ಪ್ರಮೋದ್, ಕದಮ್ ಫೆನಲ್‌ಗೆ
ದುಬೆ ಪ್ಯಾರಾ ಬ್ಯಾಡ್ಮಿಂಟನ್
ದುಬೈ: ಭಾರತದ ಶಟ್ಲರ್‌ಗಳಾದ ಪ್ರಮೋದ್ ಭಗತ್ ಮತ್ತು ಸುಕಾಂತ್ ಕದಮ್ 3ನೇ ದುಬೈ ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಫೈನಲ್ ಪ್ರವೇಶಿಸಿದರು.
ಎಸ್‌ಎಲ್ 3 ವಿಭಾಗದಲ್ಲಿ ವಿಶ್ವದ ನಂ.1 ಪ್ರಮೋದ್ ಅವರು ಮಲೇಶ್ಯದ ಮುಹಮ್ಮದ್ ಹುಜೈರಿ ಅಬ್ದುಲ್ ಮಾಲೆಕ್ 21-7, 21-17 ಅವರನ್ನು ಮಣಿಸಿ ಫೈನಲ್ ತಲುಪಿದರು. ಫೈನಲ್‌ನಲ್ಲಿ ಕುಮಾರ್ ನಿತೇಶ್ ಅವರನ್ನು ಎದುರಿಸಲಿದ್ದಾರೆ. ಪ್ರಮೋದ್ ತನ್ನ ಸೆಮಿಫೈನಲ್‌ನಲ್ಲಿ ಪ್ರಾಬಲ್ಯ ಸಾಧಿಸಿದ್ದರು. ಅವರು ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಪುರುಷರ ಡಬಲ್ಸ್ ಸೆಮಿಫೈನಲ್‌ನಲ್ಲಿ ಪ್ರಮೋದ್ ಮತ್ತು ಮನೋಜ್ ಸರ್ಕಾರ್ ಅವರು ಮುಹಮ್ಮದ್ ಅರ್ವಾಜ್ ಅನ್ಸಾರಿ ಮತ್ತು ಡೀಪ್ ರಂಜನ್ ಬಿಸೊಯಿ ಅವರನ್ನು 21-19, 23-21 ಅಂತರದಲ್ಲಿ ಸೋಲಿಸಿದರು. ಅವರು ಫೈನಲ್‌ನಲ್ಲಿ ಸುಕಾಂತ್ ಕದಮ್ ಮತ್ತು ಕುಮಾರ್ ನಿತೇಶ್ ಅವರನ್ನು ಎದುರಿಸಲಿದ್ದಾರೆ.
ಆದರೆ ಪ್ರಮೋದ್ ಮತ್ತು ಪಾಲಾ ಕೊಹ್ಲಿ ತಮ್ಮ ಮಿಶ್ರ ಡಬಲ್ಸ್ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದರು. ಎಸ್‌ಎಲ್ 4 ವಿಭಾಗದಲ್ಲಿ ಸುಕಾಂತ್ ಕದಮ್ ಅವರು ಜರ್ಮನಿಯ ಪ್ರತಿಸ್ಪರ್ಧಿ ಮಾರ್ಸೆಲ್ ಆಡಮ್ ವಿರುದ್ಧ 21-11, 21-11 ಸೆಟ್‌ಗಳಿಂದ ಜಯ ಸಾಧಿಸಿ ಫೈನಲ್ ತಲುಪಿದರು.