ಮಂಗಳೂರು ವಿವಿ : ಬ್ಯಾರಿ ಅಧ್ಯಯನ ಪೀಠಕ್ಕೆ ಸಂಯೋಜಕರಾಗಿ ಡಾ.ಅಬೂಬಕ್ಕರ್ ಸಿದ್ದಿಕ್
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಬ್ಯಾರಿ ಅಧ್ಯಯನ ಪೀಠಕ್ಕೆ ಸಂಯೋಜಕರಾಗಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಅಬೂಬಕ್ಕರ್ ಸಿದ್ದಿಕ್ ಇವರು ನೇಮಕಗೊಂಡಿದ್ದಾರೆ.
ಸುಮಾರು 25 ವರ್ಷಗಳ ಬೋಧನೆ ಹಾಗೂ ಆಡಳಿತ ಅನುಭವ ಹೊಂದಿರುವ ಇವರು ಕರ್ನಾಟಕ ಸರ್ಕಾರದ ಬ್ಯಾರಿ ಸಾಹಿತ್ಯ ಅಕಾಡೆಮಿ ರಚಿಸಿದ ಬ್ಯಾರಿ ಲಿಪಿ ರಚನೆ, ಅನುಷ್ಠಾನ ಸಮಿತಿಯ ಸದಸ್ಯರಾಗಿಯೂ, ಬ್ಯಾರಿ ಕ್ಯಾಲೆಂಡರ್ ರಚನಾ ಸಮಿತಿಯ ಸಂಚಾಲಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇವರು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ರಚಿಸಿದ ಬ್ಯಾರಿ ಕನ್ನಡ ಇಂಗ್ಲೀಷ್ ಹಿಂದಿ ರೋಮನ್-ಐಪಿಎ ಶಬ್ದಕೋಶದ ಪರಿಶೀಲಕರಾಗಿ ಕೂಡಾ ಕಾರ್ಯ ನಿರ್ವಹಿಸಿದ್ದಾರೆ.
Next Story