ಓ ಮೆಣಸೇ...
ಬಾಂಗ್ಲಾದೇಶದ ಸ್ವಾತಂತ್ರಕ್ಕಾಗಿ ಪ್ರತಿಭಟಿಸಿ ನಾನು ಜೈಲಿಗೆ ಹೋಗಿದ್ದೆ - ನರೇಂದ್ರ ಮೋದಿ, ಪ್ರಧಾನಿ
ಅಲ್ಲೇ ಇದ್ದಿದ್ದರೆ ಭಾರತದ ರೈತರು ವಿಮೋಚನೆಗಾಗಿ ಹೋರಾಡುವ ಅಗತ್ಯ ಬೀಳುತ್ತಿರಲಿಲ್ಲ.
ಮೇ 2ರ ಬಳಿಕ ಯಾವುದೇ ಕ್ಷಣದಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಆಗಲಿದೆ - ಬಸನಗೌಡ ಪಾಟೀಲ್ ಯತ್ನಾಳ್,ಶಾಸಕ
ನಿಮ್ಮಲ್ಲಿರುವ ಸಿಡಿಯಲ್ಲಿ ಕ್ಲೈಮಾಕ್ಸ್ ದೃಶ್ಯಗಳಿರಬೇಕು.
ಅರಣ್ಯದ ನಿಖರ ಚಿತ್ರ ತಿಳಿಯಲು ಲಿಡಾರ್ ತಂತ್ರಜ್ಞಾನ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ- ಪ್ರಕಾಶ್ ಜಾವಡೇಕರ್, ಕೇಂದ್ರ ಸಚಿವ
ಹೀಗೆ ಅರಣ್ಯ ನಾಶ ಮಾಡುತ್ತಾ ಹೋದರೆ ಅರಣ್ಯದ ಚಿತ್ರವನ್ನಷ್ಟೇ ನೋಡಬೇಕಾದೀತು.
ಬಿಜೆಪಿ ಮಾತ್ರ ಕೇರಳಕ್ಕೆ ವೇಗದ ಪ್ರಗತಿ ನೀಡಬಲ್ಲದು - ತೇಜಸ್ವಿ ಸೂರ್ಯ, ಸಂಸದ
ಭಾರತದ ಪ್ರಗತಿಯ ವೇಗ ಯಾಕೆ ನಿಧಾನವಾಯಿತು? ಅದಕ್ಕೆ ಉತ್ತರಿಸಿ.
ಎಸ್‌ಐಟಿ ಸ್ವತಂತ್ರ ಸಂಸ್ಥೆ, ಯಾರದ್ದೂ ಕೈಗೊಂಬೆಯಲ್ಲ - ಬಸವರಾಜ್ ಬೊಮ್ಮಾಯಿ, ಸಚಿವ
ಆದರೆ ಸರಕಾರ ಮಾತ್ರ ಸಿಡಿಗಳ ಕೈಗೊಂಬೆಯಾಗಿ ಬಿಟ್ಟಿದೆ ಎನ್ನುತ್ತಿದ್ದಾರೆ.
ಸಾಧು ಸಂತರು, ಶಾಸಕರು, ಸಂಸದರ ಮನವಿ ಆಧರಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಮಠಮಂದಿರಗಳಿಗೆ ಒಂದೇ ಕಂತಿನಲ್ಲಿ 80 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ -ಕೋಟ ಶ್ರೀನಿವಾಸ್ ಪೂಜಾರಿ, ಸಚಿವ
ಮಠಗಳಿಲ್ಲದ ಜಾತಿಗಳು ಅಭಿವೃದ್ಧಿಯಾಗುವ ಅಗತ್ಯವಿಲ್ಲವೇ?
ಜೀವನದಲ್ಲಿ ಎತ್ತರವಾಗಬೇಕು ಎಂದು ಭಾವಿಸುವವರು ದೇವರಿಗೆ ಹತ್ತಿರವಾಗಬೇಕು - ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ
ಹಾಗೆಂದು ಹತ್ತಿರವಾದವರೆಲ್ಲ ಕೋರ್ಟ್ ಮೆಟ್ಟಿಲೇರಿದ್ದಾರಲ್ಲ?
ಸರಕಾರದಲ್ಲಿ ಒಮ್ಮಮ್ಮೆ ಒಂದೊಂದು ಕಾಲ. ಒಮ್ಮೆ ಮಳೆಗಾಲ, ಒಮ್ಮೆ ಚಳಿಗಾಲ, ಈಗ ‘ಸಿಡಿ’ ಕಾಲ - ಎಚ್.ವಿಶ್ವನಾಥ್, ವಿ.ಪ.ಸದಸ್ಯ
ರಾಮರಾಜ್ಯ ನೀಡುತ್ತೇವೆ ಎಂದು ಅಧಿಕಾರ ಹಿಡಿದು, ನಾಡನ್ನು ಕಾಮರಾಜ್ಯ ಮಾಡಿ ಬಿಟ್ಟರು.
ಅವಕಾಶ ಬಳಸಿಕೊಂಡವರು ನಾಯಕರಾಗಿ ಬೆಳೆಯುತ್ತಾರೆ- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಕೆಲವೊಮ್ಮೆ ಜಾರಕಿಹೊಳಿಯಾಗಿ ಜಾರಿಯೂ ಬೀಳುತ್ತಾರೆ.
ಕೇರಳವು ರಾಷ್ಟ್ರ ವಿರೋಧಿ ಚಟುವಟಿಕೆಗಳ ಕೇಂದ್ರವಾಗುತ್ತಿದೆ - ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆಗಳ ಮೂಲಕ.
ನಾವು ಬಲಿಷ್ಠ ಭಾರತ ನಿರ್ಮಿಸಿದ್ದೆವು. ಇಂದು ನಮ್ಮ ಕಣ್ಣೆದುರು ಸರ್ವನಾಶವಾಗುವುದನ್ನು ನೋಡುವಾಗ ದುಃಖವಾಗುತ್ತದೆ - ಎಸ್.ಆರ್.ಪಾಟೀಲ್, ವಿ.ಪ.ನಾಯಕ ನಾಶ ಮಾಡುವುದೂ ಸಾಧನೆಗಳಲ್ಲಿ ಸೇರ್ಪಡೆಯಾಗುತ್ತದೆ ಎಂದು ನ್ಯಾಯಾಲಯವೇ ಹೇಳಿದೆಯಲ್ಲ?
ಕಾಂಗ್ರೆಸ್ ಎರಡು ಹಲ್ಲು ಹೊಂದಿದ ಆನೆ ಇದ್ದಂತೆ - ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ
ಕೋರೆ ಹಲ್ಲಿರುವ ನರಿಗಳಿಗಿಂತ ವಾಸಿ.
ಸಮ್ಮ್ಮಿಶ್ರ ಸರಕಾರ ಬೀಳಿಸಿದ 17 ಮಂದಿಯ ವಿರುದ್ಧ ಪಿತೂರಿ ನಡೆಯುತ್ತಿದೆ - ಡಾ.ಕೆ.ಸುಧಾಕರ್,ಸಚಿ
ಸಮ್ಮಿಶ್ರ ಸರಕಾರವನ್ನು ಬೀಳಿಸಿದ ಪಿತೂರಿ ಸರಿಯೇ?
ರಾಜಕೀಯವನ್ನು ದೇಶದ ಕೆಲಸ ಎಂದು ಕಾಂಗ್ರೆಸ್ ಯಾವತ್ತೂ ಭಾವಿಸಿಲ್ಲ - ರಾಜನಾಥ್ ಸಿಂಗ್, ಕೇಂದ್ರ ಸಚಿವ
ದೇಶವನ್ನು ಮಾರುವ ಕೆಲಸ ಎಂದು ನೀವು ಭಾವಿಸಿದಂತಿದೆ.
ದೇಶದಲ್ಲಿ ಅನೇಕ ದೇವಸ್ಥಾನಗಳು ಇದ್ದಂತೆ, ವಿಶ್ವಕ್ಕೆ ಭಾರತವೇ ದೇವಸ್ಥಾನ - ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ
ಅಂಬಾನಿ, ಅದಾನಿ ಈ ದೇವಸ್ಥಾನದ ಅರ್ಚಕರಂತೆ.
ಗೋ ಹತ್ಯೆ ತಡೆಯುವ ಮೂಲಕ ಗೋ ಸಂಪತ್ತು ವೃದ್ಧಿಗೆ ಸರಕಾರ ಪ್ರಯತ್ನಿಸುತ್ತಿದೆ - ಪ್ರಭು ಚವ್ಹಾಣ್, ಸಚಿವ
ಗೊಡ್ಡು ಗೋವುಗಳನ್ನು ಜನರ ತೆರಿಗೆಯಿಂದ ಗೋಶಾಲೆಗಳಲ್ಲಿ ಸಾಕುವುದರಿಂದ ಸಂಪತ್ತು ಹೆಚ್ಚುವುದು ಹೇಗೆ?
ನಾನು ಎಸಿ ರೂಮ್‌ನಲ್ಲಿ ಕುಳಿತು ಕೆಲಸ ಮಾಡುವವನಲ್ಲ - ಜಗದೀಶ್ ಶೆಟ್ಟರ್, ಸಚಿವ
ಬಹುಶಃ ಮಲಗಿ ಕೆಲಸ ಮಾಡುತ್ತಿರಬೇಕು.
ರಾಜ್ಯದ ಜನರಿಗೆ ಸತ್ಯ ಗೊತ್ತಾಗಬೇಕೆಂದು ನಾನು ಸಿಡಿ ತನಿಖೆಗೆ ಒಪ್ಪಿಕೊಂಡಿದ್ದೇನೆ - ರಮೇಶ್ ಜಾರಕಿಹೊಳಿ , ಮಾಜಿ ಸಚಿವ
ಕೆಲವೊಂದು ‘ನಗ್ನ ಸತ್ಯ’ಗಳಿಗೆ ತನಿಖೆಯ ಅಗತ್ಯವಿರುವುದಿಲ್ಲ.
ಮಂಚದಲ್ಲಿ ಇದ್ದಾಗ ಮಂಚದ ಕೆಲಸ ಮಾಡಬೇಕು. ಅದನ್ನು ಬಿಟ್ಟು ಬೇರೆ ವಿಚಾರ ಮಾತನಾಡಬಾರದು- ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಒಟ್ಟಿನಲ್ಲಿ ಇವರ ಕೆಲಸಕ್ಕೆ ಮಂಚವೇ ನಾಚಿ ತಲೆತಗ್ಗಿಸಿದೆಯಂತೆ.
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರವನ್ನು ದುಷ್ಟ ಶಕ್ತಿಗಳಿಂದ ರಕ್ಷಿಸಬೇಕಾದರೆ ಹಿಂದೂಗಳು ಸದಾ ಒಗ್ಗಟ್ಟಿನಿಂದಿರಬೇಕು- ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
ರಾಮನನ್ನು ಸಂಘಪರಿವಾರದಿಂದ ರಕ್ಷಿಸುವ ಕೆಲಸವನ್ನು ಮೊದಲು ಮಾಡಬೇಕಾಗಿದೆ.
ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿಯನ್ನು ನೋಡಲೆಂದೇ ಜನ ಸೇರುತ್ತಾರೆ - ಅಮಿತ್ ಶಾ, ಕೇಂದ್ರ ಸಚಿವ
ಹೌದು, ಮ್ಯೂಸಿಯಂನಲ್ಲಿ ಇರಬೇಕಾದ ಅಪರೂಪದ ಜೀವಿಯದು.
ನಿರ್ದೇಶಕರು ನಟಿಯರ ಜೊತೆ ಗೌರವಯುತವಾಗಿ ನಡೆದುಕೊಳ್ಳುವುದು ತೀರಾ ಅಪರೂಪ - ಕಂಗನಾ ರಣಾವತ್, ನಟಿ
ಗೌರವಯುತವಾಗಿ ವರ್ತಿಸುವ ಹೊಣೆಗಾರಿಕೆ ನಟಿಯರಿಗಿಲ್ಲವೇ?
ಕೊರೋನ ನಿಯಂತ್ರಣಕ್ಕೆ ಜನರು ಸಹಕರಿಸದಿದ್ದರೆ ಅಪಾಯ ತಪ್ಪಿದ್ದಲ್ಲ- ಡಾ.ಕೆ.ಸುಧಾಕರ್, ಸಚಿವ
ಸಚಿವರ ಕಚ್ಚೆಯನ್ನು ನಿಯಂತ್ರಿಸದಿದ್ದರೆ ಸರಕಾರಕ್ಕೆ ಅಪಾಯ ತಪ್ಪಿದ್ದಲ್ಲ.
ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ಹಲವು ವರ್ಷಗಳಿಂದ ಅಧಿಕಾರದಲ್ಲಿರುವ ನಾನು ಒಂದೇ ಒಂದು ದಿನವೂ ರಜೆ ಪಡೆದಿಲ್ಲ - ನರೇಂದ್ರ ಮೋದಿ, ಪ್ರಧಾನಿ
70 ವರ್ಷ ಕಟ್ಟಿದ್ದನ್ನು ನಾಶ ಮಾಡುವುದೆಂದರೆ ಸುಮ್ಮನೆಯೇ?
ರಾಷ್ಟ್ರ ರಾಜಕಾರಣ ಪ್ರವೇಶಿಸುವ ಬಯಕೆ ಇಲ್ಲ, ಇಲ್ಲೇ ಉತ್ತಮ ರಾಜಕಾರಣ ಮಾಡಲು ನನ್ನನ್ನು ಬಿಟ್ಟರೆ ಸಾಕು - ಸಿದ್ದರಾಮಯ್ಯ, ಮಾಜಿ ಸಿಎಂ
ಉತ್ತಮ ರಾಜಕಾರಣ ಮಾಡಲು ಕಾಂಗ್ರೆಸ್‌ನವರು ಬಿಟ್ಟಾರೆಂದು ಅನ್ನಿಸುವುದಿಲ್ಲ