ಮಲ್ನಾಡ್ ಗಲ್ಫ್ ಶಿಕ್ಷಣ ಮತ್ತು ಸೇವಾ ಟ್ರಸ್ಟ್ ನ ವಾರ್ಷಿಕ ಮಹಾಸಭೆ
ರಿಯಾದ್, ಎ.2: ಮಲ್ನಾಡ್ ಗಲ್ಫ್ ಶಿಕ್ಷಣ ಮತ್ತು ಸೇವಾ ಟ್ರಸ್ಟ್ ನ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಝೂಮ್ ಆ್ಯಪ್ ಮೂಲಕ ಆನ್ ಲೈನ್ ನಲ್ಲಿ ನಡೆಯಿತು.
ಇರ್ಶಾದ್ ಅಬ್ದುರ್ರಹ್ಮಾನ್ ಚಕ್ಕಮಕ್ಕಿ ಅವರು ನಿರೂಪಿಸಿದ ಸಭೆಯ ಅಧ್ಯಕ್ಷತೆಯನ್ನು ಬಶೀರ್ ಬಾಳ್ಳುಪೇಟೆ ವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಾಫಿ ಟ್ರಸ್ಟ್ ನ ವಾರ್ಷಿಕ ವರದಿ, ಸಾಧನೆ ಮತ್ತು ಮುಂಬರುವ ಯೋಜನೆಗಳ ಕುರಿತು ವಿವರಿಸಿದರು.
ಸೌದಿ ಅರೇಬಿಯಾದ ಝೋನಲ್ ಅಧ್ಯಕ್ಷರಾದ ಮುಶ್ತಾಕ್ (ಜಿದ್ದಾ), ಅಬ್ದುಲ್ ಸತ್ತಾರ್ ಜಯಪುರ (ದಮಾಮ್ ಖೋಬರ್), ಜುನೈದ್ ಇಸ್ಮಾಯೀಲ್(ರಿಯಾದ್), ಅಬೂಬಕರ್ ಹಾಜಿ ಅವರ ಅನುಪಸ್ಥಿತಿಯಲ್ಲಿ ಮುಹ್ಸಿನ್ ಕೂರ್ಗ್ (ಜುಬೈಲ್), ಹಿರಿಯ ಸಲಹೆಗಾರ ಮುಹಮ್ಮದ್ ಫಾರೂಕ್ ಅರಬ್ ಎನರ್ಜಿ ಮಾತನಾಡಿದರು.
ಬಳಿಕ ಟ್ರಸ್ಟ್ ನ ಕೇಂದ್ರ ಸಮಿತಿಯ ನೂತನ ಸಾಲಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಕಳಸ ಸರ್ವಾನುಮತದಿಂದ ಪುನರಾಯ್ಕೆಯಾದರು.
ಅಧ್ಯಕ್ಷೀಯ ಮಾತುಗಳನ್ನಾಡಿದ ಮುಹಮ್ಮದ್ ಶರೀಫ್ ಕಳಸ, ಟ್ರಸ್ಟ್ ನ ಎಲ್ಲ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು ಮತ್ತು ಸಂಘಟನೆಯನ್ನು ಅಲ್ಲಾಹನು ಇನ್ನೂ ಬಲಪಡಿಸಲಿ ಎಂದು ಪ್ರಾರ್ಥಿಸಿದರು.
ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ರಾಫಿ, ಗೌರವಾಧ್ಯಕ್ಷರಾಗಿ ಬಶೀರ್ ಬಾಳ್ಳುಪೇಟೆ, ಖಜಾಂಚಿಯಾಗಿ ಶರೀಫ್ ಪೂಂಜಾಲಕಟ್ಟೆ, ಉಪಾಧ್ಯಕ್ಷರುಗಳಾಗಿ ಮುಹಮ್ಮದ್ ಸಿರಾಜುದ್ದೀನ್, ಇಕ್ಬಾಲ್ ಬಾಳೆಹೊನ್ನೂರು, ಇಸ್ಮಾಯೀಲ್ ಹೈದ್ರೋಸ್, ಜಂಟಿ ಕಾರ್ಯದರ್ಶಿಗಳಾಗಿ ಇಕ್ಬಾಲ್ ಗಬ್ಗಲ್, ಅಫ್ಝಲ್ ಸಮದ್, ಸಹ ಕಾರ್ಯದರ್ಶಿಯಾಗಿ ಇರ್ಷಾದ್ ಅಬ್ದುರ್ರಹ್ಮಾನ್, ಅಂತಾರಾಷ್ಟ್ರೀಯ ಸಂಯೋಜಕ ಅಬ್ದುಲ್ ಸತ್ತಾರ್, ಹಿರಿಯ ಸಲಹೆಗಾರರಾಗಿ ಫಾರೂಕ್ ಅರಬ್ ಎನರ್ಜಿ ಹಾಗೂ 36 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಇದೇ ವೇಳೆ ಶಿಕ್ಷಣ ಸಮಿತಿ, ವೈದ್ಯಕೀಯ ಸಮಿತಿ, ಕಾರ್ಯಿವಿಧಾನ ರಚನಾ ಸಮಿತಿ, ಮಾಧ್ಯಮ ಸಂಯೋಜಕರು, ಜಿಲ್ಲಾ ಸಂಯೋಜಕ ಎಂಬ ಉಪ ಸಮಿತಿಗಳನ್ನು ರಚಿಸಲಾಯಿತು.
ಅಸ್ಗರ್ ಅಬೂಬಕರ್ ಚಕ್ಕಮಕ್ಕಿ ಕಿರಾಅತ್ ಪಠಿಸಿದರು. ದಾವೂದ್ ಕೊಡ್ಲಿಪೇಟೆ ದುಆಗೈದರು. ಅಬೂಬಕರ್ ಸಿದ್ದೀಕ್ ಬೇಲೂರು ಸ್ವಾಗತ ಭಾಷಣ ಮಾಡಿದರು. ಜಲಾಲ್ ಬೇಗ್ ವಂದಿಸಿದರು. ಪ್ರಾರ್ಥನೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.