ಯುಎಇ: 24 ಗಂಟೆಯಲ್ಲಿ 93 ಸಾವಿರ ಮಂದಿಗೆ ಕೊರೋನ ಲಸಿಕೆ
ದುಬೈ (ಯುಎಇ), ಜ. 22: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 93,009 ಜನರಿಗೆ ಕೊರೋನ ವೈರಸ್ ಲಸಿಕೆಯನ್ನು ನೀಡಲಾಗಿದೆ.
ಯುಎಇಯಲ್ಲಿ ಈವರೆಗೆ ಒಟ್ಟು 23.3 ಲಕ್ಷ ಡೋಸ್ ಲಸಿಕೆಯನ್ನು ನೀಡಲಾಗಿದೆ ಎಂದು ದೇಶದ ಆರೋಗ್ಯ ಸಚಿವಾಲಯ ತಿಳಿಸಿದೆ. ಇದರೊಂದಿಗೆ ಪ್ರತಿ 100 ಜನರ ಪೈಕಿ 23.65 ಮಂದಿಗೆ ಲಸಿಕೆಯ ಮೊದಲ ಡೋಸ್ ನೀಡಿದಂತಾಗಿದೆ.
ಯುಎಇ ಗುರುವಾರ ತುರ್ತು ಬಳಕೆಗಾಗಿ ಮೂರನೇ ಕೋವಿಡ್ ಲಸಿಕೆಗೆ, ಅಂದರೆ ರಶ್ಯದ ‘ಸ್ಪೂಟ್ನಿಕ್’ ಲಸಿಕೆಗೆ ಅನುಮೋದನೆ ನೀಡಿದೆ.
ಯುಎಇಯ ವಿವಿಧ ಜೈಲುಗಳಲ್ಲಿರುವ ಬಂಧಿತರಿಗೆ ಕೊರೋನ ವೈರಸ್ ಲಸಿಕೆ ನೀಡುವ ಕಾರ್ಯ ಮುಂದುವರಿದಿದೆ.
Next Story