ಮಂಗಳೂರು, ಎ.4: ಮಂಜೇಶ್ವರ ತಾಲೂಕಿನ ಕೋಳ್ಯೂರು ಗ್ರಾಮದ ಕೊಮ್ಮೆ ನಿವಾಸಿ ಮೀಂಜ ಗ್ರಾಪಂ ಮಾಜಿ ಸದಸ್ಯ ಕೊಮ್ಮೆ ತಿಮ್ಮಣ್ಣ ಭಟ್ ಅವರ ಪತ್ನಿ ಸಾವಿತ್ರಿ ಭಟ್ ಕೊಮ್ಮೆ (68) ಶುಕ್ರವಾರ ತನ್ನ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.
ಗೃಹಿಣಿಯಾಗಿದ್ದ ಮೃತರು ಪತಿ, ಒಬ್ಬ ಪುತ್ರ ಮತ್ತು ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.