಿಸಿದ ರಾಜ್ಯ,ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಲನಚಿತ್ರಗಳಿಗೆ ಸಂಭಾಷಣಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ‘ಬೇರು’ ಮತ್ತು ‘ಮುಖಾಮುಖಿ’ ಚಲನಚಿತ್ರಗಳಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ ಎರಡು ಬಾರಿ ಬಹುಮಾನ ಬಂದಿದೆ. ವೀಚಿ ಸಾಹಿತ್ಯ ಪ್ರಶಸ್ತಿ, ಜೋಳದರಾಶಿ ದೊಡ್ಡನಗೌಡ ಪ್ರಶಸ್ತಿ, ಸಂಸ ರಂಗಪುರಸ್ಕಾರ ಪ್ರಶಸ್ತಿಗಳೂ ಸಂದಿವೆ. ಮೂಡುಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠವು 2013ರ ಸಾಲಿನಲ್ಲಿ ವರ್ಷದ ಶ್ರೇಷ್ಠ ಉದಯೋನ್ಮುಖ ಸಾಹಿತ್ಯ ಕೃತಿಯಾಗಿ ಅವರ ಅಲ್ಲಮನ ಬಯಲಾಟ ನಾಟಕಕ್ಕೆ ಪ್ರಶಸ್ತಿ ನೀಡಿ ಗೌರವಿಸಿದೆ. ಸಿದ್ಧಾರ್ಥ ಸಂಸ್ಥೆಯ ಕಾರ್ಯದರ್ಶಿ ಡಾ. ಜಿ.ಪರಮೇಶ್ವರ ಅವರು ತಮ್ಮ ತಂದೆ ಎಚ್.ಎಂ. ಗಂಗಾಧರಯ್ಯ ಹೆಸರಿನಲ್ಲಿ ನೀಡುವ ‘ರಾಷ್ಟ್ರೀಯ ಸಂಸ್ಕೃತಿ ಪುರಸ್ಕಾರ ಪ್ರಶಸ್ತಿ’ ಲಭಿಸಿದೆ.

1950ರಲ್ಲೇ ಡಾ. ಮರೀಜಾ ಗಿಂಬುತಾಸ್ ಎಂಬ ಪುರಾತತ್ವ ಶಾಸ್ತ್ರಜ್ಞೆ ಮತ್ತು ಭಾಷಾ ವಿಜ್ಞಾನಿ ಇಂದಿಗೆ 4,500 ವರ್ಷಗಳ ಹಿಂದೆ ಯುರೇಷಿಯಾದ, ಅಂದರೆ ದಕ್ಷಿಣ ರಶ್ಯದ ಕಪ್ಪು ಸಮುದ್ರ ಮತ್ತು ಕ್ಯಾಸ್ಪಿಯನ್ ಸಮುದ್ರಗಳ ನಡುವಿನ, ಕಾಕಸಸ್ ಪರ್ವತಾವಳಿಯ ಉತ್ತರ ತಪ್ಪಲಿನ ಪೊಂಟಿಕ್ ಕ್ಯಾಸ್ಪಿಯನ್ ಸ್ಟೆಪ್ ಪ್ರದೇಶದಲ್ಲಿ ಇಂಡೋ-ಯುರೋಪಿಯನ್ ಭಾಷಾ ಪರಿವಾರದ ಪೂರ್ವಿಕರು ವಾಸವಾಗಿದ್ದರೆಂದು ಸಾಬೀತುಪಡಿಸಿದ್ದರು. ನಂತರ ಕ್ರಮೇಣ ಅವರು ಅಲ್ಲಿಂದ ಚೆದುರಿ ಯುರೋಪ್, ಮಧ್ಯಪ್ರಾಚ್ಯ, ಇರಾನ್ ಹಾಗೂ ಭಾರತ ದೇಶಗಳತ್ತ ವಲಸೆ ಹೊರಟರೆಂದು ಕೂಡ ಸಮರ್ಥನೀಯವಾಗಿ ತರ್ಕಿಸಿದ್ದರು. ಆಕೆಯ ಸಂಶೋಧನೆ ಕುರ್ಗನ್ ಸಿದ್ಧಾಂತವೆಂದು ಜಗತ್ತಿನ ಎಲ್ಲ ವಿದ್ವಾಂಸರ ಮನ್ನಣೆಗೂ ಪಾತ್ರವಾಗಿದೆ. ಕುರ್ಗನ್ ಎಂದರೆ ‘ಕೋಣೆ ಗೋರಿ’ ಅಥವಾ ‘ಸಾಮೂಹಿಕ ಹೆಣಗಳ ಗೋರಿ ದಿಬ್ಬ’ ಎಂದರ್ಥ. ಸ್ಟೆಪ್ ಭೂ ಪ್ರದೇಶದಲ್ಲಿ ಇಂತಹ ಕುರ್ಗನ್‌ಗಳು ಬೇಕಾದಷ್ಟಿವೆ. ಕಾಕಸಸ್ ಪರ್ವತಾವಳಿಯ ಉತ್ತರ ತಪ್ಪಲಿನಲ್ಲಿದ್ದವರಾದ್ದರಿಂದ ಆ ಜನಸಮುದಾಯವನ್ನೇ ಕಕೇಷಿಯನ್ ಜನಾಂಗವೆಂದು ಕರೆಯಲಾಯಿತು. ಈ ಕಕೇಷಿಯನ್ನರೆಲ್ಲರ ಮೂಲ ಭಾಷೆ ಬಹುಶಃ ಒಂದೇ ಆಗಿತ್ತು. ಅದನ್ನು ಆದಿಮ ಇಂಡೋ-ಯುರೋಪಿಯನ್ ಭಾಷೆಯೆಂದು ಭಾಷಾ ವಿಜ್ಞಾನಿಗಳು ಗುರುತಿಸುತ್ತಾರೆ. ಈ ಆದಿಮ ಭಾಷೆಯಿಂದ ಕುಡಿಯೊಡೆದದ್ದೇ ಗ್ರೀಕ್, ಲ್ಯಾಟಿನ್, ಜರ್ಮನಿಕ್, ಇಟಾಲಿಕ್, ಕೆಲ್ಟಿಕ್, ಸ್ಲಾವೋನಿಕ್, ಬಾಲ್ಟಿಕ್, ಆಲ್ಬೇನಿಯನ್, ಆರ್ಮೇನಿಯನ್ ಮತ್ತು ಇಂಡೋ-ಇರಾನಿಯನ್ ಎಂಬ ಪ್ರಮುಖ ಭಾಷಾ ಗುಂಪುಗಳು. ಇಂಗ್ಲಿಷ್, ಜರ್ಮನಿಕ್ ಭಾಷಾ ಪರಿವಾರಕ್ಕೆ ಸೇರಿದರೆ, ರಶ್ಯಯನ್ ಭಾಷೆಯು ಸ್ಲಾವೋನಿಕ್ ಗುಂಪಿನಲ್ಲಿ ರೂಪುಗೊಂಡದ್ದು. ಇಂಡೋ-ಇರಾನಿಯನ್ ಗುಂಪಿನಿಂದ ಪರ್ಷಿಯನ್, ಕುರ್ದಿಶ್, ಬಲೂಚಿ, ಪಾಶ್ತೋ ಭಾಷೆಗಳೂ ಹಾಗೂ ಇಂಡಿಕ್ ಅಥವಾ ಇಂಡೋ-ಆರ್ಯನ್ ಎಂದು ಗುರುತಿಸಲಾಗಿರುವ ಸಾಲಿನಲ್ಲಿ ಸಂಸ್ಕೃತ, ಪ್ರಾಕೃತ, ಪಾಲಿ, ಬೆಂಗಾಲಿ, ಹಿಂದಿ, ಗುಜರಾತಿ, ಸಿಂಧಿ, ಮರಾಠಿ, ಪಂಜಾಬಿ, ಉರ್ದುವಿನಂತಹ ಭಾಷೆಗಳೂ ಹುಟ್ಟಿಕೊಂಡವು. ಅಂದರೆ ಬಹುತೇಕ ಯುರೋಪಮೆರಿಕ, ಯುರೇಷಿಯಾ, ರಶ್ಯ, ಮಧ್ಯಪ್ರಾಚ್ಯ, ಅಫ್ಘಾನ್, ಉತ್ತರ ಭಾರತದ ಮೇಲ್ಜಾತಿಯ ಸಮುದಾಯಗಳು ತಮಿಳು ಮತ್ತು ಬುಡಕಟ್ಟೇತರ ಶ್ರೀಲಂಕಾನ್ನರು, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕದ ಬಿಳಿಯರು- ಇವರೆಲ್ಲರೂ ಕಕೇಷಿಯನ್ ಆರ್ಯ ಕುಲಗಳವರೇ. ಉತ್ತರ ಭಾರತದಲ್ಲಿ ಇಂದು ಇಂಡೋ-ಆರ್ಯನ್ ಭಾಷೆಗಳನ್ನಾಡುತ್ತಿದ್ದರೂ, ಅಲ್ಲಿನ ತಳಸಮುದಾಯಗಳವರು ಕಕೇಷಿಯನ್ನರಲ್ಲ ಮತ್ತು ದಕ್ಷಿಣ ಭಾರತದ ಬಹುತೇಕ ಮೇಲ್ಜಾತಿಯ ಮಂದಿ ತಮ್ಮನ್ನು ವೈದಿಕ ವಕ್ತಾರರಂತೆ ಗುರುತಿಸಿಕೊಂಡಿದ್ದರೂ ಅವರಲ್ಲಿ ದಕ್ಷಿಣದ ಉಳಿದೆಲ್ಲರಲ್ಲಿನಂತೆ ಅತ್ಯಲ್ಪ ಪ್ರಮಾಣದ ಕಕೇಷಿಯನ್ ವಂಶವಾಹಿ ಮಿಶ್ರಣಗೊಂಡಿದ್ದರೂ ಅವರ್ಯಾರೂ ಮೂಲತಃ ಕಕೇಷಿಯನ್ನರಲ್ಲ ಎಂಬ ಅಂಶ ಹೆಚ್ಚು ಗಮನಾರ್ಹವಾದುದು. ಅಂದರೆ ಅವರ ಪೂರ್ವಿಕರು ಪೊಂಟಿಕ್ ಕ್ಯಾಸ್ಪಿಯನ್ ಸ್ಟೆಪ್ ಪ್ರದೇಶದಿಂದ ವಲಸೆ ಬಂದವರೂ ಅಲ್ಲ; ಇಂಡೋ-ಯುರೋಪಿಯನ್ ಭಾಷಾ ಪರಿವಾರದವರೂ ಅಲ್ಲ. ಹಾಗಾಗಿ ಇಂಡೋ-ಯುರೋಪಿಯನ್ ಭಾಷಿಕರ ಧರ್ಮ-ಸಂಸ್ಕೃತಿಗಳು ಕೂಡ ಮೂಲತಃ ಅವರದಲ್ಲ. ಇದು ಅವರಿಗೇ ತಿಳಿಯದ ಅವರ ಬೆನ್ನಿನ ಸತ್ಯ.

ಇಸವಿ 2000ದಲ್ಲಿ ಡಾ. ಬಮ್‌ಶದ್ ಎಂಬ ವಂಶವಾಹಿ ವಿಜ್ಞಾನಿ ‘ಉತ್ತರ ಭಾರತದ ಮೇಲ್ಜಾತಿಯ ಜನ ಇಲ್ಲಿನ ಕೆಳ ಜಾತಿಯವರಿಗಿಂತಲೂ ಯುರೇಷಿಯಾ ಮಧ್ಯ ಏಶ್ಯದ ಜನರೊಂದಿಗೆ ತಮ್ಮ ನಿಕಟ ವಂಶವಾಹಿ ಸಂಬಂಧಗಳನ್ನು ಹೊಂದಿದ್ದಾರೆ’ ಎಂಬ ಮಹತ್ವದ ಸಂಗತಿಯನ್ನು ತಮ್ಮ ವಂಶವಾಹಿ ಅಧ್ಯಯನದ ಮೂಲಕ ಬಹಿರಂಗಪಡಿಸಿದರು. ಅಂದರೆ ವಂಶವಾಹಿ ಸಂಶೋಧನೆಗಳೂ ಕುರ್ಗನ್ ಸಿದ್ಧಾಂತವನ್ನೇ ಬಲಪಡಿಸುವಲ್ಲಿ ನೆರವಾಯಿತು. 2003ರಲ್ಲಿ ಡಾ. ಸ್ಪೆನ್ಸರ್ ವೆಲ್ಸ್ ಎಂಬ ಮತ್ತೊಬ್ಬ ವಂಶವಾಹಿ ತಜ್ಞ 60ರಿಂದ 70 ಸಾವಿರ ವರ್ಷಗಳ ಹಿಂದೆ ‘ಔಟ್ ಆಫ್ ಆಫ್ರಿಕ’ ಸಿದ್ಧಾಂತದ ಪ್ರಕಾರ ಮೊದಲ ಮಾನವ ವಲಸೆಯ ಗುಂಪು ಆಫ್ರಿಕ ತೊರೆದು ಕರಾವಳಿ ಭಾರತದತ್ತ ಬಂದು, ನಂತರ ಮಲೇಶ್ಯ, ಇಂಡೋನೇಶ್ಯ, ಪಪುವಾ ನ್ಯೂಗಿನಿ ಮೂಲಕ ಆಸ್ಟ್ರೇಲಿಯ ತಲುಪಿತ್ತೆಂಬ ಅಂಶವನ್ನು ಸಾಬೀತು ಪಡಿಸಿದರು. ಹೀಗೆ ಭಾರತಕ್ಕೆ ಮೊದಲು ಬಂದವರೇ ದ್ರಾವಿಡಪೂರ್ವ ಆದಿವಾಸಿಗಳು ಮತ್ತು ಅಂಡಮಾನಿಗಳು. ನಂತರ 10,000 ವರ್ಷಗಳ ಆಸುಪಾಸಲ್ಲಿ ಹರಪ್ಪ ನಾಗರಿಕತೆಯ ಮೂಲಕ ಭಾರತ ಪ್ರವೇಶಿಸಿದವರೇ ಇಂದಿನ ದಕ್ಷಿಣ ಭಾರತದ ದ್ರಾವಿಡ ಭಾಷಿಕರು. ಈ ದ್ರಾವಿಡರು ಫರ್ಟೈಲ್ ಕ್ರೆಸೆಂಟ್ ಲ್ಯಾಂಡ್‌ನ ಇರಾನೀ ರೈತಾಪಿಗಳು ಹಾಗೂ ದ್ರಾವಿಡಪೂರ್ವ ಬೇಟೆಗಾರ ಆದಿವಾಸಿಗಳ ಸಂಕರದ ಕುಡಿಗಳು. ನಂತರ 3,500-3,750 ವರ್ಷಗಳ ಸರಿಸುಮಾರಲ್ಲಿ ಇಂಡೋ-ಯುರೋಪಿಯನ್ ಭಾಷಾ ಕುಟುಂಬದ ಆರ್ಯ ವೈದಿಕರು ಇರಾನ್-ಅಫ್ಘಾನ್ ಕಡೆಯಿಂದಲೂ, ಹಿಂದೂ ಕುಷ್ ಕಣಿವೆಯಿಂದಲೂ ಭಾರತ ಪ್ರವೇಶಿಸಿದರು. 2017ರಲ್ಲಿ ಡಾ. ಮಾರ್ಟಿನ್. ಪಿ. ರಿಚರ್ಡ್ಸ್ ಅವರು ಈ ಆರ್ಯನ್ನರ ಭಾರತ ಪ್ರವೇಶವನ್ನು ತಮ್ಮ ವಂಶವಾಹಿ ಅಧ್ಯಯನದ ಮೂಲಕವೇ ನಿರೂಪಿಸಿದ್ದಾರೆ. ಸ್ಥಳಾಭಾವದಿಂದಾಗಿ ಕರಾರುವಕ್ಕಾದ ವಿವರಗಳಿಗೆ ನಾನು ಹೋಗುತ್ತಿಲ್ಲ.

ಇಂದು ಜಗತ್ತಿನಾದ್ಯಂತ ಹರಡಿಕೊಂಡಿರುವ ಎಲ್ಲಾ ಆಧುನಿಕ ಮಾನವರ, ಅಂದರೆ ಹೋಮೋ ಸೇಪಿಯನ್ ಸೇಪಿಯನ್ನರ ಮೂಲ ನಿಸ್ಸಂಶಯವಾಗಿಯೂ ಆಫ್ರಿಕವೇ. ಎಲ್ಲರ ಪೂರ್ವಿಕ ಪಿತೃವೂ ಒಬ್ಬನೇ? ಕೋಯಿ ಸ್ಯಾನ್ ಬುಷ್‌ಮನ್ ಬುಡಕಟ್ಟಿನವನು. ಹಾಗಾಗಿಯೇ ಕ್ರಿಸ್ ಸ್ಟ್ರಿಂಜರ್ ಎಂಬ ವಿಜ್ಞಾನಿ ಹೇಳಿದ್ದು:(We are all Africans under the skin) ಎಂಬ ಮಾತನ್ನು. ಈ ಮೂಲ ಸತ್ಯವನ್ನು ಜೀರ್ಣಿಸಿಕೊಂಡವರ್ಯಾರೂ ಈ ಭೂಮಿಯ ಮೇಲಿನ ತನ್ನ ಸಹಜೀವಿಯನ್ನು ತನ್ನ ಶತ್ರು ಎಂದು ಭಾವಿಸುವುದು ಸಾಧ್ಯವೇ ಇಲ್ಲ? ಅದೂ ವಿನಾಕಾರಣವಾಗಿ!

 ಯುರೇಷಿಯಾದ ಪೊಂಟಿಕ್ ಕ್ಯಾಸ್ಪಿಯನ್ ಸ್ಟೆಪ್ ಪ್ರದೇಶದಲ್ಲೇ ಭಾರತದ ವೈದಿಕ ಆರ್ಯರೂ ಇದ್ದದ್ದು. ಅಲ್ಲಿಗೆ ಅವರು ಬರುವ ಮುಂಚೆ ಅನೇಕ ಕಕೇಷಿಯನ್ ಜನರ ಗುಂಪುಗಳೊಂದಿಗೆ ಬಹುಶಃ ಅವರು ಉತ್ತರ ಧ್ರುವದ ಆರ್ಕಟಿಕ್ ಪ್ರದೇಶದಲ್ಲಿದ್ದರು. ತಿಲಕರು ಕೂಡ ತಮ್ಮ ‘ದಿ ಆರ್ಕಟಿಕ್ ಹೋಮ್ ಇನ್ ದಿ ವೇದಾಸ್’ ಎಂಬ ಕೃತಿಯಲ್ಲಿ ಭಾರತದ ವೈದಿಕ ಆರ್ಯರ ತವರುನೆಲ ಉತ್ತರ ಧ್ರುವ ಪ್ರದೇಶವೇ ಎಂದು ಸಾಬೀತುಪಡಿಸಿದ್ದಾರೆ. ಉತ್ತರ ಧ್ರುವ ಪ್ರದೇಶದಲ್ಲಿನ ನಕ್ಷತ್ರಗಳ ಚಲನೆ, ಉಷಸ್, ದೀರ್ಘತಮ್ಮಸ್ಸು ಇತ್ಯಾದಿಗಳ ಕರಾರುವಾಕ್ಕಾದ ವಿವರಣೆ ಋಗ್ವೇದದಲ್ಲಿ ವರ್ಣಿಸಲ್ಪಟ್ಟಿರುವುದನ್ನು ಅವರು ಉದಾಹರಿಸಿದ್ದಾರೆ.

 ಯುರೇಷಿಯಾದ ಪೊಂಟಿಕ್ ಕ್ಯಾಸ್ಪಿಯನ್ ಸ್ಟೆಪ್ ಪ್ರದೇಶದಲ್ಲೇ ಭಾರತದ ವೈದಿಕ ಆರ್ಯರೂ ಇದ್ದದ್ದು. ಅಲ್ಲಿಗೆ ಅವರು ಬರುವ ಮುಂಚೆ ಅನೇಕ ಕಕೇಷಿಯನ್ ಜನರ ಗುಂಪುಗಳೊಂದಿಗೆ ಬಹುಶಃ ಅವರು ಉತ್ತರ ಧ್ರುವದ ಆರ್ಕಟಿಕ್ ಪ್ರದೇಶದಲ್ಲಿದ್ದರು. ತಿಲಕರು ಕೂಡ ತಮ್ಮ ‘ದಿ ಆರ್ಕಟಿಕ್ ಹೋಮ್ ಇನ್ ದಿ ವೇದಾಸ್’ ಎಂಬ ಕೃತಿಯಲ್ಲಿ ಭಾರತದ ವೈದಿಕ ಆರ್ಯರ ತವರುನೆಲ ಉತ್ತರ ಧ್ರುವ ಪ್ರದೇಶವೇ ಎಂದು ಸಾಬೀತುಪಡಿಸಿದ್ದಾರೆ. ಉತ್ತರ ಧ್ರುವ ಪ್ರದೇಶದಲ್ಲಿನ ನಕ್ಷತ್ರಗಳ ಚಲನೆ, ಉಷಸ್, ದೀರ್ಘತಮ್ಮಸ್ಸು ಇತ್ಯಾದಿಗಳ ಕರಾರುವಕ್ಕಾದ ವಿವರಣೆ ಋಗ್ವೇದದಲ್ಲಿ ವರ್ಣಿಸಲ್ಪಟ್ಟಿರುವುದನ್ನು ಅವರು ಉದಾಹರಿಸಿದ್ದಾರೆ. ನಕ್ಷತ್ರಪುಂಜಗಳ ಆಧಾರದ ಮೇಲೆ ರೂಪುಗೊಂಡ ದೇವರುಗಳ ಪರಿಕಲ್ಪನೆ ಮತ್ತು ಪುರಾಣ ಕಥೆಗಳು ಕೂಡ ತಿಲಕರ ವಾದವನ್ನು ಪುಷ್ಟೀಕರಿಸಬಲ್ಲವು. ಓರಿಯನ್ (Orion) ನಕ್ಷತ್ರಪುಂಜಕ್ಕೆ ಆ ಹೆಸರು ಬಂದದ್ದೇ ಆರಿಯನ್ (ಆರ್ಯನ್) ಎಂಬ ತಮ್ಮ ಜನಾಂಗದ ಹೆಸರಿಂದಲೇ. ಈ ನಕ್ಷತ್ರಪುಂಜಗಳಲ್ಲಿ ಆರ್ಯರು ಸರ್ಪ, ಸಿಂಹ, ಜಿಂಕೆಗಳನ್ನು ಕಲ್ಪಿಸಿಕೊಂಡರು. ಯಾಕೆಂದರೆ ಧ್ರುವ ಪ್ರದೇಶದ ಅವರಿಗೆ ಆನೆ, ಒಂಟೆ, ಮೊಸಳೆ, ಹುಲಿಗಳು ಆಗ ಅಪರಿಚಿತವಾಗಿದ್ದವು. ಹಾಗಾಗಿ ನಕ್ಷತ್ರಪುಂಜಗಳ ಆಧಾರಿತ ಪುರಾಣಗಳು ಭಾರತದಲ್ಲಿ ಹುಟ್ಟಿದ್ದಲ್ಲವೆಂದು ನಿಸ್ಸಂಶಯವಾಗಿ ಹೇಳಬಹುದು. ಉತ್ತರ ಧ್ರುವ ಪ್ರದೇಶದಲ್ಲಿ ವೈದಿಕರೊಂದಿಗೆ ಪಾರ್ಸಿಗಳು, ಕುರ್ದಿಶ್‌ಗಳೊಂದಿಗೆ ಸ್ಲಾವಿಕ್ ಜನರೂ ಇದ್ದರು. ಬಹುಶಃ 8ರಿಂದ 10 ಸಾವಿರ ವರ್ಷಗಳ ಹಿಂದೆಯೇ ಚಳಿಯ ಕಾರಣದಿಂದ ಎಲ್ಲರೂ ದಕ್ಷಿಣದತ್ತ ವಲಸೆ ಹೊರಟು ಬಂದರೂ, ಕೆಲವು ಸ್ಲಾವಿಕ್ ಗುಂಪುಗಳು ಮಾತ್ರ ಅಲ್ಲೇ ಉಳಿದುಕೊಂಡವು. ಈಸ್ಟೋನಿಯ, ಲಾಥ್ವಿಯ, ಲಿತುವೇನಿಯ, ಪ್ರಶ್ಶಿಯ, ಬೆಲಾರಸ್, ಪೋಲ್ಯಾಂಡ್ ನಂತಹ ದೇಶಗಳಲ್ಲಿ ಈಗ ಉಳಿದಿರುವವರೇ ಆ ಪೂರ್ವಿಕ ಸ್ಲಾವನ್ನರ ಸಂತಾನ. ದಕ್ಷಿಣದತ್ತ ಹೊರಟ ಸ್ಲಾವನ್ನರ ಗುಂಪುಗಳು ಉಕ್ರೇನ್, ಆರ್ಮೇನಿಯಾದಂತಹ ದೇಶಗಳಲ್ಲಿ ನೆಲೆಗೊಂಡರು. ಕೆಲವು ಸಾವಿರ ವರ್ಷಗಳ ಕಾಲ ಇವರೆಲ್ಲರೂ ಒಟ್ಟಿಗೇ ಒಂದೆಡೆಯೇ ಜೀವಿಸಿದ್ದರಿಂದ ಸಹಜವಾಗಿಯೇ ಇವರೆಲ್ಲರ ಧರ್ಮ, ಸಂಸ್ಕೃತಿ, ಭಾಷೆ, ಜೀವನ ವಿಧಾನಗಳಲ್ಲಿ ಇಂದಿಗೂ ಸಾಮ್ಯತೆ ಉಳಿದೇ ಬಂದಿದೆ.

ಈ ಬಗೆಯ ವಲಸೆ ಇತಿಹಾಸದ ಕಾರಣದಿಂದಾಗಿಯೇ ಇಂದಿಗೂ ಉತ್ತರ ಭಾರತದ ಆರ್ಯ ವೈದಿಕರಿಗೆ ಇಡೀ ಕಕೇಷಿಯನ್ ಜನಸಮುದಾಯಗಳೊಂದಿಗೆ ನಿಕಟ ವಂಶವಾಹಿ ಸಂಬಂಧಗಳಿದ್ದರೂ ಅವರಿಗೆ ಹೆಚ್ಚು ಸಮೀಪದವರು ಸ್ಲಾವಿಕ್ ಜನರು, ಪರ್ಷಿಯನ್ನರು, ಕುರ್ದಿಷ್‌ಗಳು, ಹಿಟೈಟ್-ಮಿತನ್ನಿಯವರೇ. ಉಳಿದೆಲ್ಲ ಕಕೇಷಿಯನ್ನರಿಗಿಂತಲೂ ಇವರು ಹೇಗೆ ವೈದಿಕ ಸಂಸ್ಕೃತಿಯ ನಾಡಿಬಡಿತಕ್ಕೆ ಹತ್ತಿರದವರೆಂಬುದನ್ನು ಕೆಲವು ಸಂಸ್ಕೃತಿ ವಿಚಾರಗಳ ಮೂಲಕವೇ ಅರಿಯಲು ಪ್ರಯತ್ನಿಸಬಹುದೆನಿಸುತ್ತೆ. (ವೈದಿಕರು ಯುರೇಷಿಯಾ-ಮದ್ಯ ಏಶ್ಯಗಳಿಂದಲೇ ಭಾರತಕ್ಕೆ ವಲಸೆ ಬಂದವರೆಂಬ ವಿಚಾರವೀಗ ವಂಶವಾಹಿ ಅಧ್ಯಯನಗಳಿಂದಲೇ ದೃಢಪಟ್ಟಿದೆ. ಆರ್ಯನ್ ಮೈಗ್ರೇಷನ್ ಸಿದ್ಧಾಂತವೀಗ ವಿವಾದದ ವಿಚಾರವಾಗಿ ಉಳಿದಿಲ್ಲ.) ರಶ್ಯದಿಂದ ಮೊದಲುಗೊಂಡು ಅಮೆರಿಕದವರೆಗೂ ಹರಡಿರುವ ಸ್ಲಾವಿಕ್ ಜನರು ಏಳೆಂಟು ಸಾವಿರ ವರ್ಷಗಳ ಹಿಂದೆ ವೈದಿಕರ ಕಳ್ಳುಬಳ್ಳಿಗಳೇ ಆಗಿದ್ದವರು. ಹಾಗಾಗಿ ಸ್ಲಾವ್ ಜನರ ಧಾರ್ಮಿಕ-ಆಚರಣಾತ್ಮಕ ನಂಬಿಕೆಗಳು, ದೇವರುಗಳ ಪರಿಕಲ್ಪನೆಗಳು ವೈದಿಕ ಸಂಸ್ಕೃತಿಗೂ ಮೂಲದ್ದೆಂದೇ ಹೇಳಬಹುದು. ಯುರೋಪಿನಲ್ಲಿ ಮೂವರಲ್ಲಿ ಒಬ್ಬ ಸ್ಲಾವಿಕ್ ಭಾಷಿಕನಾಗಿರುತ್ತಾನೆ. 13-14 ದೇಶಗಳಲ್ಲಿ ಗಣನೀಯ ಸಂಖ್ಯೆಯಲ್ಲಿದ್ದಾರೆ.

ಸ್ಲಾವನ್ನರ ಪರಮೋಚ್ಚ ದೈವ ರಮ್‌ಹ (Ramha). ವೈದಿಕ ಸಂಸ್ಕೃತಿಯ ಬ್ರಹ್ಮನ ಮೂಲ ಪರಿಕಲ್ಪನೆಯೂ ಇದೇ. ಈ ರಮ್‌ಹ ಅವ್ಯಕ್ತ ಆದಿ ಸೃಷ್ಟಿಕರ್ತ. ಈ ರಮ್‌ಹ ಮಾತನಾಡುವ ಭಾಷೆ ದೇವನ್‌ಗರಿ (ದೇವನಾಗರಿ). ಈತನನ್ನು ದೇವರುಗಳಿಗೂ ಹಿಂದಿನ ಪ್ರಭೋ (Praboh) ಎಂದು ಸ್ಲಾವ್ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಇವರಲ್ಲಿ ತ್ರಿಮೂರ್ತಿ ಪರಿಕಲ್ಪನೆಯೂ ಇದ್ದು ರಮ್‌ಹ, ಸ್ವರೋಗ್ (ಸ್ವರ್ಗಾಧಿಪತಿ) ಮತ್ತು ವಿಷೆನಿ (Visheny)ಗಳೇ ತ್ರಿಮೂರ್ತಿಗಳಾಗಿದ್ದಾರೆ. ನಂತರ ರಮ್‌ಹನನ್ನು ರಮ್‌ಹತ್ ಎಂದೂ ಕೆಲವೆಡೆ ಸಂಬೋಧಿಸಲಾಗಿದೆ. ಬಹುಶಃ ಇಸ್ಲಾಮ್‌ನ ರಹಮತ್‌ಗೂ ಇದೇ ಮೂಲವಿದ್ದರೂ ಇರಬಹುದು. ಯಾಕೆಂದರೆ ಪೂಜಾರಿಗಳನ್ನು ವ್ರಹ್‌ಮತ್‌ಗಳೆಂದೇ ಕರೆಯುತ್ತಾರೆ. ವಿಷೆನಿ ವೈದಿಕರ ವಿಷ್ಣುವೇ. ವಿಷ್ಣು ಭೋಗ (ಭಗವಂತ) ವಿಷ್ಣ್ಯ, ವಿಷ್ಣು (ಬಲ್ಗೇರಿಯಾ) ಅಂತಲೂ ಕರೆವ ಪದ್ಧತಿ ವಿವಿಧ ಸ್ಲಾವ್ ದೇಶಗಳಲ್ಲಿದೆ. ಸ್ವರೋಗ್ ಮತ್ತು ಕ್ರಿಷೆನ್ (Kryshen) ಈತನ ಮಕ್ಕಳು. ಈತನ ವಾಹನ ಗರುಡ ವಿಟೆಮಾನ (Vitemana)–ವಿಮಾನ). ವೆಲೇಸ್ ಗ್ರಂಥದಲ್ಲಿ (ಈ ಗ್ರಂಥ ನಾಝಿಗಳ ಕೈಗೆ ಸಿಕ್ಕಿ ನಾಶವಾಯಿತಂತೆ. ಮೌಖಿಕ ಪರಂಪರೆಯಲ್ಲದು ಉಳಿದು ಬಂದಿದೆ.) ವಿಷೆನ್‌ನ ಪ್ರಸ್ತಾಪವಿದೆ. ಉತ್ತರ ಧ್ರುವ ಪ್ರದೇಶದ ಐರಿಯನ್ ಉದ್ಯಾನವನದಲ್ಲಿ ಜನಿಸಿದ ವಿಷೆನ್ ಮೂರು ಹೆಜ್ಜೆ ಇಟ್ಟು ಮೂರು ಲೋಕಗಳಿಗೂ ಅಧಿಪತಿಯಾದನಂತೆ. (ಬಲಿ- ವಾಮನ ಪುರಾಣ ಕತೆ ಇಲ್ಲಿ ನೆನಪಾಗುತ್ತದೆ.) ಈ ವಿಷೆನ್ ದೈವತವೇ ಮೂರುಭಾಗಗಳಾಗಿ ವಿಂಗಡಣೆಗೊಂಡು ತ್ರಿಮೂರ್ತಿಗಳಾದದ್ದು ಎಂಬ ನಂಬಿಕೆಗಳೂ ಸ್ಲಾವ್ ಜನರಲ್ಲಿದೆ. ಈತನ ತಂದೆ-ತಾಯಿಯರ ವಿವರಗಳು ಸಿಗುವುದಿಲ್ಲ. ಬಲ್ಗೇರಿಯಾದಲ್ಲಿ ವಿಷ್ಣುಗೀತೆಗಳೆಂಬ ಪ್ರಾಚೀನ ಸ್ತುತಿಗಳೂ ಉಂಟು.

ವಿಷೆನಿಯ ಮಗನೇ ಕ್ರಿಷೆನ್-ವೈದಿಕದ ಕೃಷ್ಣ. ಈತ ರಾಧಾ(Rada)ಳೊಂದಿಗೆ ಕೊಳಲೂದುತ್ತಿರುವ ಚಿತ್ರಗಳೂ ಲಭಿಸಿವೆ. ಕ್ರಿಷೆನ್ ತಾಯಿ ಮಾಯ. ಕ್ರಿಷೆನ್‌ನ ಪ್ರಾಚೀನ ಹೆಸರು ರೂಫ್ ಎಂದಿದೆ. ಈತನ ಎರಡನೆಯ ಅವತಾರವೇ ಕೊಲ್ಯಾಡ. ಕ್ರಿಷೆನ್ ದೇವಲೋಕದ ದನಗಾಹಿ-ಗೋಪಾಲ ಎಂಬ ವಿವರಗಳು ಸ್ಲಾವ್ ಧಾರ್ಮಿಕ ಗ್ರಂಥಗಳಲ್ಲಿವೆ. ರಾಧಾ ಕಾಮನ ಮಗನಾದ ಉರಿಯನ್ ಎಂಬವನ ಮಗಳು. ಸ್ಲಾವ್ ಪುರಾಣದಲ್ಲಿ ರಾಧಾ ಒಬ್ಬಳೇ ಕೃಷ್ಣನ ಹೆಂಡತಿ. ಸ್ಲಾವ್ ಸಂಸ್ಕೃತಿಯಲ್ಲಿ ಕ್ರಿಷೆನ್‌ನ ವರ್ಣನೆಯೂ ಸೊಗಸಾಗಿದೆ. ಕ್ರಿಷೆನ್‌ನ ಮುಖವು ಸೂರ್ಯನಂತೆಯೂ, ಆತನ ಹಣೆಯಲ್ಲಿ ನಕ್ಷತ್ರಗಳು ಹರಡಿಕೊಂಡಂತೆಯೂ ಇದೆಯಂತೆ. ಇದು ಕೊಂಚ ವಿಶ್ವರೂಪದ ವರ್ಣನೆಯನ್ನು ಹೋಲುವಂತಿದೆ. ಬ್ಯಾಕ್ಟ್ರಿಯಾ ದೇಶದಲ್ಲಿ ಕ್ರಿ.ಪೂ.190ರ ನಾಣ್ಯವೊಂದರಲ್ಲಿ ವಾಸುದೇವನ ಚಿತ್ರವೂ ಅಚ್ಚಿಸಲ್ಪಟ್ಟಿದೆ. ಯದು, ತುರ್ವಸು, ಪುರುಗಳೆಂಬ ಸಮಾನ ಉಚ್ಚರಣೆಯ ಪಂಗಡಗಳ ಹೆಸರುಗಳೂ ಸ್ಲಾವ್ ಜನರಲ್ಲಿದೆ. ಕ್ರಿಷೆನ್ ಗರುಡನ ಮೇಲೆ ಕೂತು ಹಾರುತ್ತಿರುವ ಚಿತ್ರಗಳೂ ಸ್ಲಾವ್ ಜನರಲ್ಲಿ ಸಾಮಾನ್ಯವೆಂಬಂತಿದೆ.

ಸ್ಲಾವನ್ನರಲ್ಲಿ ವೇದಗಳ ಸೃಷ್ಟಿಕರ್ತ ಪೆರುನನೇ. ಪೆರುನ್ ಬೋಧಿಸಿದ್ದೇ 9 ವೇದಗಳಾದವು. ಇವನ್ನು ಪೆರುನ್ ವೇದ (Weden) ಗಳೆಂದೇ ಕರೆಯುತ್ತಾರೆ. ಸ್ಲಾವೆನ್ನರ ಪರಂಪರಾಗತ ನಂಬಿಕೆಯ ಪ್ರಕಾರ ಈ 9 ವೇದಗಳ ಪೈಕಿ ನಾಲ್ಕು ವೇದಗಳನ್ನು ಭಾರತದ ವೈದಿಕರು ಕೊಂಡೊಯ್ದರು. ಮತ್ತೊಂದು ವೇದವನ್ನು ಪರ್ಷಿಯನ್ನರು ತಮ್ಮ ಧಾರ್ಮಿಕ ಗ್ರಂಥವಾದ ‘ಅವೆಸ್ತಾ’ ರೂಪಿಸಲು ಬಳಸಿಕೊಂಡರಂತೆ. ಕ್ರೈಸ್ತ ಮಿಷನರಿಗಳ ದಾಳಿಗಳಿಂದ ರಕ್ಷಿಸಲು ಈ ಪೆರುನ್ ವೇದಗಳನ್ನು ಅತ್ಯಂತ ರಹಸ್ಯವಾಗಿ ಬಚ್ಚಿಡಲಾಯಿತಂತೆ. 1996ರಲ್ಲಿ ಪೆರುನ್‌ನ ಮೊದಲ ವೇದವನ್ನು ರಷ್ಯನ್ ಭಾಷೆಗೆ ಅನುವಾದಿಸಿ ಪ್ರಕಟಿಸಲಾಯಿತು. (ಇದರ ಇಂಗ್ಲಿಷ್ ಆವೃತ್ತಿಯ ಪ್ರತಿ ನನ್ನ ಬಳಿ ಇದೆ.) ಪ್ರಾಚೀನ ಕಾಲದಲ್ಲಿ ಈ ಪೆರುನ್ ವೇದಗಳನ್ನು ಚಿನ್ನದ ರೇಖುಗಳ ಮೇಲೆ ಕೆತ್ತಲಾಗಿತ್ತಂತೆ. ಹಾಗಾಗಿ ಅವನ್ನು ಶಾಂಟೈ ಪೆರುನ್ ವೇದಗಳೆನ್ನುತ್ತಾರೆ.

ರೋದ್ (Rod) ಎನ್ನುವ ದೇವರು ಕೂಡ ಸ್ಲಾವ್ ಜನರಲ್ಲಿ ಅತ್ಯಂತ ಪ್ರಮುಖನೇ. ಈತ ರುದ್ರನಿರಬಹುದೇ ಎಂಬ ಚರ್ಚೆಗಳು ವಿದ್ವಾಂಸರಲ್ಲಿ ನಡೆದಿವೆ. ಈತ ವಿಷ್ಣುವಿನ ಅಂಶದವನೇ. ಈತನ ಮೂಲ ಅಗ್ನಿಯಲ್ಲಿ ಹೋಗಿ ನಿಲ್ಲುತ್ತದೆ. ಋಗ್ವೇದದ ರುದ್ರನನ್ನೂ ಅಗ್ನಿಯೆಂದೇ ಗುರುತಿಸಲಾಗುತ್ತದೆ. ‘ತ್ವಂ ಅಗ್ನೇ ರುದ್ರ ಅಸುರಃ...’ ‘ಅಗ್ನಿರ್ವೈ ರುದ್ರ...’ ಎಂಬ ವರ್ಣನೆಗಳು ಋಗ್ವೇದದಲ್ಲಿವೆ. ಸಾವಿರ ವರ್ಷದ ಹಿಂದೆಯೇ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರೂ, ತಮ್ಮ ಪೂರ್ವಿಕರ ಧರ್ಮ- ಸಂಸ್ಕೃತಿಗಳನ್ನು ಪುನರುತ್ಥಾನಗೊಳಿಸಲು ದೀಕ್ಷೆತೊಟ್ಟ ಸ್ಲಾವ್ ಜನರನ್ನು (Rodnovery)ಗಳೆಂದೇ ಕರೆಯಲಾಗುತ್ತದೆ. (Rodnovery) ಎಂದರೆ ಸ್ಥಳೀಯ ಜ್ಞಾನ ಎಂಬ ಪರಂಪರಾಗತವಾದ ಅರ್ಥವೂ ಸ್ಲಾವಿಕ್ ಭಾಷೆಯಲ್ಲಿದೆ. ಉಳಿದಂತೆ ರಮ್‌ಹ, ವಿಷೆನ್, ಸ್ವರೋಗ್ ಹಾಗೂ ರೋದ್ ನಂತರದ ಪ್ರಮುಖ ದೇವರು ಪೆರುನ್ (Perun). ಪೆರುನ್ ವೈದಿಕ ಸಂಸ್ಕೃತಿಯ ಪರ್ಜನನೇ. ಅಂದರೆ ಮಳೆ ಸುರಿಸುವ ಇಂದ್ರನ ರೂಪ. ಸ್ಲಾವನ್ನರಲ್ಲಿ ವೇದಗಳ ಸೃಷ್ಟಿಕರ್ತ ಪೆರುನನೇ. ಪೆರುನ್ ಬೋಧಿಸಿದ್ದೇ 9 ವೇದಗಳಾದವು. ಇವನ್ನು ಪೆರುನ್ ವೇದ (Weden) ಗಳೆಂದೇ ಕರೆಯುತ್ತಾರೆ. ಸ್ಲಾವೆನ್ನರ ಪರಂಪರಾಗತ ನಂಬಿಕೆಯ ಪ್ರಕಾರ ಈ 9 ವೇದಗಳ ಪೈಕಿ ನಾಲ್ಕು ವೇದಗಳನ್ನು ಭಾರತದ ವೈದಿಕರು ಕೊಂಡೊಯ್ದರು. ಮತ್ತೊಂದು ವೇದವನ್ನು ಪರ್ಷಿಯನ್ನರು ತಮ್ಮ ಧಾರ್ಮಿಕ ಗ್ರಂಥವಾದ ‘ಅವೆಸ್ತಾ’ ರೂಪಿಸಲು ಬಳಸಿಕೊಂಡರಂತೆ. ಕ್ರೈಸ್ತ ಮಿಷನರಿಗಳ ದಾಳಿಗಳಿಂದ ರಕ್ಷಿಸಲು ಈ ಪೆರುನ್ ವೇದಗಳನ್ನು ಅತ್ಯಂತ ರಹಸ್ಯವಾಗಿ ಬಚ್ಚಿಡಲಾಯಿತಂತೆ. 1996ರಲ್ಲಿ ಪೆರುನ್‌ನ ಮೊದಲ ವೇದವನ್ನು ರಶ್ಯನ್ ಭಾಷೆಗೆ ಅನುವಾದಿಸಿ ಪ್ರಕಟಿಸಲಾಯಿತು. (ಇದರ ಇಂಗ್ಲಿಷ್ ಆವೃತ್ತಿಯ ಪ್ರತಿ ನನ್ನ ಬಳಿ ಇದೆ.) ಪ್ರಾಚೀನ ಕಾಲದಲ್ಲಿ ಈ ಪೆರುನ್ ವೇದಗಳನ್ನು ಚಿನ್ನದ ರೇಖುಗಳ ಮೇಲೆ ಕೆತ್ತಲಾಗಿತ್ತಂತೆ. ಹಾಗಾಗಿ ಅವನ್ನು ಶಾಂಟೈ ಪೆರುನ್ ವೇದಗಳೆನ್ನುತ್ತಾರೆ.

ಸ್ಲಾವೆನ್ನರ ಇತರ ದೇವರು/ದೇವತೆಗಳ ಹೆಸರುಗಳನ್ನು ಗಮನಿಸಿ. ವೆಲೆಸ್ ಸ್ಲಾವ್ ಪುರಾಣಗಳ ದುಷ್ಟಶಕ್ತಿ. ಋಗ್ವೇದದ ವಲ ಈತನೇ. ನಂತರ ಕಕೇಷಿಯನ್ ಜನಾಂಗದ ಕ್ರೈಸ್ತ ಹಾಗೂ ಇಸ್ಲಾಮ್ ಧರ್ಮಗಳಲ್ಲಿ ಈ ವೆಲೆಸ್‌ನೇ ಸ್ಕೃಂದನಾಗಿ ಸ್ಥಾನ ಪಲ್ಲಟಗೊಂಡು ಡೆವಿಲ್ ಆಗಿದ್ದಾನೆ. ಇಂದ್ರನಿಂದ ಕೊಲ್ಲಲ್ಪಡುವ ವೃತ್ರನೂ ಆಗಿದ್ದಾನೆ- ಸರ್ಪ ಹಾಗೂ ಡ್ರಾಗನ್ ರೂಪದಲ್ಲಿ. ಕೃಷ್ಣನೂ ಕಾಳಿಂಗಮರ್ಧನನೇ ತಾನೇ? ಇಂದ್ರ-ವೃತ್ರಾಸುರ ಯುದ್ಧದ ಪುರಾಣವು ಬಹುತೇಕ ಎಲ್ಲಾ ಕಕೇಷಿಯನ್ನರಲ್ಲೂ ಇತ್ತು. ಇದಕ್ಕೆ ಬೇಕಾದಷ್ಟು ಕೆತ್ತನೆ-ಶಿಲ್ಪ-ಚಿತ್ರಗಳ ಪುರಾವೆಗಳೂ ಲಭಿಸುತ್ತವೆ. ಉಳಿದಂತೆ ಮೋಕೋಷ್ (ಮೋಕ್ಷ), ಜೀವ, ದೇವನ, ಮರೆಣ (ಮರಣದಧಿದೇವತೆ), ತಾರಕ್, ತಾರಾ, ಒಗ್ನೆಬಾಗ್ (ಅಗ್ನಿ), ಸೌಲ್ (ಸೂರ್ಯ) ಮತ್ತಿತರ ದೇವತೆಗಳಿವೆ. ಬಹುತೇಕ ದೇವ/ದೇವತೆಗಳ ಹೆಸರಿನ ಜೊತೆಗೆ (Bog)(ಭಗ-ವಂತ) ಎಂಬ ವಿಶೇಷಣವೂ ಸೇರಿಕೊಂಡಿರುತ್ತದೆ. ಸ್ಲಾವಿಕ್ ಜನರ ಆದಿಮ ದೈವಮಾತೆ ರೋಜಾನಿಕ- ಲಕ್ಷ್ಮೀ ರೂಪದವಳು. ಸ್ಲಾವ್ ಜನರ ಧ್ರುವ ಪ್ರದೇಶದ ಲಾಥ್ವಿಯಾದಲ್ಲಿ ದೇವರನ್ನು ದಏವ್ಸ್ (ದೇವ್) ಎಂದೇ ಕರೆಯುವುದು. ಲಿಥುವೇನಿಯಾದಲ್ಲಿ ದೈವಾಸ್(Deiva), ಲಾತ್‌ಗಲೀಯನ್‌ನಲ್ಲಿ ದೀವ್ಸ್, ಪ್ರಷ್ಷಿಯಾದಲ್ಲಿ ದೈವ್ಸ್ ಮತ್ತು ಬಾಲ್ಟಿಕ್‌ನಲ್ಲಿ ದೈವಾಸ್ ಎಂದು ಕರೆವ ಪದ್ಧತಿ ಇಂದಿಗೂ ಉಳಿದುಕೊಂಡೇ ಬಂದಿದೆ. ಈ ದೈವಾಸ್ ಪದವೇ ಋಗ್ವೇದದಲ್ಲಿ ದ್ಯೂಸ್‌ಪಿತರ್ ಆಗಿದೆ. ಅದೇ ಇತರೆಡೆಗಳಲ್ಲಿ-ವಿಶೇಷವಾಗಿ ಗ್ರೀಕ್-ರೋಮನ್ನರಲ್ಲಿ ಜ್ಯೂಸ್ ಪೇಟರ್ ಅಂತಾಗಿರುವುದು. ಪಾರ್ಸಿಗಳ ಜೊರಾಷ್ಟ್ರಿಯನ್ ಧರ್ಮದಲ್ಲೂ ದಏವ ಎಂದಿದೆ. ಆದರೆ ಅಲ್ಲಿ ದಏವ ಎಂದರೆ ದುಷ್ಟಶಕ್ತಿ. ಸ್ಲಾವಿಕ್ ಸಮುದಾಯದಲ್ಲಿ ಬಾಬಾ ಯಾಗ ಎಂಬ ಪ್ರಧಾನ ಪಿಶಾಚಿಯೂ ಉಂಟು.

ಆರ್ಮೇನಿಯಾದಲ್ಲಿನ ಪೂರ್ವಿಕ ಮಾಂತ್ರಿಕಾಚರಣೆಯ (Pagan) ಧರ್ಮದಲ್ಲಿ ಆರ್ (ಗರುಡ/ಸೂರ್ಯ) ಎಂಬ ಪ್ರಧಾನ ದೇವರೊಂದಿಗೆ ಋಗ್ವೇದದ ಮಿತ್ರನೂ, ಆತನ ತಾಯಿಯಾದ ಅನಹಿತಳೂ ಪೂಜಾರ್ಹರಾಗಿದ್ದಾರೆ. ಇವರಲ್ಲಿ ವಹಗ್ನ ಎಂಬ ದೇವರೇ ಇಂದ್ರನಾಗಿದ್ದಾನೆ. ‘ವಹಗ್ನ’ ನಾಮಪದದಲ್ಲಿ ಎರಡು ಪದಗಳಿವೆ. ವಹ್ ಎಂದರೆ ಅಗ್ನಿ ಯೇ. ನಮ್ಮಲ್ಲಿ ವಹ್ನಿ ಕುಲಸ್ಥರಿದ್ದಾರಷ್ಟೇ-ಕರಗ ಹೊರುವವರು. ಅವರು ತಮ್ಮನ್ನು ಅಗ್ನಿ ವಂಶಸ್ಥರೆಂದೇ ಕರೆದುಕೊಳ್ಳುತ್ತಾರೆ. ವಹ್ ಎಂದರೆ ಅಗ್ನಿಯೇ. ಎರಡನೆಯ ಪದವಂತೂ ಅಗ್ನಿಯೇ ಆಗಿದೆ. ಈತ ವೃತ್ರಾಸುರ ಸರ್ಪವನ್ನು ಕೊಲ್ಲುವ ಪ್ರತಿಮೆ ಹೆಚ್ಚು ಪ್ರಸಿದ್ಧವಾಗಿದೆ. ಇವರು ತಮ್ಮ ದೇವಾಲಯವನ್ನು ಘರ್ನಿ ಅಂದರೆ ಘರ್ ಎಂದೇ ಕರೆಯುವುದು.

ಈಸ್ಟೋನಿಯ ದೇಶದವರು ತಮ್ಮ ಪೂರ್ವಿಕರ ಧರ್ಮವನ್ನೇ ಪುನರುತ್ಥಾನಗೊಳಿಸಲು ಪ್ರಯತ್ನಿಸುತ್ತಿದ್ದು, ಆ ಪಂಥಕ್ಕೆ ಅವರು ಕೊಟ್ಟುಕೊಂಡಿರುವ ಹೆಸರು ತಾರಾಯಿಸಂ. ಥಾರ್ ಅರ್ಥಾತ್ ಇಂದ್ರ ಇವರ ಪ್ರಧಾನ ದೇವರು. ಲಿಥುವೇನಿಯಾದವರು ತಮ್ಮ ಪಂಥವನ್ನು ರೋಮುವ ಅಂತ ಕರೆದುಕೊಂಡಿದ್ದಾರೆ. ದಏವ ಅಂದರೆ ಇಂದ್ರನೇ ಇವರಿಗೂ ಪ್ರಧಾನ ದೇವರು. ಇಂದ್ರನೊಂದಿಗೆ ಲೈಮ ಅರ್ಥಾತ್ ಲಕ್ಷ್ಮೀಯೂ ಮತ್ತು ಮರ ಎಂಬ ಮರಣ ದೇವತೆಯೂ ಇರುತ್ತಾಳೆ. ಅಗ್ನಿ ದೇವತೆಯನ್ನಿವರು ಉಗ್ನೀಸ್ ಎಂದು ಕರೆಯುತ್ತಾರೆ. ಸೌಲ್-ಸೂರ್ಯನನ್ನು ಆರಾಧಿಸುತ್ತಾರೆ. ಅಶ್ವಮೇಧದ ಸಾಂಕೇತಿಕ ಆಚರಣೆಯೂ ಇವರಲ್ಲಿದೆ. ಎಲ್ಲಾ ಧಾರ್ಮಿಕ ವಿಧಿಗಳಲ್ಲೂ ಅಗ್ನಿಯೇ ಲಿಥುವೇನಿಯನ್ನರ ಪಾಲಿಗೆ ಪ್ರಧಾನ ದೇವರು. ರೋಮೇನಿಯಾದಲ್ಲಿ ಪ್ರಾಚೀನ ಮಾಂತ್ರಿಕಾಚರಣೆಯ ಪಂಥವಿದ್ದು ಅಲ್ಲೂ ಇಂದ್ರನಿದ್ದಾನೆ. ಜರ್ಮನ್ನರ ಮೂಲ ಗಂಪಾದ ನಾರ್ಸ್ ಪಂಗಡದಲ್ಲೂ ‘ಒಡಿನಿಸಂ’ ಎಂಬ ಇಂದ್ರಪಂಥವಿದೆ. ಇವರಲ್ಲಿ ಯಮಿರ್ ಎಂಬ ಮೃತ್ಯುದೇವರಿದ್ದಾನೆ. ಉಳಿದಂತೆ ಯುರೇಷಿಯಾದ ಪೊಂಟಿಕ್ ಕ್ಯಾಸ್ಪಿಯನ್ ಸ್ಟೆಪ್ ಪ್ರದೇಶದಲ್ಲಿ ಕಕೇಷಿಯ ಆರ್ಯರು ನೆಲೆಸಿದ ಮೇಲೆ ‘ಯಹ್ವಾ’ ಎಂಬ ದೇವರು ಇವರೆಲ್ಲರಿಗೂ ಆದಿಮ ದೇವತೆಯಾಯಿತು. ಈ ಯಹ್ವನೇ ಇಂದು ಕ್ರೈಸ್ತ ಮತದ ಯಹೋವಾ/ಜಹೋವಾ. ಋಗ್ವೇದದ ಋಷಿ ಪೂರ್ವಿಕರಿಗೂ ಈ ಯಹ್ವನೇ ಆದಿದೇವತೆಗಳಲ್ಲೊಂದಾಗಿತ್ತಾಗಿ, ಋಗ್ವೇದದಲ್ಲಿ ಕೂಡ 41ಕಡೆ ಯಹ್ವಾನ ಉಲ್ಲೇಖವಿರುವುದು ಗಮನಾರ್ಹ. ಋಗ್ವೇದದ ಹೊತ್ತಿಗೆ ಯಹ್ವಾ ಎಂಬ ನಾಮಪದ ಬಹುತೇಕ ಗುಣವಾಚಕವಾಗಿ ಮಾರ್ಪಟ್ಟಿತ್ತು. ಯಹ್ವನೇ ರುದ್ರ ಎಂದು ವಿದ್ವಾಂಸರು ಸಾಬೀತು ಪಡಿಸಿದ್ದಾರೆ.

 ಇವತ್ತಿನ ಟರ್ಕಿ ಸಿರಿಯಾ ದೇಶಗಳು ಮೂರೂವರೆ ವರ್ಷಗಳ ಹಿಂದೆ ಹಿಟೈಟ್ ಮತ್ತು ಮಿತನ್ನಿ ಎಂಬ ಆರ್ಯ ಸಾಮ್ರಾಜ್ಯಗಳಾಗಿದ್ದವು. ಯುರೇಷಿಯಾದಿಂದಲೇ ಬಂದವರಿವರು. ಸಿರಿಯಾ ಎಂಬ ಹೆಸರು ಸೂರ್ಯನಿಂದಲೇ ಬಂದದ್ದು. ಮಿತನ್ನಿಯ ಮೊದಲ ಹೆಸರು ಕೀರ್ತ. ಈ ಸಾಲಿನಲ್ಲಿ ಬರುವ ಶತ್ರುಘ್ನನ ಮಕ್ಕಳು ದಶರಥ ಮತ್ತು ಭರತರು. ದಶರಥನ ಮಗ ಮತ್ತಿವಾಜ ಮತ್ತು ಹಿಟೈಟ್‌ನ ಸುಪ್ಟಿಲೂಲುಮಿಯ ಎಂಬ ರಾಜನ ನಡುವೆ ಏರ್ಪಟ್ಟ ಶಾಂತಿ ಒಪ್ಪಂದದಲ್ಲಿ ಅವರು ಸಾಕ್ಷಿಗಳನ್ನಾಗಿ ನಮೂದಿಸಿದ್ದು ಮಿತ್ರ, ವರುಣ, ಇಂದ್ರ, ನಾಸತ್ಯರು (ಅಶ್ವಿನಿಗಳು) ಮತ್ತು ಸೂರ್ಯ-ಅಗ್ನಿ ದೇವರುಗಳನ್ನು. ಟರ್ಕಿಯ ಬೋಗಾಜ್‌ಕಾಯ್ ಎಂಬಲ್ಲಿ 1907ರಲ್ಲಿ ದೊರೆತ ಕ್ಯೂನಿಫಾರಂ ಲಿಪಿಯ ಶಾಸನದಲ್ಲಿ ಈ ವಿವರಗಳಿವೆ. ಈ ಶಾಸನದಲ್ಲಿ ಹೆಸರಿಸಲ್ಪಟ್ಟ ವೈದಿಕ ದೇವರುಗಳ ಪಟ್ಟಿ ಋಗ್ವೇದದಲ್ಲಿ ಅದೇ ಅನುಕ್ರಮದಲ್ಲಿ ಉಲ್ಲೇಖಗೊಂಡಿರುವುದು ಗಮನಾರ್ಹ. ‘ಅಹಂ ಮಿತ್ರ ವರುಣೋಭ್ಯ ಬಿಬರ್‌ಮ್ಯಹಂ  ಅಹಂ ಇಂದ್ರಾಗ್ನಿ ಅಹಂ ಅಶ್ವಿನೋಭ...’ (ಋಗ್ವೇದ:10:125:1). ವೈದಿಕ ಮೂಲದ ಈ ಸಂಸ್ಕೃತಿ ಭಾರತದಿಂದ ಮಧ್ಯಪ್ರಾಚ್ಯ-ಏಶ್ಯ ಕಡೆ ಹೋದದ್ದಲ್ಲ. ಯಾಕೆಂದರೆ ಬೊಗಾಜ್‌ಕಾಯ್‌ನ ಶಾಸನ ಋಗ್ವೇದದ ಋಷಿಗಳಿಗೂ ಪರಿಚಯವಿಲ್ಲದಿದ್ದ ಆದಿಮ ಇಂಡೋ ಯುರೋಪಿಯನ್ ಭಾಷೆಯಲ್ಲಿದೆ. ಅಂದರೆ ಆ ಆದಿಮ ಭಾಷೆ ಯುರೇಷಿಯಾದ ಕಕೇಷಿಯನ್ನರಲ್ಲಿ

ಪ್ರಚಲಿತದಲ್ಲಿದ್ದಾಗಲೇ ಕೆಲವು ಗುಂಪುಗಳು ಅಲ್ಲಿಂದ ಹೊರಟು ಅನತೋಲಿಯ ಮೂಲಕ ಟರ್ಕಿ, ಸಿರಿಯಾಗಳತ್ತ ಬಂದು ತಮ್ಮದೇ ರಾಜ್ಯಗಳನ್ನು ಸ್ಥಾಪಿಸಿದ್ದವು.

ಕ್ರಿ.ಪೂ.4ನೇ ಶತಮಾನದಿಂದ 1ನೇ ಶತಮಾನದವರೆಗೂ ರೋಮ್‌ನಿಂದ ಪ್ರಾರಂಭವಾಗಿ ದನುಬೆ ನದಿ ಉದ್ದದ ಪ್ರದೇಶಗಳನ್ನು ಒಳಗೊಂಡಂತೆ ಲಂಡನ್‌ವರೆಗೂ ಋಗ್ವೇದದ ಪ್ರಮುಖ ದೇವರಾದ ಮಿತ್ರನ ರಹಸ್ಯ ಪಂಥ ದಟ್ಟವಾಗಿ ಹಬ್ಬಿತ್ತು. ಮಿತ್ರನಿಗೆ ಸಂಬಂಧಿಸಿದ ಸಾವಿರಕ್ಕೂ ಹೆಚ್ಚು ದೇವಾಲಯಗಳು ಮತ್ತು ನಾನೂರಕ್ಕೂ ಹೆಚ್ಚು ಶಾಸನಗಳು ರೋಮ್-ಯುರೋಪಿನಾದ್ಯಂತ ದೊರೆತಿವೆ. ಎತ್ತನ್ನು ಮಿತ್ರ ಕಠಾರಿಯಿಂದ ತಿವಿಯುತ್ತಿರುವ ಪ್ರತಿಮೆಯೇ ಬಹುತೇಕ ದೆವಾಲಯಗಳಲ್ಲಿ ದೊರೆತಿರುವುದು. ದೇವಾಲಯದ ಹೊರಗೆ ಗೋಮಾಂಸವನ್ನು ತಿಂದುಳಿಸಿದ ಮೂಳೆಗಳು ಉತ್ಖನನದಲ್ಲಿ ಹೇರಳವಾಗಿ ಸಿಕ್ಕಿವೆ ಕೂಡ.

ಮಿತ್ರ ಪಂಥದ ಎರಡನೇ ಪ್ರಮುಖ ದೇವರೇ ನರಸಿಂಹ. ಇಂದಿಗೂ ನರಸಿಂಹನ ಗುಹ್ಯ ಪಂಥ ಯುರೋಪಿನಲ್ಲಿ ಉಳಿದಿದೆ. ನಗ್ನರಾಗಿ ಆರಾಧಿಸುವುದು, ಹಚ್ಚೆ ಹಾಕಿಸಿಕೊಳ್ಳುವುದು ಇತ್ಯಾದಿಗಳಿವೆ. ಯುರೋಪಿನ ವಿವಿಧೆಡೆ ನರಸಿಂಹನನ್ನು ಅರಿಮಾನಿಯಸ್, ಜುರ್ವನ್, ಕ್ರೋನೋಸ್ ಎಂದೆಲ್ಲಾ ಕರೆಯುವುದುಂಟು. ಈ ಅರಿಮಾನಿಯಸ್ ಪಾರ್ಸಿಗಳಲ್ಲಿ ಅರ್ಹಿಮನ್ ಆಗಿ ಡೇವಿಲ್/ಕೆಡುಕಿನ ಶಕ್ತಿಯಾಗಿದ್ದಾನೆ. ಅರ್ಹಿಮನ್ನೇ ಋಗ್ವೇದದಲ್ಲಿನ ಆರ್ಯಮನ್. ಈಜಿಪ್ಟಿನಲ್ಲೂ ನರಸಿಂಹನ ಸಾಕಷ್ಟು ಪ್ರತಿಮೆಗಳು ಸಿಕ್ಕಿವೆ. ಈ ಮಿತ್ರ, ನರಸಿಂಹ, ಇಂದ್ರಾದಿಗಳ ಪರಿಕಲ್ಪನೆಗಳು ಯುರೇಷಿಯಾದಿಂದ ಯುರೋಪಿನತ್ತ ವಲಸೆ ಹೊರಟ ಕಕೇಷಿಯನ್ನರ ನೆನಪಿನ ಬಂಡಿಗಳೇರಿ ಅವರೊಂದಿಗೇ ಬಂದವರೆ ಹೊರತು ಭಾರತದಿಂದ ಪ್ರಭಾವಿತಗೊಂಡದ್ದಲ್ಲ ಎಂಬುದು ನಮ್ಮ ನೆನಪಲ್ಲಿರಲಿ.

ಯುರೇಷಿಯಾದಿಂದ ವೈದಿಕ ಆರ್ಯರು ಸಿಂತಾಷ್ಟ ಎಂಬಲ್ಲಿ ಪಾರ್ಸಿಗಳು, ಕುರ್ದಿಷ್, ಸ್ಕಿಥಿಯನ್ನರೊಂದಿಗೆ ಉಳಿದಿದ್ದು, ನೂರಾರು ವರ್ಷಗಳ ನಂತರ ಮಧ್ಯ ಏಶ್ಯಕ್ಕೆ ಬಂದರು. ಇಲ್ಲಿಯೇ ಅವರಿಗೆ ಸೋಮರಸದ ಪರಿಚಯವಾದದ್ದು. ಸೋಮ ಮಾದಕ ಪಾನೀಯವಲ್ಲ; ಬದಲಿಗೆ ಡ್ರಗ್! ನಂತರ ಇರಾನ್‌ನತ್ತ ಹೊರಟು ಅಲ್ಲಿ ಪಾರ್ಸಿಗಳೊಂದಿಗೆ ಎರಡು ಬಾರಿ ಯುದ್ಧ ಮಾಡಿ ಒಮ್ಮೆ ಗೆದ್ದು, ಎರಡನೇ ಬಾರಿ ಸೋತು ಭಾರತದತ್ತ ಪಲಾಯನ ಮಾಡಿದವರು. ದಾಶರಾಜ್ಞ ಯುದ್ಧವೆಂದು ಋಗ್ವೇದದಲ್ಲಿ ಈ ಯುದ್ಧದ ಉಲ್ಲೇಖವಿದೆ. ಯದು, ತುರ್ವಸು, ಪುರು, ದ್ರಹ್ಯು, ಅನು ಎಂಬ ಪಂಗಡಗಳ ವೈದಿಕ ಆರ್ಯರು ಹರಪ್ಪ ದಾಟಿ ಭಾರತ ಪ್ರವೇಶಿಸಿದರು. ಪುರುಗಳ ಉಪಪಂಗಡವಾದ ಭರತರ ರಾಜ ಕುರುಶ್ರವಣ ಮೊದಲು ತನ್ನ ಹೆಸರಿಂದಲೇ ಖ್ಯಾತವಾದ ಕುರುಕ್ಷೇತ್ರದಲ್ಲಿ ರಾಜ್ಯ ಸ್ಥಾಪಿಸಿದ. ಪಾರ್ಸಿಗಳ ಗ್ರೇಟರ್ ಇರಾನಿನಲ್ಲಿದ್ದ 16 ರಾಜ್ಯಗಳ ಪೈಕಿ ಹರೊಯು (ಸರಯೂ), ಹರಕ್‌ಸ್ವೈತಿ (ಸರಸ್ವತಿ) ಹಪ್ತ ಹಿಂದವಃ ಎಂಬ ರಾಜ್ಯಗಳು ನಮ್ಮ ಅಧ್ಯಯನಕ್ಕೆ ಮುಖ್ಯವಾದಂತಹವು. ಅಫ್ಘಾನ್‌ನ ಹರಿರುಧ್ ಎಂಬ ನದಿಯೇ ಆಗಿನ ಹರಕ್‌ಸ್ವೈತಿ. ವೈದಿಕ ಆರ್ಯರು ಭಾರತಕ್ಕೆ ಬಂದ ನಂತರ ಇಲ್ಲಿನ ಗಗ್ಗರ್-ಹಕ್ರಾ ನದಿಯನ್ನೇ ಸರಸ್ವತಿ ನದಿಯೆಂದು ಕರೆದುಕೊಂಡರು. ತಾವು ಬಿಟ್ಟು ಬಂದ ಪ್ರದೇಶದಲ್ಲಿನ ನದಿ, ಪರ್ವತಗಳ ಹೆಸರುಗಳನ್ನೇ ಹೊಸ ಪ್ರದೇಶದಲ್ಲಿ ಚಾಲ್ತಿಗೆ ತರುವುದು ಆಗಿನ ಪದ್ಧತಿಯಾಗಿತ್ತು. ಅಫ್ಘಾನ್‌ನ ಹರಕ್‌ಸ್ವೈತಿ ನದಿ ದಂಡೆಯ ಮೇಲೆಯೇ ಹತ್ತು ರಾಜರ ದಾಶರಾಜ್ಞ ಯುದ್ಧ ನಡೆದದ್ದು.ಈ ಉಲ್ಲೇಖವೂ ಋಗ್ವೇದದಲ್ಲಿದೆ. ಹಾಗೆ ನೋಡಿದರೆ ಮೂಲ ಸರಸ್ವತಿ ನದಿ ಇದ್ದದ್ದು ಆರ್ಕಟಿಕ್ ಪ್ರದೇಶದಲ್ಲೇ. ಅಲ್ಲಿ ಅದನ್ನು ಸರೌತಿ ನದಿಯೆಂದು ಸ್ಲಾವ್ ಜನ ಇಂದಿಗೂ ಕರೆಯುತ್ತಾರೆ!

ಇಂಡಸ್ ಜೊತೆಗೆ ಹರಿವ ಐದು ನದಿಗಳು ಮತ್ತು ಎರಡು ಉಪನದಿಗಳ ಕಾರಣದಿಂದಾಗಿ ಇರಾನ್ (ವರ್ಣಪಲ್ಲಟಗೊಂಡ ಆರ್ಯನ್) ಪಾರ್ಸಿಗಳು ಆ ಪ್ರದೇಶ/ರಾಜ್ಯವನ್ನು ಹಪ್ತಹಿಂದವಃ (ಸಪ್ತ ಸಿಂಧು) ಎಂದು ಕರೆದರು. ಹೀಗೆ ಇತಿಹಾಸದಲ್ಲಿ ಮೊದಲ ಬಾರಿಗೆ ಹಿಂದು ಎಂಬ ಪದ ಇರಾನಿನಲ್ಲಿ ಹುಟ್ಟಿತು, ಅದೂ ಪರ್ಷಿಯನ್ ಭಾಷೆಯಲ್ಲಿ! ಹಿಂದು ಎಂದರೆ ಮೂಲ ಅರ್ಥ ಹೊಳೆ/ನದಿ ಎಂದಿದೆ. ನಂತರ ಮುಸ್ಲಿಮ್ ವ್ಯಾಪಾರಿಯೊಬ್ಬ ಹಿಂದು ನದಿಯ ಆಚೆಗಿನ ಪ್ರದೇಶವನ್ನು ಹಿಂದುಸ್ಥಾನವೆಂದು ಕರೆದ. ಹಿಂದು ಸಂಸ್ಕೃತ ಭಾಷೆಗೆ ಅನುವಾದಗೊಂಡರೆ ಸಿಂಧು ಎಂದಾಗುತ್ತದೆ. ಮೂಲದಲ್ಲಿ ಹಿಂದು ಎಂಬುದು ನದಿಸೂಚಕ ಪದ. ನಂತರ ಪ್ರದೇಶ ಸೂಚಕ ಪದ. ಹಿಂದು ಧರ್ಮ ಎಂಬ ಪದ/ಪರಿಕಲ್ಪನೆ ಬಹುಶಃ ಇನ್ನೂರು ವರ್ಷಗಳಷ್ಟು ಕೂಡ ಹಿಂದಕ್ಕೆ ಸರಿಯಲಾರದು. ಸಂಸ್ಕೃತವನ್ನೂ ಒಳಗೊಂಡಂತೆ ಭಾರತದ ಯಾವುದೇ ಭಾಷೆಯ ಪ್ರಾಚೀನ ಸಾಹಿತ್ಯದಲ್ಲಾಗಲಿ, ಶಾಸನಗಳಲ್ಲಾಗಲಿ ‘ಹಿಂದೂ ಧರ್ಮ’ ಎಂಬ ಜೋಡಿ ಪದಗಳು ಸಿಗುವುದಿಲ್ಲ. ನಮ್ಮಲ್ಲೂ ಪಂಪನಾದಿಯಾಗಿ, ಜನ್ನ, ರನ್ನ, ವಚನ, ಹರಿಹರ, ರಾಘವಾಂಕ, ದಾಸ ಸಾಹಿತ್ಯ, ತತ್ವಪದಗಳು ಮತ್ತು ಜಾನಪದ ಸಾಹಿತ್ಯದಲ್ಲೆಲ್ಲೂ ‘ಹಿಂದೂ ಧರ್ಮ’ ಎಂಬುದರ ಉಲ್ಲೇಖವಿಲ್ಲ. ನೆಹರೂ ಮತ್ತು ಡಾ. ಎಸ್. ರಾಧಾಕೃಷ್ಣನ್ ಅವರು ಸಹ ಹಿಂದು ಎಂದರೆ ಪ್ರದೇಶ ಸೂಚಕ ಪದವೆಂದೇ ಹೇಳಿದ್ದಾರೆ. 1991ರಲ್ಲಿ ಜೆ.ಎಸ್.ವರ್ಮಾ ನೇತೃತ್ವದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವೂ ಸಹ ‘ಹಿಂದು ಎಂದರೆ ಜೀವನ ವಿಧಾನ’ ಅರ್ಥಾತ್ ನಿರ್ದಿಷ್ಟ ಧರ್ಮವಲ್ಲ ಎಂದೇ ತೀರ್ಪಿತ್ತಿದೆ. ಬಿಹಾರದ ಬಾರಾಬರ್ ಗುಹೆಯ ಶಾಸನದಲ್ಲಿ ಅಶೋಕನು ಕೂಡ ವೈದಿಕ ಧರ್ಮವೆಂದೇ ನಮೂದಿಸಿದ್ದಾನೆ. ಇತಿಹಾಸದಲ್ಲೆಲ್ಲೂ ಇಲ್ಲದಿದ್ದ ಹಿಂದುತ್ವ ಈಗ ಮುಂಚೂಣಿಗೆ ಬಂದು ನಿಂತಿದೆ!

ಒಟ್ಟಾರೆ ಜಗತ್ತಿನಾದ್ಯಂತದ ಕಕೇಷಿಯನ್ ಆರ್ಯರು ಆಧುನಿಕ ಜಗತ್ತಿಗೆ ನೀಡಿದ ವಿನಾಶಕಾರಿ ಕೊಡುಗೆಗಳಿವು: 1. ಯುದ್ಧಗಳ ಪರಿಕಲ್ಪನೆಯನ್ನು ಹುಟ್ಟು ಹಾಕಿದವರಿವರೇ. ಇಂದಿಗೂ ಬಹುತೇಕ ಯುದ್ಧಗಳಿಗೆ ಕಕೇಷಿಯನ್ನರೇ ಕಾರಣ. ಹಾಗಾಗಿ ಶಸ್ತ್ರಾಸ್ತ್ರ ಮಾರುಕಟ್ಟೆಯ ಮೂಲಕ ಬಿಲಿಯಾಂತರ ಡಾಲರುಗಳ ವ್ಯಾಪಾರ ನಡೆಸುತ್ತಿದ್ದಾರೆ-ಅದ್ಯಾವ ಪುರುಷಾರ್ಥಕ್ಕೋ ತಿಳಿಯುವುದಿಲ್ಲ.

 2. ಔಷಧ ಕಂಪೆನಿಗಳ ಮೂಲಕವೂ ಬಡದೇಶಗಳ ಹಣ ಲೂಟುತ್ತಿದ್ದಾರೆ.

3. ಪೆಟ್ರೋ ಡಾಲರುಗಳ ವ್ಯಾಪಾರವನ್ನೂ ತಮ್ಮ ಕಪಿಮುಷ್ಟಿಯಲ್ಲೇ ಇರಿಸಿಕೊಂಡಿದ್ದಾರೆ.

4. ಗುಲಾಮ ಪದ್ಧತಿ, ಜಾತಿಪದ್ಧತಿ, ಜನಾಂಗೀಯ ಅಸಹನೆಯ ರಕ್ತಪಾತಗಳು, ವಸಾಹತು ಸಂಸ್ಕೃತಿ, ಸಾಮ್ರಾಜ್ಯಶಾಹಿತ್ವಗಳೂ ಇವರಿತ್ತ ಶಾಪಗಳೇ.

5. ಆರ್ಕ್‌ಟಿಕ್ ಪ್ರದೇಶದಲ್ಲೇ ತ್ರಿವರ್ಣ ವ್ಯವಸ್ಥೆಯಿತ್ತು. ಜೊತೆಗೆ ನೀಲಿ ಕಣ್ಣವರು (ಶ್ರೇಷ್ಠ ದೇವಮಾನವರು-ಭೂಸುರರು), ಹಳದಿ ಕಣ್ಣು, ಬೂದುಗಣ್ಣು ಹಾಗೂ ಹಸಿರು ಕಣ್ಣುಗಳವರೆಂಬ ನಾಲ್ಕು ಗುಂಪುಗಳ ವಿಂಗಡಣೆಯೂ ಪೆರುನ್ ಮೂಲಕವೇ ಏರ್ಪಟ್ಟಿತ್ತು. ಯುರೋಪಿನಲ್ಲೂ ತ್ರಿವರ್ಣ ಪದ್ಧತಿಯಿದ್ದು ಅದನ್ನು Three Estates ಎಂದೇ ಕರೆಯುತ್ತಾರೆ. ಪಾದ್ರಿಗಳು, ಆಳುವವರ್ಗ (ಕ್ಷತ್ರಿಯ) ಮತ್ತು ರೈತಾಪಿ/ಸಾಮಾನ್ಯರೆಂಬ ವಿಂಗಡಣೆಯದು. ಫ್ರೆಂಚ್ ಕ್ರಾಂತಿಯ ಮುಖ್ಯ ಕಾರಣಗಳಲ್ಲಿ ಈ ತ್ರಿವರ್ಣ ವ್ಯವಸ್ಥೆಯ ಮೂಲಕದ ಶೋಷಣೆಯೂ ಒಂದಾಗಿತ್ತು ಎಂಬುದು ಗಮನಾರ್ಹ. ಪಾರ್ಸಿಗಳಲ್ಲಂತೂ ಚಾತುರ್ವರ್ಣ್ಯವೇ ಇತ್ತು.

 6. ಇದು ಸಾಲದೆಂಬಂತೆ 1865ರಲ್ಲಿ ಅಮೆರಿಕದಲ್ಲಿ ಆಂಗ್ಲೋ ಸ್ಯಾಕ್ಸನ್ ಸುಪ್ರಮೆಸಿಯ ಕು ಕ್ಲಕ್ಸ್ ಕ್ಲಾನ್ ಎಂಬ ‘ಕೆ.ಕೆ.ಕೆ.’ ಸಂಘಟನೆ ಹುಟ್ಟಿಕೊಂಡಿತ್ತು. ಎರಡು ಸಲ ನಿಷೇಧಕ್ಕೊಳಗಾಗಿ, ಟ್ರಂಪ್ ಕಾಲದಲ್ಲಿ ಮತ್ತೆ ಚಿಗುರತೊಡಗಿತ್ತು. ಟ್ರಂಪ್ ತಂದೆ ಈ ಕೆ.ಕೆ.ಕೆ. ಸಂಘಟನೆಯ ಸದಸ್ಯರಾಗಿದ್ದರು. ತಮ್ಮನ್ನು ಆರ್ಯರೆಂದೇ ಗುರುತಿಸಿಕೊಂಡಿದ್ದ ಹಿಟ್ಲರ್‌ನ ಜರ್ಮನಿಗಳು ನಾಝಿಗಳಾಗಿ ಲಕ್ಷಾಂತರ ಜೀವಗಳ ಮಾರಣಹೋಮಕ್ಕೆ ಕಾರಣರಾಗಿದ್ದರು. ಈಗ ಪುನಃ ನಿಯೋ ನಾಝಿಸಂ ಜರ್ಮನಿ, ಬ್ರಿಟನ್ ಹಾಗೂ ಅಮೆರಿಕದಲ್ಲೂ ತಲೆ ಎತ್ತತೊಡಗಿದೆ. ಭಾರತದಲ್ಲೂ ಕೋಮುವಾದವು ತಲೆ ಎತ್ತಿರುವುದು ಇದೇ ಕಕೇಷಿಯನ್ ಮೂಲದವರಿಂದಲೇ ಎಂಬುದರ ಸೂಕ್ಷ್ಮವನ್ನು ನಾವು ಗಮನಿಸಲೇಬೇಕಿದೆ. ಇಂತಹ ಕಕೇಷಿಯನ್ ಇತಿಹಾಸದ ಬೆನ್ನಿಗೆ ತೋಳ್ಬಲವಾಗಿ ಈಗ ನಿಂತಿರುವವರು ಮಾತ್ರ ನಾನ್-ಕಕೇಷಿಯನ್ನರೆಂಬುದೇ ನಮ್ಮ ಸಂದರ್ಭದ ದುರಂತ ಮತ್ತು ವಿರೋಧಾಭಾಸವಾಗಿದೆ! ಹೀಗೆ ತಮ್ಮ ಕಣ್ಣನ್ನು ತಾವೇ ಚುಚ್ಚಿಕೊಳ್ಳುವವರೂ ಉಂಟೇ?

ದ್ರಾವಿಡರ ಆದಿಮಾತೆಯಾದ ಕೊರವಿ, ಸ್ಕಂದನೊಂದಿಗೆ ಯಾವ ಬಾದರಾಯಣ ಸಂಬಂಧವೂ ಇಲ್ಲದ ಮುರುಗ (ಆಫ್ರಿಕನ್ ಮೂಲದ ಪೂರ್ವಿಕ ಪಿತೃ) ಮತ್ತು ಶಿವ-ಗಂಗೆಯರು, ಮಾರಿಮಸಣಿಯರು, ಸಾವಿರಾರು ಗ್ರಾಮದೇವತೆಗಳೇ ದ್ರಾವಿಡರ ಧರ್ಮಸತ್ವ ಮೂಲಗಳು. ನದಿ, ವೃಕ್ಷ, ಚಂದ್ರ, ನಾಗ, ಎತ್ತು, ಬೆಟ್ಟಗಳೇ ಧರ್ಮಪಂಥಗಳಾಗಿವೆ. ಜಾತಿ ತಿರಸ್ಕರಿಸಿದ ಭಕ್ತಿ ಪಂಥವೂ ದ್ರಾವಿಡದೊಡಲಲ್ಲಿ ಹುಟ್ಟಿಹಬ್ಬಿದ್ದೇ. ಆದರೀಗ ಭಾರತದ ಸಂಸ್ಕೃತಿ ಎಂಬುದು ನೀರಲ್ಲಿನ ಬೆಂಕಿಯಂತೆ, ಬಡಬಾನಲದಂತೆ ಕುದಿಯುತ್ತಿದೆ. ಪೂರ್ವಿಕ ಸಂಸ್ಕೃತಿಯ ಮಹಾಮರೆವು ಆವರಿಸಿ ನಾವು ದಿಕ್ಕೆಟ್ಟ ತಬ್ಬಲಿಗಳಂತಾಗಿದ್ದೇವೆ.

ದ್ರಾವಿಡ ಭಾಷಿಕರ ಮಟ್ಟಿಗೆ ಹೇಳುವುದಾದಲ್ಲಿ, ನಮ್ಮಲ್ಲಿ ಪ್ರಾಚೀನ ಕಾಲದಿಂದಲೂ ‘ದೇವ’ ಎಂಬುದರ ಪರಿಕಲ್ಪನೆಯೇ ಇರಲಿಲ್ಲ. ಯಾಕೆಂದರೆ ಆ ಪದವೇ ನಮ್ಮದಲ್ಲ. ನಾವೇನಿದ್ದರೂ ಪೂರ್ವಿಕ ಪಿತೃ/ಮಾತೆಯರ ಪೂಜಕರು. ಪೂರ್ವಿಕ ಪಿತೃವನ್ನು ದ್ರಾವಿಡ ಭಾಷೆಗಳಲ್ಲಿ ‘ಕೋ’ ಎಂದು ಕರೆಯುತ್ತಾರೆ. ಹಾಗಾಗಿಯೇ ‘ಕೋ’ ಇರುವ ‘ಇಲ್ಲು’ (ಮನೆ) ಕೋಯಿಲ್ ಎಂದಾಯಿತು. ತೆಲುಗಲ್ಲಿ ಕೋವೆಲ ಎನ್ನುತ್ತಾರೆ. ಕನ್ನಡದಲ್ಲೂ ಇದ್ದ ಈ ಪದ ಈಗ ಭೂತ ‘ಕೋ’ಲ ಮತ್ತು ‘ಕೋಬಲಿ’ ಎಂಬಲ್ಲಿ ಮಾತ್ರ ಉಳಿದಂತಿದೆ. ದ್ರಾವಿಡರು ನಾಗಾರಾಧಕರು? ಆಫ್ರಿಕನ್ನರಂತೆಯೇ. ಕಕೇಷಿಯನ್ನರು ಸರ್ಪ ಸಂಹಾರಕರು ಮತ್ತು ಕಾಳಿಂಗ ಮರ್ಧನರು. ವೈದಿಕರು ಯಜ್ಞದ ಅಗ್ನಿ ಆರಾಧಕರು-ಹಾಗಾಗಿ ಯಜನ ಸಂಸ್ಕೃತಿಯವರು. ದ್ರಾವಿಡರು ಶಿವ-ಗಂಗಾಧರನ ಜಲ ಒಕ್ಕಲುಗಳು. ನಾವು ಪೂ (ಹೂ) ಇಟ್ಟು ಆರಾಧಿಸುವುದರಿಂದ ಪೂಜನ ಧರ್ಮದವರು. ಅವರು ಕರ್ಮಸಿದ್ಧಾಂತದ ಜಾತಿಯ ತಾರತಮ್ಯ ಹುಟ್ಟುಹಾಕಿದರೆ, ನಮ್ಮಲ್ಲಿ ದಲಿತ ಬೇಡರ ಕಣ್ಣಪ್ಪ, ಅಸ್ಪಶ್ಯ ನಯನಾರರು, ಮಹಿಳೆಯರಾದ ಹೇಮರೆಡ್ಡಿ ಮಲ್ಲವ್ವ, ಕೋಳೂರ ಕೊಡಗೂಸುಗಳು ಕೂಡ ಶಿವಪದವನ್ನು ಪಡೆದರು.

ದ್ರಾವಿಡರ ಆದಿಮಾತೆಯಾದ ಕೊರವಿ, ಸ್ಕಂದನೊಂದಿಗೆ ಯಾವ ಬಾದರಾಯಣ ಸಂಬಂಧವೂ ಇಲ್ಲದ ಮುರುಗ (ಆಫ್ರಿಕನ್ ಮೂಲದ ಪೂರ್ವಿಕ ಪಿತೃ) ಮತ್ತು ಶಿವ-ಗಂಗೆಯರು, ಮಾರಿಮಸಣಿಯರು, ಸಾವಿರಾರು ಗ್ರಾಮದೇವತೆಗಳೇ ದ್ರಾವಿಡರ ಧರ್ಮಸತ್ವ ಮೂಲಗಳು. ನದಿ, ವೃಕ್ಷ, ಚಂದ್ರ, ನಾಗ, ಎತ್ತು, ಬೆಟ್ಟಗಳೇ ಧರ್ಮಪಂಥಗಳಾಗಿವೆ. ಜಾತಿ ತಿರಸ್ಕೃರಿಸಿದ ಭಕ್ತಿ ಪಂಥವೂ ದ್ರಾವಿಡದೊಡಲಲ್ಲಿ ಹುಟ್ಟಿಹಬ್ಬಿದ್ದೇ. ಆದರೀಗ ಭಾರತದ ಸಂಸ್ಕೃತಿ ಎಂಬುದು ನೀರಲ್ಲಿನ ಬೆಂಕಿಯಂತೆ, ಬಡಬಾನಲದಂತೆ ಕುದಿಯುತ್ತಿದೆ. ಪೂರ್ವಿಕ ಸಂಸ್ಕೃತಿಯ ಮಹಾಮರೆವು ಆವರಿಸಿ ನಾವು ದಿಕ್ಕೆಟ್ಟ ತಬ್ಬಲಿಗಳಂತಾಗಿದ್ದೇವೆ.

ಈ ವಿವರಗಳ ಮೂಲಕ ನಮಗೀಗ ಅರ್ಥವಾಗುವ ಇತಿಹಾಸದ ಸತ್ಯವೇನೆಂದರೆ ಜನಾಂಗೀಯ, ಧರ್ಮ-ಸಂಸ್ಕೃತಿಗಳ ವಿಚಾರಗಳಲ್ಲಿ ಭಾರತದ ಕಕೇಷಿಯನ್ ಆರ್ಯ ವೈದಿಕರು ಭಾರತದ ಶೇಕಡ 80 ಭಾಗದ ಜನ ಸಮುದಾಯಗಳಿಗಿಂತಲೂ ಸಂಪೂರ್ಣ ಭಿನ್ನ. ಆದರೆ ಕಳೆದ ಮೂರು ಸಾವಿರ ವರ್ಷಗಳಲ್ಲಿ ಉತ್ತರ ಭಾರತದ ಈ 20ರಷ್ಟು ಅಲ್ಪಸಂಖ್ಯಾತ ಮಂದಿ ಇಡೀ ದೇಶ-ಜನಸಮುದಾಯದ ಮೇಲೆ ತಮ್ಮ ಹಿಡಿತವನ್ನು ಸಾಧಿಸಿದರು. ಇದು ಮನಸ್ಸಿಗೆ ಮೂಗುದಾರ ಹಾಕುವ ಭಾವನಾತ್ಮಕ ಹಾಗೂ ಮನೋವೈಜ್ಞಾನಿಕ ಮಾದರಿಯಾಗಿದೆ. ದೇವನೂರ ಮಹಾದೇವ ಅವರು ಹೇಳಿದಂತೆ ಭಾರತದ ಸಂಸ್ಕೃತಿ ಚಿತ್ರಣವಿಂದು ಹೇಗಿದೆಯೆಂದರೆ, ‘ಸೊಳ್ಳೆಯೊಂದು ಆನೆಯ ಜುಟ್ಟು ಹಿಡಿದಿದೆ’! ಭಾರತೀಯ ಕಕೇಷಿಯನ್ನರ ಕೋಮುವಾದವೆನ್ನುವುದು ನನ್ನ ಪ್ರಕಾರ ಕೇವಲ ಒಂದು ಮುಖವಾಡ ಅಥವಾ ಇಲ್ಲಿನ ಸಮುದಾಯವಿಡೀ ತಮ್ಮ ಪರವೇ ನಿಲ್ಲುವಂತೆ ಮಾಡಬಲ್ಲ ಜಾಣ ತಂತ್ರಗಾರಿಕೆ ಮಾತ್ರ! ಅವರ ಮೂಲ ಉದ್ದೇಶ ತಮ್ಮ ಕಕೇಷಿಯನ್ ಆರ್ಯ ಜನಾಂಗವೇ ಎಂದೆಂದಿಗೂ ಈ ದೇಶದಲ್ಲಿ ಅಧಿಕಾರ, ಆಸ್ತಿ, ಸಂಪತ್ತು, ಸಂಸ್ಕೃತಿ ಹಾಗೂ ಧಾರ್ಮಿಕ ಮುಖಂಡತ್ವವನ್ನು ನಿರ್ವಹಿಸುತ್ತಿರಬೇಕು ಎಂಬುದಾಗಿದೆ. ಈ ರಹಸ್ಯ ಉದ್ದೇಶ ಈಡೇರಿಕೆಗಾಗಿಯೇ ಧರ್ಮ ಅಪಾಯದಲ್ಲಿದೆ, ಧಾರ್ಮಿಕವಾಗಿ ಒಗ್ಗೂಡಿ ಧರ್ಮಾಧಾರಿತ ರಾಷ್ಟ್ರ ನಿರ್ಮಿಸಬೇಕು ಎಂಬ ಅತಿಭಾವುಕವಾದ ಸಂದೇಶಗಳನ್ನು ಪ್ರತಿಯೊಬ್ಬರ ಎದೆಯಲ್ಲೂ ಬೀಜಗಳಂತೆ ಬಿತ್ತುತ್ತಿರುವುದು. ಈ ಕಕೇಷಿಯನ್ನರನ್ನು ಇಲ್ಲಿನ ಯಾವ ಬಹುಸಂಖ್ಯಾತ ಜನರು ತಮ್ಮ ಜೀವಗಳನ್ನೇ ಒತ್ತೆಯಿಟ್ಟು ಬೆಂಬಲಿಸುತ್ತಿದ್ದಾರೋ? ಆ ಅದೇ ಶೂದ್ರಾದಿಗಳ ಪೂರ್ವಿಕರು ನಂಬಿ ಆಚರಿಸುತ್ತಿದ್ದ ದ್ರಾವಿಡ ಪೂಜನಾ ಧರ್ಮ ಮತ್ತು ಸಂಸ್ಕೃತಿಗಳನ್ನೇ ವೈದಿಕರು ಕಾಲಕಾಲದಲ್ಲಿ ತಿರುಚಿ, ವಿರೂಪಗೊಳಿಸಿ, ಶೂದ್ರಾದಿಗಳನ್ನು ವೈದಿಕ ಮೂಲದ ಜಾತಿಶ್ರೇಣಿಯ ಪದ್ಧತಿಯಿಂದಲೇ ಗುಲಾಮರನ್ನಾಗಿಸಿ ಆಳುತ್ತಿದ್ದಾರೆಂಬ ಸತ್ಯದ ಹಿಂದಿನ ಸತ್ಯವನ್ನು ಈ ಕ್ಷಣಕ್ಕೂ ಮನಗಾಣದಿರುವುದೇ ನಿಜವಾದ ಸಂಸ್ಕೃತಿ ದುರಂತ! ಈ ಜಾತಿ ಗುಲಾಮತನವೇ ತಮ್ಮ ಪಾಲಿನ ಶ್ರೇಷ್ಠತೆಯೆಂಬಂತೆಯೂ ನಂಬಿಸಿರುವುದು ಮತ್ತು ಇತಿಹಾಸದ ಪ್ರಜ್ಞೆಯೇ ಇರದಂತಹ ಧರ್ಮದಮಲು ಮತ್ತು ಭ್ರಮೆಯ ಕೂಪದಲ್ಲಿ ಕೆಡವಿರುವುದಂತೂ ದಯನೀಯವೆಂಬಂತಿದೆ. ಈ ನೆಲದ ಬಹುಸಂಖ್ಯಾತ ಜನರೆಂದೂ ತಮ್ಮ ವಿರುದ್ಧ ನಿಲ್ಲದಂತೆಯೂ, ತಮ್ಮನ್ನು ಪ್ರಶ್ನಿಸದಂತೆಯೂ ಅತ್ಯಂತ ನಾಜೂಕಾಗಿಯೂ, ಭಾವನಾತ್ಮಕವಾಗಿಯೂ ಹೆಣೆದಿರುವ ಈ ವೈದಿಕ ಸಂಸ್ಕೃತಿ ಜಾಲವು ಭಾರತದ ಸಾಮುದಾಯಿಕ ಮನಸ್ಸನ್ನು ಸದಾ ಗುಲಾಮೀತನದಲ್ಲಿಯೇ ಉಳಿಸಿಡಲು ರೂಪಿಸಿರುವ ಒಂದು ದೂರಗಾಮಿ ಆಲೋಚನೆಯ ಸಾಫ್ಟ್‌ವೇರ್ ಆಗಿದೆ. ಅದನ್ನು ಭಾರತೀಯ ಮನಸ್ಸಿಗೆ ಕ್ರಮಕ್ರಮವಾಗಿಯೂ, ಯಶಸ್ವಿಯಾಗಿಯೂ ಅಳವಡಿಸಲಾಗಿದೆ. ಈ ಸಾಫ್ಟ್‌ವೇರ್ ಎಂದೂ, ಯಾವುದೇ ಕಾರಣಕ್ಕೂ ಕರಪ್ಟ್ ಆಗದಂತೆಯೂ, ದುರ್ಬಲವಾಗದಂತೆಯೂ ಸಂರಕ್ಷಿಸಬಲ್ಲ ಕೋಮುವಾದಿ ಅಸಹನೆಯ ಮತ್ತು ಜಾತಿ ಛಿದ್ರೀಕರಣದ ಆ್ಯಂಟಿವೈರಸ್‌ಗಳನ್ನು ಕೂಡ ಭಾರತೀಯ ಮನಸ್ಸಿಗೆ ಇನ್‌ಸ್ಟಾಲ್ ಮಾಡಲಾಗಿದೆ. ಇಷ್ಟರ ನಡುವೆಯೂ ಧ್ವನಿ ಎದ್ದಲ್ಲಿ ರಾಷ್ಟ್ರದ್ರೋಹ, ಧರ್ಮದ್ರೋಹದ ಆರೋಪಗಳೊಂದಿಗೆ ‘ದಂಡಂ ದಶಗುಣಂ’ ಎಂಬ ಕ್ರೌರ್ಯದ ಕೊನೆ ಅಸ್ತ್ರಗಳನ್ನೂ ಪ್ರಯೋಗಿಸಲಾಗುತ್ತಿದೆ. ಹೀಗಾಗಿ ಸದ್ಯದಲ್ಲಿ ಭಾರತೀಯ ಮನಸ್ಸು ಮತಾಂಧತೆಯಿಂದ ವಿಚಲಿತವೂ ಆಗದು; ನಿವೃತ್ತಿಯೂ ಹೊಂದದು. ಜೀವಕಾರುಣ್ಯ ಉಕ್ಕಬೇಕಿರುವ ಸಂತಮನಸ್ಸೇ ಸದಾ ಹಿಂಸಾತ್ಮಕವಾಗಿ ಯೋಚಿಸುವಂತಾಗಿ ಹೋಗಿರುವುದೇ ನಿಜವಾದ ಧರ್ಮದುರಂತವಾಗಿದೆ! ಇಹಲೋಕವನ್ನೇ ಮಿಥ್ಯೆ, ಭ್ರಮೆಗಳೆಂದು ಹೇಳಿ, ಪರಬ್ರಹ್ಮವೇ ಸತ್ಯವೆಂದು ನಂಬಿಸುತ್ತಲೇ, ಅದೇ ಇಹದ ರಾಜಕೀಯ ಜಂಜಾಟಗಳಿಗೆ ಧರ್ಮವನ್ನೇ ದಾಳವಾಗಿಸಿರುವುದು ನಿಜದರ್ಥದಲ್ಲಿ ಧರ್ಮದ್ರೋಹದ ಕೆಲಸವಾಗಿದೆಯೆಂಬ ಮೂಲ ಅಂಶವನ್ನೇ ಭಾರತೀಯ ಮನಸ್ಸು ಬೇಕೆಂತಲೇ ಮರೆಯುತ್ತಿದೆಯಾ?

ಇದರ ಪರಿಣಾಮಗಳು ಹೀಗಿವೆ:

1) ಮೂಲತಃ: ಕಕೇಷಿಯನ್ ಜನಾಂಗದವರಲ್ಲದ ಈ ನೆಲದ ಶೂದ್ರಾದಿ ದ್ರಾವಿಡ, ದ್ರಾವಿಡ ಪೂರ್ವ ಆದಿವಾಸಿಗಳು, ಆಸ್ಟ್ರೋ-ಏಶ್ಯಟಿಕ್‌ನ ಕೋಲಾ-ಮುಂಡಾ-ಸಂತಾಲರಂತಹ ಬುಡಕಟ್ಟು-ಅಲೆಮಾರಿಗಳ ಬಹುಸಂಖ್ಯಾತರು ಮೂಲತಃ ತಮ್ಮದಲ್ಲದ ಸಂಸ್ಕೃತಿ ಪರಂಪರೆಯನ್ನು ತಮ್ಮದೆಂದೇ ಭ್ರಮಿಸಿರುವುದರಿಂದ ದ್ವಿತೀಯ ಪ್ರಜೆಯ ನಿಕೃಷ್ಟ ಸ್ಥಿತಿಯನ್ನೇ ಅನಿವಾರ್ಯವೆಂಬಂತೆ ಒಪ್ಪಿಕೊಂಡಿರಬೇಕಿದೆ.

2) ಧಾರ್ಮಿಕ ಮೂಲದ ಜಾತಿಪದ್ಧತಿಯ ಕಾರಣಕ್ಕಾಗಿ ತಾರತಮ್ಯ ಭೇದಗಳನ್ನು ಸಹಿಸಿಕೊಳ್ಳುವುದರೊಂದಿಗೆ, ದೌರ್ಜನ್ಯ, ಹಲ್ಲೆ, ಕೊಲೆ, ಅತ್ಯಾಚಾರಗಳಿಗೆ ಗುರಿಯಾಗಿಯೂ ನ್ಯಾಯವಂಚಿತರಾಗಿ ಬಾಳಬೇಕಿದೆ. ಜಾತಿಯ ಒಂಟಿ ಒಂಟಿ ದ್ವೀಪಗಳಲ್ಲಿರುವುದರಿಂದ ಒಗ್ಗೂಡುವುದೂ ಸದ್ಯ ಅಸಾಧ್ಯವೆಂಬಂತಾಗಿದೆ.

3) ಈ ದೇಶದ ಸಂಪತ್ತು, ಅಧಿಕಾರ, ವಿದ್ಯೆ-ನೌಕರಿಗಳಂತಹ ಸವಲತ್ತುಗಳಲ್ಲೂ ಬಹುಜನರಿಗೆ ಪಾಲು ಸಿಗದೆ ವಂಚಿತರಾಗಬೇಕಿದೆ.

4) ಆತ್ಮಗೌರವದ ಬದುಕಿಗೆ ಎರವಾಗಿ, ಘನತೆಯ ಅಸ್ಮಿತೆಯೇ ಇಲ್ಲದಂತೆ ಜೀವಚ್ಛವಗಳಂತೆ ದಿನದೂಡಬೇಕಿದೆ. ‘ಆತ್ಮಗೌರವವಿಲ್ಲದ ಬದುಕು ಕಲೇವರಕ್ಕೆ ಸಮ’ ಎಂಬ ಮಾತಿನಂತೆಯೇ ನಮ್ಮ ಇಂದಿನ ಅವಸ್ಥೆ ಇರುವುದರಿಂದ ಸಹಜವಾಗಿಯೇ ಸಾಮಾನ್ಯ ಜನ ಸಾಂಸ್ಕೃತೀಕರಣಕ್ಕೆ ಶರಣಾಗಿ, ಆ ಬದುಕಲ್ಲೇ ತೇಪೆಹಾಕಿದ ಸುಳ್ಳುಗಳ ಅಸ್ಮಿತೆಯನ್ನೇ ಅಪ್ಪಿ ಸ್ವಯಂ ಸಂತೈಸಿಕೊಳ್ಳುತ್ತಿದ್ದಾರೆ. ಸಾಮಾನ್ಯ ವಿವೇಕ-ವಿವೇಚನೆಯನ್ನೂ ಬಳಸಲಾರದಷ್ಟು ದುರ್ಬಲಗೊಂಡಿದ್ದಾರೆ. ಈಗಿನ ವ್ಯವಸ್ಥೆಯನ್ನು ಬಲಪಡಿಸುವುದೇ ತಮ್ಮ ಭಾರತೀಯ ಬದುಕಿನ ಪರಮೋಚ್ಚ ಗುರಿಯೆಂಬಂತೆಯೂ, ಅದೇ ನಿಜವಾದ ವಿಮೋಚನೆಯ ಮಾರ್ಗವೆಂದೂ ಮುಗ್ಧವಾಗಿ ನಂಬಿಬಿಟ್ಟಿದ್ದಾರೆ.

ಹೀಗೆ ಮನೋವಿಕಲ್ಪಗಳಿಗೆ ಈಡಾಗಿ ಆವೇಶದ ಅಲೆಗಳಲ್ಲಿ ಗೊತ್ತು ಗುರಿಯಿಲ್ಲದಂತೆ ಕೊಚ್ಚಿ ಹೋಗುತ್ತ, ಬೇರ್ಯಾರೋ ಜನಾಂಗವಾದಿಗಳ ಐಷಾರಾಮಿ ಬದುಕಿಗಾಗಿ ತಮ್ಮ ಬದುಕುಗಳನ್ನೇ ತೇದುಕೊಳ್ಳುತ್ತಿರುವವರಿಗೆ ಈ ನೆಲದ ಧರ್ಮ-ಸಂಸ್ಕೃತಿ-ಭಾಷಾ ಇತಿಹಾಸದ ನೈಜ ಸ್ವರೂಪವನ್ನು ಪರಿಚಯಿಸಿಕೊಡಲೇಬೇಕಾದ ತುರ್ತು ಇಂದು ನಮ್ಮೆದುರಿಗಿದೆ. ಭಾರತದ ಸತ್ಯನಿಷ್ಠುರ ಸಂಸ್ಕೃತಿ ಇತಿಹಾಸವನ್ನು ಮನಗಾಣಿಸಿ ಕೊಡುವುದೇ ಒಂದು ಜಟಿಲ ಸವಾಲಾಗಿರುವುದರೊಂದಿಗೆ, ಹಾಗೆ ಮಾಡದಿದ್ದಲ್ಲಿ ಧರ್ಮದಮಲಿನ ಸಮ್ಮೋಹನಾಸ್ತ್ರಕ್ಕೆ ಶರಣಾಗಿ ‘ಸಂಸ್ಕೃತಿ ಜೀತಗಾರ’ರಾಗಿ ಮಾರ್ಪಟ್ಟಿರುವ ಬಹುಸಂಖ್ಯಾತ ಜನಸ್ತೋಮಕ್ಕೆ ನಿಜವಾದ ಅರ್ಥದಲ್ಲಿ ವಿಮೋಚನೆಯೆಂಬುದು ಮರೀಚಿಕೆಯಾಗಿದೆ.

ಪರ್ಯಾಯ ಸಂಸ್ಕೃತಿಯ ಬಗ್ಗೆ ಪುಂಖಾನುಪುಂಖವಾಗಿ ಮಾತಾಡುವುದರ ಬದಲಿಗೆ ನಾವಿಂದು ಗಟ್ಟಿಯಾದ ಕ್ರಿಯಾಶೀಲ ನಿರ್ಧಾರಗಳನ್ನೇ ಕೈಗೊಳ್ಳಬೇಕಿದೆಯೆನಿಸುತ್ತಿದೆ. ಭಾರತದ ನಿಜವಾದ ಸಂಸ್ಕೃತಿ ಇತಿಹಾಸದ ಎಳೆಎಳೆಯನ್ನೂ ಜನರೆದುರಿಗೆ ಮಂಡಿಸುವ ಪ್ರಯತ್ನ ಮಾಡಿನೋಡುವ. ಸ್ವಂತಿಕೆಗೂ ಎರವಾಗಿರುವವರು ತಮಗೂ ತಮ್ಮದೇ ಆದ ಸಂಸ್ಕೃತಿಯ ಪರಂಪರೆಯೊಂದಿದೆ ಎಂಬ ಪೂರ್ವಿಕ ಅಸ್ಮಿತೆ-ಆತ್ಮಗೌರವದ ಹೊಸ ದಿಕ್ಕಿನತ್ತ ಆಶಾವಾದಿಗಳಾಗಿ ನೋಡುವಂತೆ ಮಾಡುವ. ಕಕೇಷಿಯನ್ ಆರ್ಯರು ನಮ್ಮ ಪೂರ್ವಿಕರ ಬಂಧು ಸಮಾಜಕ್ಕೆ ಹೊರತಾಗಿ ರೂಪಿಸಿರುವ ಜಾತಿ ಪದ್ಧತಿಯಂತಹ ಪರಕೀಯ ಕಕೇಷಿಯನ್ ಪರಿಕಲ್ಪನೆಗಳನ್ನು ತ್ಯಜಿಸದ ಹೊರತು, ನಾವು ಎಂದೆಂದಿಗೂ ಕಕೇಷಿಯನ್ನರ ಗುಲಾಮೀತನದಿಂದ ಮುಕ್ತರಾಗುವುದೇ ಇಲ್ಲವೆಂಬ ಕಠೋರ ನಿಜವನ್ನು ಮನವರಿಕೆ ಮಾಡಿಕೊಡುವ.

ಭಾರತದ ವರ್ತಮಾನದ ಪರಿಸ್ಥಿತಿ ಹೀಗೆ ಜಟಿಲವಾಗಿರುವಾಗ ಸಂವಿಧಾನದ ಘನತೆಯದ್ದೂ, ಮೌಲ್ಯಯುತವೂ ಆದ ಜಾತ್ಯತೀತ ಆಶಯಗಳನ್ನು ಉಳಿಸಬೇಕೆಂಬ ನಮ್ಮಗಳ ಹೋರಾಟದ ಸ್ವರೂಪವನ್ನು ನಾವೀಗ ನಿಷ್ಠುರ ರೀತಿಯಲ್ಲಿ ಆತ್ಮಾವಲೋಕನಕ್ಕೆ ಒಡ್ಡಿಕೊಳ್ಳಲೇಬೇಕಿದೆ. ಈ ನೆಲದಲ್ಲಿ ಬಹುಶಃ ಭಕ್ತಿ ಚಳವಳಿ, ವಚನ, ತತ್ವಪದಗಳು, ಅನುಭಾವಿ ಸಂತ ಪರಂಪರೆ, ಕಾಲುದಾರಿ ಪಂಥಗಳು ಹಾಗೂ ಜಾನಪದೀಯ ಮೂಲದ ನಿಸರ್ಗ ಅಧ್ಯಾತ್ಮಗಳ ಪರಂಪರೆಯನ್ನು ಹೊರತುಪಡಿಸಿದರೆ, ಬಹುತೇಕ ಜನಾಂದೋಲನಗಳೆಲ್ಲವೂ ಕೇವಲ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ನೆಲೆಯಿಂದಲಷ್ಟೇ ಜನಸಮುದಾಯವನ್ನು ಒಗ್ಗೂಡಿಸುವ ಪ್ರಯತ್ನಗಳನ್ನು ನಡೆಸಿವೆ. ಯಾಕೋ, ಈ ಕ್ಷಣಕ್ಕೂ ನನಗೆ ಅರ್ಥವಾಗಿಲ್ಲದ ಸಂಗತಿಯೇನೆಂದರೆ, ಈ ಎಲ್ಲಾ ಜನಾಂದೋಲನಗಳೂ ಸಂಸ್ಕೃತಿಯ ವಿಚಾರಗಳನ್ನು ನಿರ್ದಯವಾಗಿ ಅಂಚಿಗೆ ದೂಡುತ್ತಲೇ ಬಂದಿರುವುದು. ಸಂಸ್ಕೃತಿಯೆಂದರೆ ಕೇವಲ ಮತಮೌಢ್ಯವೆಂಬಂತೆ ಪರಿಭಾವಿಸಿ ತಿರಸ್ಕರಿಸಿದಂತೆಯೇ ಕಾಣಿಸುತ್ತಿದೆ. ಆದರೆ ಇಡೀ ಜಗತ್ತಿನ ಇತಿಹಾಸದಲ್ಲಿ ಸಂಸ್ಕೃತಿ ಸಂಗತಿಗಳಿಲ್ಲದೆ ಮನುಷ್ಯಜೀವಿ ಬದುಕಿದ್ದ ಉದಾಹರಣೆಯೇ ನಮಗೆ ಕಾಣಸಿಗುವುದಿಲ್ಲ. ಸಂಸ್ಕೃತಿ ಎಂಬುದು ಜನರ ಉಸಿರಾಟದಂತಿರುವಾಗ ಸಂಸ್ಕೃತಿರಹಿತವಾದ ಶೂನ್ಯದಲ್ಲಿ ಅವರು ನಿಂತು ನಮ್ಮ ಕರೆಗೆ ಕಿವಿಗೊಡಬೇಕೆಂಬಂತೆ ನಾವು ನಿರೀಕ್ಷಿಸುತ್ತಿದ್ದೇವೆ! ಹೀಗಾಗಿ ‘ಸಂಸ್ಕೃತಿ’ ಕುರಿತ ನಮ್ಮ ಜಡ ನಿಲುವುಗಳು ಸಹಜವಾಗಿಯೇ ಸಮುದಾಯದಲ್ಲಿ ನಿಃಸ್ಪಂದದಲ್ಲಿ ಕೊನೆಗೊಂಡು ಜನ ನಮ್ಮಂತಹವರಿಂದ ದೂರವೇ ಸರಿಯುವಂತಾಗುತ್ತಿದೆ. ಜನಶಕ್ತಿಯೇ ನಮ್ಮಿಂದಿಗಿಲ್ಲದಿರುವಾಗ ಏನನ್ನು ನೆಚ್ಚಿಕೊಂಡು ನಾವು ಸಮಾಜ ಬದಲಾವಣೆಯತ್ತ ಮುಂದುವರಿಯೋಣ? ಇದರ ಪರಿಣಾಮವಾಗಿ ನಮ್ಮ ಹೋರಾಟಗಳೆಲ್ಲವೂ ಅತ್ಯಲ್ಪ ಸಂಖ್ಯೆಯ ಸಮಾನ ಮನಸ್ಕ ಪ್ರಗತಿಪರ ಗುಂಪುಗಳಲ್ಲೇ ಹುಟ್ಟಿ, ಅಲ್ಲೇ ಕೊನೆಗೊಳ್ಳುತ್ತಿವೆ. ಆದರೆ ಮತ್ತೊಂದೆಡೆ ಅದೇ ಜನಾಂಗವಾದಿಗಳು ಅದೇ ಸಂಸ್ಕೃತಿ ವಿಚಾರವನ್ನೇ ಭಾವುಕ ವಿಷವಲಯಕ್ಕೆ ಸಮುದಾಯವನ್ನು ತಳ್ಳುವ ಸಾಧನವನ್ನಾಗಿ ಬಳಸುತ್ತಿರುವ ದುರಂತಕ್ಕೂ ನಾವೇ ಜೀವಂತ ಸಾಕ್ಷಿಯಾಗುತ್ತಿದ್ದೇವೆ.

ಪರ್ಯಾಯ ಸಂಸ್ಕೃತಿಯ ಬಗ್ಗೆ ಪುಂಖಾನುಪುಂಖವಾಗಿ ಮಾತಾಡುವುದರ ಬದಲಿಗೆ ನಾವಿಂದು ಗಟ್ಟಿಯಾದ ಕ್ರಿಯಾಶೀಲ ನಿರ್ಧಾರಗಳನ್ನೇ ಕೈಗೊಳ್ಳಬೇಕಿದೆಯೆನಿಸುತ್ತಿದೆ. ಭಾರತದ ನಿಜವಾದ ಸಂಸ್ಕೃತಿ ಇತಿಹಾಸದ ಎಳೆಎಳೆಯನ್ನೂ ಜನರೆದುರಿಗೆ ಮಂಡಿಸುವ ಪ್ರಯತ್ನ ಮಾಡಿನೋಡುವ. ಸ್ವಂತಿಕೆಗೂ ಎರವಾಗಿರುವವರು ತಮಗೂ ತಮ್ಮದೇ ಆದ ಸಂಸ್ಕೃತಿಯ ಪರಂಪರೆಯೊಂದಿದೆ ಎಂಬ ಪೂರ್ವಿಕ ಅಸ್ಮಿತೆ-ಆತ್ಮಗೌರವದ ಹೊಸ ದಿಕ್ಕಿನತ್ತ ಆಶಾವಾದಿಗಳಾಗಿ ನೋಡುವಂತೆ ಮಾಡುವ. ಕಕೇಷಿಯನ್ ಆರ್ಯರು ನಮ್ಮ ಪೂರ್ವಿಕರ ಬಂಧು ಸಮಾಜಕ್ಕೆ ಹೊರತಾಗಿ ರೂಪಿಸಿರುವ ಜಾತಿ ಪದ್ಧತಿಯಂತಹ ಪರಕೀಯ ಕಕೇಷಿಯನ್ ಪರಿಕಲ್ಪನೆಗಳನ್ನು ತ್ಯಜಿಸದ ಹೊರತು, ನಾವು ಎಂದೆಂದಿಗೂ ಕಕೇಷಿಯನ್ನರ ಗುಲಾಮೀತನದಿಂದ ಮುಕ್ತರಾಗುವುದೇ ಇಲ್ಲವೆಂಬ ಕಠೋರ ನಿಜವನ್ನು ಮನವರಿಕೆ ಮಾಡಿಕೊಡುವ. ಪರ್ಯಾಯ ಸಂಸ್ಕೃತಿಯನ್ನೇ ಪರಿಣಾಮಕಾರೀ ಅಸ್ತ್ರವನ್ನಾಗಿ ಬಳಸಿ ಸಮೂಹ ಸನ್ನಿಗೆದುರು ಜನಸಂಸ್ಕೃತಿಯ ಚಳವಳಿಯನ್ನೇ ಪ್ರಾರಂಭಿಸೋಣ. ಶತಮಾನಗಳಿಂದ ನಮ್ಮ ಮೇಲೆ ಕವುಚಿರುವ ಮಹಾಮರೆವನ್ನು ಸರಿಸಿ ಹೊಸತಾದ ಗಾಳಿ ಬೆಳಕಿಗೆ ನಮ್ಮನ್ನೇ ನಾವು ಒಡ್ಡಿಕೊಳ್ಳೋಣ. ಹುಸಿ ರಾಷ್ಟ್ರವಾದಿಗಳ ಆಳದ ಹುನ್ನಾರು, ಗುಪ್ತ ಉದ್ದೇಶ, ಅದರೆಲ್ಲಾ ಕೆಡುಕಿನ ಪರಿಣಾಮಗಳನ್ನೂ ವಿವರಿಸಿ, ಜನರೊಂದಿಗೆ ನೇರಾನೇರ ಮಾತನಾಡುವ. ಜನ ಸಂಸ್ಕೃತಿಯೇ ಮೂಲ ತಿರುಳಾದ ಸಂಸ್ಕೃತಿ ಆಂದೋಲನವೊಂದನ್ನು ಇನ್ನಾದರು ಹುಟ್ಟುಹಾಕಿ ಇತಿಹಾಸದರಿವನ್ನು ಹಂಚುತ್ತ ಹೋಗುವ. ಇಂತಹ ಪ್ರಯತ್ನಗಳ ಸಣ್ಣ ಬದಲಾವಣೆಯೂ ಕ್ರಮೇಣ ದ್ವಿಗುಣಿಸುತ್ತ ನಿರೀಕ್ಷಿತ ಗುರಿಯತ್ತ ನಮ್ಮನ್ನು ಕೊಂಡೊಯ್ಯಬಲ್ಲದೆಂಬುದು ನನ್ನ ಗಾಢ ನಂಬಿಕೆ. ಇದಲ್ಲದೆ ಕಕೇಷಿಯನ್ ಜನಾಂಗವಾದಿ ಶ್ರೇಷ್ಠತೆಯ ವ್ಯಸನಕ್ಕೆ ಬೇರೆ ಮದ್ದಾದರೂ ಯಾವುದಿದೆ? ಎಲ್ಲಿದೆ? ಸಂಸ್ಕೃತಿ ಸಮರವೊಂದೇ ಈ ಸದ್ಯ ಉಳಿದಿರುವ ಏಕೈಕ ದಾರಿಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)