ಸೌದಿ ವಿಮಾನ ನಿಲ್ದಾಣದ ಮೇಲೆ ಹೌದಿ ಬಂಡುಕೋರರಿಂದ ಬಾಂಬ್
photo:twitter (@breakingavnews)
ರಿಯಾದ್ (ಸೌದಿ ಅರೇಬಿಯ), ಫೆ. 10: ಸೌದಿ ಅರೇಬಿಯದ ಅಬಾ ವಿಮಾನ ನಿಲ್ದಾಣದ ಮೇಲೆ ಯೆಮನ್ನ ಹೌದಿ ಬಂಡುಕೋರರು ದಾಳಿ ನಡೆಸಿದ್ದಾರೆ ಎಂದು ಬಂಡುಕೋರರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಸೌದಿ ಅರೇಬಿಯ ನೇತೃತ್ವದ ಮಿತ್ರಪಡೆ ತಿಳಿಸಿದೆ.
ದಾಳಿಯಿಂದಾಗಿ ವಿಮಾನ ನಿಲ್ದಾಣದಲ್ಲಿದ್ದ ನಾಗರಿಕ ವಿಮಾನವೊಂದಕ್ಕೆ ಬೆಂಕಿ ಹತ್ತಿಕೊಂಡಿದೆ ಹಾಗೂ ಬೆಂಕಿಯನ್ನು ಬಳಿಕ ನಿಯಂತ್ರಣಕ್ಕೆ ತರಲಾಗಿದೆ ಎಂದು ಮಿತ್ರಕೂಟ ಹೇಳಿದೆ ಎಂದು ಸೌದಿ ಅರೇಬಿಯದ ಸರಕಾರಿ ಒಡೆತನದ ‘ಅಲ್-ಅಕ್ಬರಿಯ ಟೆಲಿವಿಶನ್’ ಬುಧವಾರ ವರದಿ ಮಾಡಿದೆ.
ದಾಳಿಯ ಹೊಣೆಯನ್ನು ಹೌದಿ ಬಂಡುಕೋರರು ವಹಿಸಿಕೊಂಡಿದ್ದಾರೆ. ದಕ್ಷಿಣ ಸೌದಿ ಅರೇಬಿಯದಲ್ಲಿರುವ ವಿಮಾನ ನಿಲ್ದಾಣವನ್ನು ಸ್ಫೋಟಿಸಲು ಬಾಂಬ್ಗಳನ್ನು ಹೊಂದಿದ ನಾಲ್ಕು ಡ್ರೋನ್ಗಳನ್ನು ಉಡಾಯಿಸಿರುವುದಾಗಿ ಸೇನಾ ವಕ್ತಾರರೊಬ್ಬರು ಹೇಳಿದ್ದಾರೆ.
Next Story