ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ವತಿಯಿಂದ ರಕ್ತದಾನ ಶಿಬಿರ
ಬಹರೈನ್ : ಕೆಸಿಎಫ್ ದಿನಾಚರಣೆ ಪ್ರಯುಕ್ತ ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ವತಿಯಿಂದ ಬೃಹತ್ ರಕ್ತದಾನ ಶಿಬಿರವು ಸಲ್ಮಾನಿಯ ಮೆಡಿಕಲ್ ಸೆಂಟರ್ ನಲ್ಲಿ ಇತ್ತೀಚೆಗೆ ನಡೆಯಿತು.
ಅಬ್ದುಲ್ ಖಾದರ್ ಉಸ್ತಾದ್ ರವರ ದುಃಆ ಮೂಲಕ ಆರಂಭಗೊಂಡ ಶಿಬಿರದಲ್ಲಿ ಕೆಸಿಎಫ್ ಸದಸ್ಯರು ಮತ್ತು ಇಲ್ಲಿನ ಸ್ವದೇಶಿಗಳು, ವಿದೇಶಿಯರು ಸೇರಿ 100ಕ್ಕೂ ಹೆಚ್ಚು ರಕ್ತದಾನಿಗಳು ಭಾಗವಹಿಸಿದ್ದರು.
ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಜಮಾಲುದ್ದೀನ್ ವಿಟ್ಲ, ಕಾರ್ಯದರ್ಶಿ ಹಾರಿಸ್ ಸಂಪ್ಯ, ಕೋಶಾಧಿಕಾರಿ ಸೂಫಿ ಪೈಂಬಚ್ಚಾಲ್ ಹಾಗೂ ಸಂಘಟನೆ ನೇತಾರರೂ, ಸದಸ್ಯರುಗಳು ರಕ್ತದಾನ ಮಾಡಿ ಮಾದರಿಯಾದರು.
ಕೆಸಿಎಫ್ ಬಹರೈನ್ ಸೌತ್ ಝೋನ್ ಇದರ ಸಂಘಟನಾ ವಿಭಾಗದ ಅಧ್ಯಕ್ಷ ಶಾಫಿ ಕಂಬಲಬೆಟ್ಟು ಅವರ ನೇತೃತ್ವದಲ್ಲಿ ನಡೆದ ಶಿಬಿರವು ಕೋವಿಡ್ ನ ಎಲ್ಲಾ ಮಾನದಂಡಗಳನ್ನು ಪಾಲಿಸಿ ಅಚ್ಚುಕಟ್ಟಾಗಿ, ಶಿಸ್ತಿನಿಂದ ನಡೆಸಿದ ಕಾರ್ಯವೈಖರಿಯನ್ನು ಕಂಡು ಸಲ್ಮಾನಿಯ ಮೆಡಿಕಲ್ ಸೆಂಟರ್ ನ ಅಧಿಕಾರಿಗಳು ಸಂಘಟಕರನ್ನು ಪ್ರಶಂಶಿಸಿದರು. ಶಿಬಿರದ ಉಸ್ತುವಾರಿಯನ್ನು ಕೆಸಿಎಫ್ ಬಹರೈನ್ ಇದರ ಸಾಂತ್ವನ ವಿಭಾಗದ ನೇತಾರರಾದ ಕರೀಮ್ ಮಾಝಾ, ಹನೀಫ್ ಜಿಕೆ ವಹಿಸಿದ್ದರು.
ರಕ್ತದಾನಿಗಳಿಗೆ ಕೆಸಿಎಫ್ ಬಹರೈನ್ ವತಿಯಿಂದ ಮೆಚ್ಚುಗೆ ಪ್ರಮಾಣ ಪತ್ರ ಗಳನ್ನು ನೀಡಲಾಯಿತು. ಶಿಬಿರದಲ್ಲಿ ಕೆಸಿಎಫ್ ಬಹರೈನ್ ನ ರಾಷ್ಟ್ರೀಯ, ಝೋನ್ ಮತ್ತು ಸೆಕ್ಟರ್ ಗಳ ನೇತಾರರು ಹಾಗೂ ಬಹರೈನ್ ನ ವಿವಿಧ ಸಂಘಟನೆಗಳ ನೇತಾರರು ಭಾಗವಹಿಸಿದ್ದರು.