ಸರಿಯಾಗಿ ನಿದ್ರೆ ಮಾಡಲಾಗುತ್ತಿಲ್ಲವೇ? ಅದು ಈ ಐದು ರೋಗಗಳಿಗೆ ಕಾರಣವಾಗಬಲ್ಲದು
ಸಾಂದರ್ಭಿಕ ಚಿತ್ರ
ನಿದ್ರೆ ಮಾಡುವವರನ್ನು ಸಾಮಾನ್ಯವಾಗಿ ಸೋಮಾರಿಗಳು ಎಂದು ಪರಿಗಣಿಸಲಾಗುತ್ತದೆ.,ಆದರೆ ಅದು ನಮ್ಮ ಶರೀರದ ಅತ್ಯಂತ ಮುಖ್ಯಚಟುವಟಿಕೆಗಳಲ್ಲಿ ಒಂದಾಗಿದೆ. ನಮ್ಮ ಶರೀರದ ಒಟ್ಟಾರೆ ಅರೋಗ್ಯವನ್ನು ಸುಸ್ಥಿತಿಯಲ್ಲಿರಿಸಲು ಮತ್ತು ನಮ್ಮನ್ನು ಫಿಟ್ ಆಗಿರಿಸಲು ನಿದ್ರಯು ನೆರವಾಗುತ್ತದೆ. ಪ್ರತಿಯೊಬ್ಬರಿಗೂ ನಿದ್ರೆಯು ಮುಖ್ಯವಾಗಿದ್ದು,ಕನಿಷ್ಠ 7ರಿಂದ 9 ಗಂಟೆಗಳ ಒಳ್ಳೆಯ ನಿದ್ರೆ ಅಗತ್ಯವಾಗುತ್ತದೆ. ನಿದ್ರೆಗೂ ಸೋಮಾರಿತನಕ್ಕೂ ವ್ಯತ್ಯಾಸವಿದೆ. ವಾಸ್ತವದಲ್ಲಿ ನೀವು ಸರಿಯಾಗಿ ನಿದ್ರೆ ಮಾಡದಿದ್ದರೆ ನೀವು ಸೋಮಾರಿಯಾಗುವ ಹೆಚ್ಚಿನ ಸಾಧ್ಯತೆಗಳಿವೆ.
ಸರಿಯಾದ ನಿದ್ರೆಯಿಂದ ವಂಚಿತರಾದರೆ ಅದು ಶರೀರ ಮತ್ತು ರೋಗ ನಿರೋಧಕ ವ್ಯವಸ್ಥೆಗೆ ಹಾನಿಯನ್ನುಂಟು ಮಾಡುತ್ತದೆ. ಅದು ವ್ಯಕ್ತಿಯು ಯಾವುದೇ ಕೆಲಸವನ್ನು ಮಾಡಿರದಿದ್ದರೂ ಆತನನ್ನು ಕಡಿಮೆ ಕ್ರಿಯಾಶೀಲನನ್ನಾಗಿಸುತ್ತದೆ ಮತ್ತು ಬಳಲುವಂತೆ ಮಾಡುತ್ತದೆ. ಅದು ಹಲವಾರು ಸಮಸ್ಯೆಗಳು ಮತ್ತು ರೋಗಗಳಿಗೂ ಕಾರಣವಾಗುತ್ತದೆ,ಆದರೆ ಹೆಚ್ಚಿನ ಸಂದರ್ಭಗಳಲ್ಲಿ ನಾವು ಇವುಗಳನ್ನು ಕಡೆಗಣಿಸುತ್ತೇವೆ. ನಿದ್ರೆಯ ಕೊರತೆಯಯು ಖಿನ್ನತೆ ಮತ್ತುಯ ಜ್ಞಾಪಕ ಶಕ್ತಿ ನಷ್ಟಕ್ಕೂ ಕಾರಣವಾಗುತ್ತದೆ. ಅದು ಹೃದ್ರೋಗಗಳು,ಶರೀರದ ತೂಕ ಹೆಚ್ಚಳಕ್ಕೂ ಕಾರಣವಾಗುತ್ತದೆ. ಅನಾರೋಗ್ಯವುಂಟಾದರೆ ವಾಸಿಯಾಗಲು ಹೆಚ್ಚು ಸಮಯ ಬೇಕಾಗುತ್ತದೆ. ಸೂಕ್ತ ನಿದ್ರೆ ಮಾಡದಿದ್ದರೆ ಉಂಟಾಗಬಲ್ಲ ಐದು ರೋಗಗಳ ಕುರಿತು ಮಾಹಿತಿಗಳಿಲ್ಲಿವೆ.....
*ಇನ್ಸೋಮ್ನಿಯಾ
ಸಾಮಾನ್ಯ ಶಬ್ದಗಳಲ್ಲಿ ಹೇಳುವುದಾದರೆ ಇನ್ಸೋಮ್ನಿಯಾ ನಿದ್ರೆಯನ್ನು ಮಾಡುವುದು ಕಷ್ಟವಾಗುವ ಸ್ಥಿತಿಯಾಗಿದೆ. ಈ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಾಕಷ್ಟು ಸಮಯ ಮತ್ತು ಅವಕಾಶಗಳಿದ್ದರೂ ನಿದ್ರೆಯ ಪ್ರಕ್ರಿಯೆಯನ್ನು ಆರಂಭಿಸುವುದೇ ಕಷ್ಟವಾಗುತ್ತದೆ ಅಥವಾ ನಿದ್ರೆಯನ್ನು ಸರಿಯಾಗಿ ಮುಂದುವರಿಸಲು ಸಾಧ್ಯವಾಗುವುದಿಲ್ಲ. ದೈಹಿಕ ಮತ್ತ ಮಾನಸಿಕ ಕಾರಣಗಳಿಂದ ಈ ಸ್ಥಿತಿಯುಂಟಾಗುತ್ತದೆ. ಗರ್ಭಿಣಿಯರಲ್ಲಿ ಇನ್ಸೋಮ್ನಿಯಾ ಅತ್ಯಂತ ಸಾಮಾನ್ಯವಾಗಿದೆ. ಹಾರ್ಮೋನ್ ಅಸಮತೋಲನ, ಒತ್ತಡ, ಆತಂಕ, ಋತುಬಂಧ, ನಿಕೋಟಿನ್,ಅತಿಯಾದ ಕೆಫೀನ್ ಮತ್ತು ಮದ್ಯ ಸೇವನೆ ಹಾಗೂ ಔಷಧಿ ಅಂಗಡಿಗಳಲ್ಲಿ ಸುಲಭವಾಗಹಿ ಸಿಗುವ ಕೆಲವು ಔಷಧಿಗಳು ಇನ್ಸೋಮ್ನಿಯಾವನ್ನುಂಟು ಮಾಡುತ್ತವೆ.
* ಸ್ಲೀಪ್ ಆಪ್ನಿಯಾ
ಇದು ಸಂಪೂರ್ಣವಾಗಿ ದೈಹಿಕ ಕಾರಣಗಳಿಂದ ಉಂಟಾಗುವ ಸಮಸ್ಯೆಯಾಗಿದ್ದು,ವ್ಯಕ್ತಿಗೆ ನಿದ್ರೆಯ ಮಧ್ಯೆ ಪದೇ ಪದೇ ಎಚ್ಚರವಾಗುತ್ತಿರುತ್ತದೆ. ಮಿದುಳಿಗೆ ಆಮ್ಲಜನಕದ ಪೂರೈಕೆಯಲ್ಲಿ ಕೊರತೆಯಾಗುವುದು ಇದಕ್ಕೆ ಕಾರಣವಾಗುತ್ತದೆ. ಜೋರಾದ ಗೊರಕೆ,ನಿದ್ರೆಯಲ್ಲಿ ಉಸಿರುಗಟ್ಟುವುದು,ಖಿನ್ನತೆ ಮತ್ತು ತೂಕ ಗಳಿಕೆಗೆ ಸಂಬಂಧಿಸಿದ ಸಮಸ್ಯೆ ಇವು ಸ್ಲೀಪ್ ಆಪ್ನಿಯಾದ ಲಕ್ಷಣಗಳಾಗಿವೆ.
* ರೆಸ್ಟ್ಲೆಸ್ ಲೆಗ್ ಸಿಂಡ್ರೋಮ್ (ಆರ್ಎಲ್ಎಸ್)
ಇದು ದೈಹಿಕ ಮತ್ತು ಮಾನಸಿಕ ಕಾರಣಗಳಿಂದ ಉಂಟಾಗುತ್ತದೆ. ಈ ಸ್ಥಿತಿಯಲ್ಲಿ ಕಾಲುಗಳಲ್ಲಿ ಒಂದು ರೀತಿಯ ಚಡಪಡಿಕೆಯಿರುತ್ತದೆ ಮತ್ತು ವ್ಯಕ್ತಿಗೆ ಇರುವ ಜಾಗದಲ್ಲಿ ಅಹಿತವೆನಿಸುತ್ತದೆ ಹಾಗು ಕಾಲುಗಳನ್ನು ಚಲಿಸುತ್ತಿರುವ ತುಡಿತ ಉಂಟಾಗುತ್ತದೆ. ಇದು ಕ್ರಮೇಣ ಇನ್ಸೋಮ್ನಿಯಾಕ್ಕೆ ಕಾರಣವಾಗುತ್ತದೆ. ಜೀವಿತಾವಧಿಯಲ್ಲಿ ಪ್ರತಿ 10 ಜನರಲ್ಲಿ ಒಬ್ಬರು ಈ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಲಕ್ಷಣಗಳ ಆವರ್ತನಗಳನ್ನು ಆಧರಿಸಿ ಆರ್ಎಲ್ಎಸ್ನ್ನು ಸೌಮ್ಯ ಮತ್ತು ತೀವ್ರ ಸ್ವರೂಪದ್ದು;ಹೀಗೆ ಎರಡು ವಿಧಗಳಲ್ಲಿ ವರ್ಗೀಕರಿಸಲಾಗಿದೆ. ದೈಹಿಕ ಸಮಸ್ಯೆಗಳಿಂದಾಗಿ ಉಂಟಾಗುವ ಮಾನಸಿಕ ಒತ್ತಡವು ಇದಕ್ಕೆ ಕಾರಣವಾಗಿರುವುದರಿಂದ ಈ ಸಮಸ್ಯೆಗಳು ಬಗೆಹರಿದರೆ ಆರ್ಎಲ್ಎಸ್ ಕೂಡ ತನ್ನಿಂತಾನೇ ಮಾಯವಾಗುತ್ತದೆ. ಕಾಲುಗಳಲ್ಲಿ ತುರಿಕೆ ಮತ್ತು ಜುಮುಗುಡುವಿಕೆ,ನೋವು,ಉರಿ,ನಿದ್ರೆಯಲ್ಲಿ ತೆವಳುವಿಕೆ ಇತ್ಯಾದಿಗಳು ಈ ರೋಗದ ಲಕ್ಷಣಗಳಾಗಿವೆ.
* ನಾರ್ಕೊಲೆಪ್ಸಿ
ನಾರ್ಕೊಲೆಪ್ಸಿ ಅಥವಾ ವಿಚ್ಛಿದ್ರ ನಿದ್ರೆಯು ವ್ಯಕ್ತಿಯ 10ರಿಂದ 25 ವರ್ಷ ಪ್ರಾಯದ ನಡುವೆ ಆರಂಭಗೊಳ್ಳುವ ರೋಗವಾಗಿದೆ. ಇದು ವ್ಯಕ್ತಿಯು ಆಗಾಗ್ಗೆ ನಿದ್ರೆಗೊಳಗಾಗುವಂತೆ ಮಾಡುತ್ತದೆ. ರಾತ್ರಿ ಸರಿಯಾಗಿ ನಿದ್ರೆ ಬರದಿರುವುದು ಇದಕ್ಕೆ ಕಾರಣವಾಗುತ್ತದೆ. ನಾರ್ಕೊಲೆಪ್ಸಿಯಲ್ಲಿ ಹಗಲಿನಲ್ಲಿ ಮಲಗಬೇಕೆಂಬ ದಿಢೀರ್ ತುಡಿತವುಂಟಾಗುತ್ತದೆ ಮತ್ತು ಬಳಿಕ ಮಂಪರು ಬಾಧಿಸುತ್ತಿರುತ್ತದೆ. ಇದು ಅಪಘಾತಗಳು ಮತ್ತು ಗಾಯಗಳಿಗೆ ಕಾರಣವಾಗಬಲ್ಲದು,ಹೀಗಾಗಿ ಇದನ್ನು ಮಾರಣಾಂತಿಕ ರೋಗವೆಂದು ಪರಿಗಣಿಸಲಾಗಿದೆ. ಈ ದೀರ್ಘಕಾಲಿಕ ರೋಗವು ತಾತ್ಕಾಲಿವಾಗಿ ಜ್ಞಾಪಕ ಶಕ್ತಿಯ ನಷ್ಟಕ್ಕೂ ಕಾರಣವಾಗುತ್ತದೆ. ಹಗಲಿನಲ್ಲು ನಿದ್ರೆ,ಸ್ನಾಯುಘಾತ,ನಿದ್ರಾ ಪಾರ್ಶ್ವವಾಯು,ಭ್ರಾಂತಿ,ತುಂಡು ತುಂಡಾದ ನಿದ್ರೆ ಇತ್ಯಾದಿಗಳು ಇದರ ಲಕ್ಷಣಗಳಾಗಿವೆ.
* ಮರುಕಳಿಸುವ ಲಯದ ನಿದ್ರೆ-ಜಾಗ್ರತಾವಸ್ಥೆ
ಸಿರ್ಕಾಡಿಯನ್ ರಿದಂ ಸ್ಲೀಪ್-ವೇಕ್ ಡಿಸಾರ್ಡರ್ ಎಂದು ಕರೆಯಲಾಗುವ ಈ ರೋಗವು ಅಸಮಂಜಸ ನಿದ್ರಾ ಚಕ್ರಗಳನು ಒಳಗೊಂಡಿರುತ್ತದೆ. ನಿದ್ರೆಯ ಸಮಯವು ಎಡವಟ್ಟಾಗಿರುತ್ತವೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ವ್ಯಕ್ತಿಗೆ ರಾತ್ರಿಗಳಲ್ಲಿ ನಿದ್ರಿಸಲು ಸಾಧ್ಯವಾಗುವುದಿಲ್ಲ.
ವಿವಿಧ ನಿದ್ರಾ ರೋಗಗಳಿಗೆ ಸಂಬಂಧಿಸಿದಂತೆ ವಿವಿಧ ಚಿಕಿತ್ಸಾ ಕ್ರಮಗಳಿವೆಯಾದರೂ,ಹೆಚ್ಚಿನ ನಿದ್ರಾರೋಗಗಳನ್ನು ಗುಣಪಡಿಸಬಹುದು.
* ಪುರು ಬನ್ಸಾಲ್ * ಪೂರಕ ಮಾಹಿತಿ: ಡಾ.ವೀರೇನ್ ಝಾ,
(ಇಂದು ಹಾಸ್ಪಿಟಲ್, ಲಕ್ನೋ)
ಕೃಪೆ: onlymyhealth.com