ಸೌದಿ ಪ್ರಯಾಣ ನಿಷೇದ: ಮೇ 17ರವರೆಗೆ ಮುಂದೂಡಿಕೆ
ರಿಯಾದ್ (ಸೌದಿ ಅರೇಬಿಯ), ಜ. 30: ತನ್ನ ತನ್ನ ಭೂಗಡಿ, ಬಂದರು ಮತ್ತು ವಿಮಾನ ನಿಲ್ದಾಣಗಳನ್ನು ವಿದೇಶೀಯರಿಗೆ ತೆರೆಯುವುದನ್ನು ಸೌದಿ ಅರೇಬಿಯವು ಮೇ 17ರವರೆಗೆ ಮುಂದೂಡಿದೆ ಎಂದು ದೇಶದ ಆಂತರಿಕ ಸಚಿವಾಲಯ ಶುಕ್ರವಾರ ತಿಳಿಸಿದೆ.
ತನ್ನ ನಾಗರಿಕರ ವಿದೇಶ ಪ್ರಯಾಣದ ಮೇಲಿನ ನಿಷೇಧವನ್ನು ಮಾರ್ಚ್ 31ರಂದು ಕೊನೆಗೊಳಿಸಲಾಗುವುದು ಹಾಗೂ ಅದೇ ದಿನ ತನ್ನ ಎಲ್ಲ ಗಡಿಗಳನ್ನು ತೆರೆಯುವುದಾಗಿ ಸಚಿವಾಲಯವು ಈ ಹಿಂದೆ, ಅಂದರೆ ಜನವರಿ 8ರಂದು ಹೇಳಿತ್ತು ಎಂದು ‘ಅರಬ್ ನ್ಯೂಸ್’ ವರದಿ ಮಾಡಿದೆ.
‘‘ಹೆಚ್ಚಿನ ದೇಶಗಳಲ್ಲಿ ಕೊರೋನ ವೈರಸ್‌ನ ಎರಡನೇ ಅಲೆ ಈಗ ಚಾಲ್ತಿಯಲ್ಲಿರುವ ಹಿನ್ನೆಲೆಯಲ್ಲಿ, ಅಂತರ್‌ರಾಷ್ಟ್ರೀಯ ಓಡಾಟಕ್ಕೆ ಅನುಮತಿ ನೀಡುವ ಮುನ್ನ, ದೇಶದ ಸಮುದಾಯ ನಿರೋಧತೆಯನ್ನು ಉನ್ನತ ಮಟ್ಟಕ್ಕೆ ಏರಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ’’ ಎಂದು ಸಚಿವಾಲಯದ ವಕ್ತಾರರೊಬ್ಬರನ್ನು ಉಲ್ಲೇಖಿಸಿ ‘ಅರಬ್ ನ್ಯೂಸ್’ ವರದಿ ಮಾಡಿದೆ.
Next Story