ಕೊರೋನ: 20 ದೇಶಗಳ ಪೌರೇತರರ ಪ್ರವೇಶ ತಾತ್ಕಾಲಿಕ ನಿರ್ಬಂಧಿಸಿದ ಸೌದಿ ಅರೇಬಿಯಾ
ರಿಯಾದ್, ಫೆ. 2: ಇಪ್ಪತ್ತು ನಿರ್ದಿಷ್ಟ ದೇಶಗಳಿಂದ ಆಗಮಿಸುವ ಪೌರೇತರರು, ರಾಜತಾಂತ್ರಿಕರು, ಆರೋಗ್ಯ ಸಿಬ್ಬಂದಿ ಹಾಗೂ ಅವರ ಕುಟುಂಬದವರು ಫೆಬ್ರವರಿ 3ರಿಂದ ಬೆಳಗ್ಗೆ 9 ಗಂಟೆ (ಸ್ಥಳೀಯ ಸಮಯ) ನಂತರ ದೇಶದೊಳಗೆ ಪ್ರವೇಶಿಸುವುದನ್ನು ಸೌದಿ ಅರೇಬಿಯಾ ತಾತ್ಕಾಲಿಕವಾಗಿ ನಿರ್ಬಂಧಿಸಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ ಎಂದು ಅಲ್ ಅರೇಬಿಯಾ ವರದಿ ಮಾಡಿದೆ.
ಸೌದಿ ಅರೇಬಿಯಾದಲ್ಲಿ ಸಾಂಕ್ರಾಮಿಕ ರೋಗದ ಪರಿಸ್ಥಿತಿ ನಿಯಂತ್ರಿಸಲು ಹಾಗೂ ಸಾರ್ವಜನಿಕ ಆರೋಗ್ಯವನ್ನು ಕಾಪಾಡಲು ಗೃಹ ಸಚಿವಾಲಯ ಈ ಕ್ರಮಗಳನ್ನು ಕೈಗೊಂಡಿದೆ ಎಂದು ಸೌದಿ ಪ್ರೆಸ್ ಕೌನ್ಸಿಲ್ ಹೇಳಿಕೆಯೊಂದರಲ್ಲಿ ತಿಳಿಸಿದೆ. ನಿರ್ಬಂಧ ವಿಧಿಸಲಾದ 20 ದೇಶಗಳ ಪಟ್ಟಿಯಲ್ಲಿ ಅರ್ಜೆಂಟೀನ, ಯುಎಇ, ಜರ್ಮನಿ, ಅಮೆರಿಕ, ಇಂಡೋನೇಶ್ಯ, ಐರ್ಲ್ಯಾಂಡ್, ಇಟಲಿ, ಪಾಕಿಸ್ತಾನ, ಬ್ರೆಝಿಲ್, ಪೋರ್ಚುಗಲ್, ಬ್ರಿಟನ್, ಟರ್ಕಿ, ದಕ್ಷಿಣ ಆಫ್ರಿಕಾ, ಸ್ವೀಡನ್, ಸ್ವಿಝರ್ಲ್ಯಾಂಡ್, ಫ್ರಾನ್ಸ್, ಲೆಬನಾನ್, ಈಜಿಪ್ಟ್, ಭಾರತ ಹಾಗೂ ಜಪಾನ್ ಸೇರಿವೆ.
Next Story