‘ಮಂಗಳ ಗ್ರಹದ ಚಿತ್ರವನ್ನು ರವಾನಿಸಿದ ಹೋಪ್ ಬಾಹ್ಯಾಕಾಶ ನೌಕೆ’
ಯುಎಇನ ಹೋಪ್ ದುಬೈ,ಫೆ.14: ಮಂಗಳ ಗ್ರಹದ ಕಕ್ಷೆಗೆ ಯುಎಇ ಕಳುಹಿಸಿರುವ ಚೊಚ್ಚಲ ಬಾಹ್ಯಾಕಾಶ ನೌಕೆ ಹೋಪ್, ತೆಗೆದಿರುವ ಮಂಗಳಗ್ರಹದ ಮೊದಲ ಚಿತ್ರವನ್ನು ಭೂಮಿಗೆ ರವಾನಿಸಿರುವುದಾಗಿ ರಾಷ್ಟ್ರೀಯ ಬಾಹ್ಯಾಕಾಶ ಏಜೆನ್ಸಿ ರವಿವಾರ ತಿಳಿಸಿದೆ.
ಹೋಪ್ ತೆಗೆದಿರುವ ಈ ಚಿತ್ರವು ಮಂಗಳ ಗ್ರಹದಲ್ಲಿರುವ ಸೌರವ್ಯೊಹದಲ್ಲೇ ಅತ್ಯಂತ ದೊಡ್ಡದೆನಿಸಿರುವ ಜ್ವಾಲಾಮುಖಿ ಒಲಿಂಪಸ್ ಮೊನ್ಸ್‌ನ ಛಾಯಾಚಿತ್ರವನ್ನು ಸೆರೆಹಿಡಿದಿದೆ. ಪ್ರೋಬ್ ನೌಕೆಯು ಮಂಗಳನ ಕಕ್ಷೆಯನ್ನು ಪ್ರವೇಶಿಸಿದ ಒಂದು ದಿನದ ಬಳಿಕ ಈ ಚಿತ್ರವನ್ನು ಸೆರೆಹಿಡಿದಿದೆ. ಮಂಗಳನ ಮೇಲ್ಮೈನಿಂದ 27 ಸಾವಿರ ಕಿ.ಮೀ. ಎತ್ತರದಿಂದ ಈ ಛಾಯಾಚಿತ್ರವನ್ನು ತೆಗೆಯಲಾಗಿದೆ.
ಯುಎಇ ಪ್ರಧಾನಿ ಹಾಗೂ ದುಬೈನ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ , ಈ ಬಣ್ಣದ ಛಾಯಾಚಿತ್ರವನ್ನು ಟ್ವಿಟ್ಟರ್‌ನಲ್ಲಿ ಪ್ರಸಾರ ಮಾಡಿದ್ದಾರೆ.
ಮಂಗಳಗ್ರಹದ ಹವಾಮಾನದ ರಹಸ್ಯಗಳನ್ನು ಅನಾವರಣಗೊಳಿಸುವ ಗುರಿಯೊಂದಿಗೆ ಹೋಪ್ ಬಾಹ್ಯಾಕಾಶ ನೌಕಾಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
Next Story