ಉಡುಪಿ ತಾಲೂಕಿನ 16 ಗ್ರಾಪಂಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ
ಉಡುಪಿ, ಜ.17: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ 2020ನೆ ಸಾಲಿನ ಉಡುಪಿ ತಾಲೂಕಿನ 16 ಗ್ರಾಪಂಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ಗ್ರಾಪಂ ಚುನಾಯಿತ ಸದಸ್ಯರ ಸಮ್ಮುಖದಲ್ಲಿ ಜ.16 ರಂದು ಮೀಸಲಿರಿಸಿ ಹಂಚಿಕೆ ಮಾಡಲಾಗಿದೆ.
2020ನೇ ಸಾಲಿನ ಚುನಾವಣೆ ಮುಗಿದ ಗ್ರಾಪಂಗಳಿಗೆ 30 ತಿಂಗಳ ಮೊದಲ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ವಿವರ ಇಂತಿದೆ.
ಪೆರ್ಡೂರು: ಅಧ್ಯಕ್ಷ-ಹಿಂದುಳಿದವರ್ಗ ‘ಅ’, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ. ಕುಕ್ಕೆಹಳ್ಳಿ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ. ಬೈರಂಪಳ್ಳಿ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಹಿಂದುಳಿದವರ್ಗ ‘ಅ’ ಮಹಿಳೆ. ಕಲ್ಯಾಣಪುರ: ಅಧ್ಯಕ್ಷ-ಹಿಂದುಳಿದವರ್ಗ ‘ಅ’, ಉಪಾಧ್ಯಕ್ಷ-ಸಾಮಾನ್ಯ. ತೋನ್ಸೆ: ಅಧ್ಯಕ್ಷ-ಅನುಸೂಚಿತ ಪಂಗಡ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ. ತೆಂಕನಿಡಿ ಯೂರು: ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ. ಬಡಾನಿಡಿ ಯೂರು: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಅನುಸೂಚಿತ ಜಾತಿ ಮಹಿಳೆ. ಅಂಬಲಪಾಡಿ: ಅಧ್ಯಕ್ಷ-ಹಿಂದುಳಿದವರ್ಗ ‘ಅ’ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ. ಕಡೆಕಾರು: ಅಧ್ಯಕ್ಷ-ಅನುಸೂಚಿತ ಜಾತಿ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ. ಉದ್ಯಾವರ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಅನುಸೂಚಿತ ಪಂಗಡ ಮಹಿಳೆ.
80 ಬಡಗಬೆಟ್ಟು: ಅಧ್ಯಕ್ಷ-ಹಿಂದುಳಿದವರ್ಗ ‘ಅ’ ಮಹಿಳೆ, ಉಪಾಧ್ಯಕ್ಷ-ಹಿಂದುಳಿಗವರ್ಗ ‘ಬ’ ಮಹಿಳೆ,. ಆತ್ರಾಡಿ: ಅಧ್ಯಕ್ಷ- ಹಿಂದುಳಿದ ವರ್ಗ ‘ಬ’ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ. ಕೊಡಿಬೆಟ್ಟು: ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಹಿಂದುಳಿದವರ್ಗ ‘ಅ’. ಬೊಮ್ಮಾರಬೆಟ್ಟು: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಹಿಂದುಳಿದವರ್ಗ ‘ಅ’ ಮಹಿಳೆ. ಮಣಿಪುರ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ. ಅಲೆವೂರು: ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಹಿಂದುಳಿದವರ್ಗ ‘ಅ’ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.