ಯುಎಇ: 2,950 ಹೊಸ ಕೊರೋನ ವೈರಸ್ ಪ್ರಕರಣ
ದುಬೈ (ಯುಎಇ), ಜ. 8: ಯುಎಇಯಲ್ಲಿ ಬುಧವಾರ 2,950 ಹೊಸ ಕೊರೋನ ವೈರಸ್ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಇದೇ ಅವಧಿಯಲ್ಲಿ ಕೊರೋನ ವೈರಸ್‌ಗೆ ಮೂವರು ಬಲಿಯಾಗಿದ್ದಾರೆ ಹಾಗೂ 2,218 ಮಂದಿ ಚೇತರಿಸಿಕೊಂಡಿದ್ದಾರೆ.
ಇದರೊಂದಿಗೆ ಯುಎಇಯಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ 2,24,704ಕ್ಕೆ ಏರಿದೆ. ಈ ಪೈಕಿ 2,01396 ಮಂದಿ ಚೇತರಿಸಿದ್ದಾರೆ. ಒಟ್ಟು 697 ಮಂದಿ ರೋಗದಿಂದ ಮೃತಪಟ್ಟಿದ್ದಾರೆ.
ಯುಎಇಯಲ್ಲಿ ಈವರೆಗೆ 2.2 ಕೋಟಿಗೂ ಅಧಿಕ ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ.
Next Story