ದುಬೈ: ದಾರುನ್ನೂರ್ ಯೂತ್ ಟೀಂನಿಂದ ರಕ್ತ ದಾನ ಶಿಬಿರ
ದುಬೈ, ಮಾ.23: ದಾರುನ್ನೂರ್ ಯುಎಇ ಕಲ್ಚರಲ್ ಸೆಂಟರ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ದಾರುನ್ನೂರ್ ಯೂತ್ ಟೀಂ ವತಿಯಿಂದ ಮಾ.19ರಂದು ದುಬೈಯಲ್ಲಿರುವ ಲತೀಫಾ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಸೈಯದ್ ಅಸ್ಗರ್ ಅಲಿ ತಂಙಳ್ ರ ದುಆ ದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ದಾರುನ್ನೂರ್ ಯುಎಇ ಪ್ರಮುಖರಾದ ಸೈಯದ್ ಅಸ್ಗರ್ ಅಲಿ ತಂಙಳ್ , ಮುಹಮ್ಮದ್ ಮುಸ್ತಾಕ್ ಕದ್ರಿ, ಸಲೀಂ ಅಲ್ತಾಫ್ ಫರಂಗಿಪೇಟೆ, ಸಂಶುದ್ದೀನ್ ಸೂರಲ್ಪಾಡಿ, ಬದ್ರುದ್ದೀನ್ ಹೆಂತಾರ್, ಅಬ್ದುಸ್ಸಲಾಂ ಬಪ್ಪಳಿಗೆ, ಮುಹಮ್ಮದ್ ರಫೀಕ್ ಸುರತ್ಕಲ್, ಶಾಹುಲ್ ಬಿ.ಸಿ.ರೋಡ್, ಸುಲೈಮಾನ್ ಮೌಲವಿ ಕಲ್ಲೆಗ, ಮುಹಮ್ಮದ್ ಶರೀಫ್ ಕಾವು ಮೊದಲಾದವರು ರಕ್ತದಾನ ಮಾಡಿದರು.
ದಾರುನ್ನೂರಿನ ವಿವಿಧ ಶಾಖೆಗಳ ಮತ್ತು ಯೂತ್ ಟೀಮ್ ನ ಸುಮಾರು 120ರಷ್ಟು ಕಾರ್ಯಕರ್ತರು ಶಿಬಿರದಲ್ಲಿ ಪಾಲ್ಗೊಂಡಿದ್ದರು. ರಕ್ತದಾನ ಮಾಡಿದ ಕಾರ್ಯಕರ್ತರಿಗೆ ದಾರುನ್ನೂರಿನ ವತಿಯಿಂದ ಪ್ರೋತ್ಸಾಹಾರ್ಥ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ದಾರುನ್ನೂರ್ ಯೂತ್ ಟೀಂ ಅಧ್ಯಕ್ಷ ಅನ್ಸಾಫ್ ಪಾತೂರು, ಪ್ರಧಾನ ಕಾರ್ಯದರ್ಶಿ ಸಫಾ ಇಸ್ಮಾಯೀಲ್ ಬಜ್ಪೆ, ಉಪಾಧ್ಯಕ್ಷ ಅಶ್ರಫ್ ಪರ್ಲಡ್ಕ, ಸಿರಾಜ್ ಬಿ.ಸಿ.ರೋಡ್, ನವಾಝ್ ಬಿ.ಸಿ.ರೋಡ್, ಆಸಿಫ್ ಮರೀಲ್, ನಿಝಾಮ್ ತೋಡಾರ್, ನಾಸಿರ್ ಬಪ್ಪಳಿಗೆ, ಮುಹಮ್ಮದ್ ಶಬ್ಬೀರ್ ಫರಂಗಿಪೇಟೆ, ಹಾರಿಸ್ ಕೊಯಿಲ, ಸಂಶುದ್ದೀನ್ ಮೂಡುಬಿದಿರೆ ಮೊದಲಾದವರು ಸಹಕರಿಸಿದರು.