ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
ಮಂಗಳೂರು, ಜ.18: ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಮಂಗಳೂರು (ನಗರ) ವ್ಯಾಪ್ತಿಯ ಕಾವೂರು ಗ್ರಾಮದ ಮೇರಿಹಿಲ್ ವಾರ್ಡ್ ನಂ.19,ಕುಂಜತ್ತಬೈಲ್ ಗ್ರಾಮದ ವೈದ್ಯನಾಥೇಶ್ವರ ಕಾವೂರು ವಾರ್ಡ್ ನಂ.15, ಗೋರಿಗುಡ್ಡ ವಾರ್ಡ್, ಫಳ್ನೀರ್ ವಾರ್ಡ್‌ನ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಎಸೆಸೆಲ್ಸಿ ಪಾಸಾದ ಮತ್ತು ಗಣೇಶ್ ಫ್ರೆಂಡ್ಸ್ ಕುದ್ರೋಳಿ- ವಾರ್ಡ್ ನಂ. 43 ಕಸಬ ಬಜಾರ್ ಗ್ರಾಮ, ಸೈಂಟ್ ಆ್ಯನ್ಸ್ ಬೋಳಾರ ವಾರ್ಡ್ ನಂ. 45 ಕಸಬಾ ಬಜಾರ್ ಗ್ರಾಮ, ಪಣಂಬೂರು ಮೊಗವೀರ ಸಭಾ-ವಾರ್ಡ್ ನಂ. 9 ಕುಳಾಯಿ ಗ್ರಾಮ, ಕುಡುಂಬೂರು -ವಾರ್ಡ್ ನಂ. 10 ಬೈಕಂಪಾಡಿ ಗ್ರಾಮ, ಗೋರಿಗುಡ್ಡ-ವಾರ್ಡ್ ನಂ.39 ಫಳ್ನೀರ್ ಗ್ರಾಮ, ಬೆಂಗ್ರೆ ಸೂಪರ್ ಸ್ಟಾರ್ ವಾರ್ಡ್ ನಂ.11 ಬೆಂಗ್ರೆ ಗ್ರಾಮ, ಬೆಂಗ್ರೆ ಕಸಬಾ 2 ವಾರ್ಡ್ ನಂ.60 ಬೆಂಗ್ರೆ ಗ್ರಾಮ, ಬೆಂಗ್ರೆ ಶಾಲೆ 2- ವಾರ್ಡ್ ನಂ. 60 ಬೆಂಗ್ರೆ ಗ್ರಾಮದ ಅಂಗನವಾಡಿ ಸಹಾಯಕಿಯರ ಹುದ್ದೆಗೆ 4ರಿಂದ 9ನೇ ತರಗತಿ (ಉತ್ತೀರ್ಣ) ಕಲಿತವರು ಅರ್ಜಿ ಸಲ್ಲಿಸಬಹುದು.
ಈ ಎಲ್ಲಾ ಹುದ್ದೆಗಳು ಸಾಮಾನ್ಯ ವರ್ಗವಾಗಿದ್ದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಫೆ.6 ಕೊನೆಯ ದಿನವಾಗಿದೆ. ಮಾಹಿತಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸಿಲ್ವಾ ಕ್ರಾಸ್ ರೋಡ್ ವೆಲೆನ್ಸಿಯಾ, ಬಿಷಪ್ ವಿಕ್ಟರ್ ಅಡ್ಡರಸ್ತೆ, ಮಂಗಳೂರು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.