ಇಂಡಿಯಾ ಫ್ರೆಟರ್ನಿಟಿ ಫೋರಂ ಸೌದಿ ಅರೇಬಿಯಾ ವತಿಯಿಂದ "ದಿ ಡಿಸ್ಟೆನ್ಸ್" ವಿತರಣಾ ಕಾರ್ಯಕ್ರಮಕ್ಕೆ ಚಾಲನೆ
ರಿಯಾದ್: ಇಂಡಿಯಾ ಫ್ರೆಟರ್ನಿಟಿ ಫೋರಂ (ಐಎಫ್ಎಫ್) ಸೌದಿ ಅರೇಬಿಯಾ ವತಿಯಿಂದ ಕೋವಿಡ್ 19 ಸಂದಿಗ್ಧ ಪರಿಸ್ಥಿತಿಯಲ್ಲಿ ಮಾಡಿದ ಹಾಗೂ ಕಳೆದ ಹಲವಾರು ವರ್ಷಗಳಿಂದ ಅನಿವಾಸಿ ಭಾರತೀಯರಿಗೆ ನೀಡುತ್ತಿರುವ ಸಾಮಾಜಿಕ ಸೇವೆಗಳ ಕಿರುಪರಿಚಯದ "ದಿ ಡಿಸ್ಟೆನ್ಸ್" ಸುವನೀರ್ ಪುಸ್ತಕದ ಅಸೀರ್ ಪ್ರಾಂತ್ಯದ ವಿತರಣಾ ಕಾರ್ಯಕ್ರಮಕ್ಕೆ ಕಮೀಸ್ ಮುಶಾಯತ್ ನಲ್ಲಿರುವ ಹೋಟೆಲ್ ತಾಜ್ ನಲ್ಲಿ ಶನಿವಾರ ಚಾಲನೆ ನೀಡಲಾಯಿತು.
ಐಎಫ್ಎಫ್ ಅಸೀರ್ ಪ್ರಾಂತ ಅಧ್ಯಕ್ಷರಾದ ಸಲೀಂ ಗುರುವಾಯನಕೆರೆ ಅವರು ಡಾ. ಬಿನು ಕುಮಾರ್ (ವೈದ್ಯಾಧಿಕಾರಿಗಳು, ಮೈ ಕೇರ್ ಹಾಸ್ಪಿಟಲ್ ಕಮೀಶ್ ಮುಶಾಯತ್) ರವರಿಗೆ "ದಿ ಡಿಸ್ಟೆನ್ಸ್" ಸುವನೀರ್ ಪ್ರತಿಯನ್ನು ಹಸ್ತಾಂತರಿಸುವ ಮೂಲಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಾಬಿರ್ ಅಲಿ (ಕಾರ್ಯದರ್ಶಿ ಐಎಫ್ಎಫ್ ಅಭಾ ಕೇರಳ ಚಾಪ್ಟರ್ ) ರವರು "ದಿ ಡಿಸ್ಟೆನ್ಸ್" ಸುವನೀರ್ ಪುಸ್ತಕದ ಬಗ್ಗೆ ವಿವರಣೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ಲುಕ್ಮಾನ್ (ಪ್ರೊಫೆಸರ್ ಕಿಂಗ್ ಖಾಲಿದ್ ವಿಶ್ವವಿದ್ಯಾಲಯ ಅಭಾ), ಡಾ. ಅಬ್ದುಲ್ ಖಾದರ್ (ಪ್ರೊಫೆಸರ್ ಕಿಂಗ್ ಖಾಲಿದ್ ವಿಶ್ವವಿದ್ಯಾಲಯ, ಅಭಾ), ಸಿದ್ದೀಕ್ (ಪ್ರಾಂಶುಪಾಲರು, ಅಲ್ ಜುನೂಬ್ ಇಂಟರ್ನ್ಯಾಷನಲ್ ಸ್ಕೂಲ್, ಖಮಿಶ್ ಮುಷೈತ್), ತೌಕೀರ್ ಇಕ್ಬಾಲ್ (ಕೌನ್ಸಿಲರ್, ಅಲ್ ಜುನೂಬ್ ಇಂಟರ್ ನ್ಯಾಷನಲ್ ಸ್ಕೂಲ್, ಖಮೀಶ್ ಮುಷೈತ್), ಮೆಹರ್ ಫಾತಿಮಾ (ಪ್ರಾಧ್ಯಾಪಕರು ಅಲ್ ಜನೂಬ್ ಇಂಟರ್ನ್ಯಾಷನಲ್ ಸ್ಕೂಲ್, ಖಮೀಶ್ ಮುಷೈತ್), ಹನೀಫ್ ಮಂಜೇಶ್ವರಂ (ಉಪಾಧ್ಯಕ್ಷರು, ಇಂಡಿಯನ್ ಸೋಶಿಯಲ್ ಫೋರಂ ಅಸೀರ್ ಕೇಂದ್ರೀಯ ಸಮಿತಿ), ಮುಜೀಬ್ (ವರದಿಗಾರರು ಮಾದ್ಯಮಂ ಮತ್ತು ಮೀಡಿಯಾ ಒನ್), ಮುಹಮ್ಮದ್ ರಫಿ ( ಉದ್ಯಮಿ ಅಭಾ) ಹಾಗೂ ಐಎಫ್ಎಫ್ ಅಸೀರ್ ಪ್ರಾಂತ ಕಾರ್ಯಕಾರಿ ಸಮಿತಿಯ ಸದಸ್ಯರು ಈ ಸಂಧರ್ಭ ಉಪಸ್ಥಿತರಿದ್ದರು.
ಕೋವಿಡ್ ಸಮಯದ ಸಂದಿಗ್ಧ ಪರಿಸ್ಥಿತಿಯಲ್ಲಿ ಐಎಫ್ಎಫ್ ಮಾಡಿದ ಆಹಾರದ ಕಿಟ್ ವಿತರಣೆ, ರಕ್ತದಾನ, ಕೌನ್ಸೆಲಿಂಗ್ ಕಾರ್ಯಕ್ರಮದಂತಹ ಸಾಮಾಜಿಕ ಸೇವೆಗಳ ಬಗ್ಗೆ ಹಾಗೂ ಹಲವಾರು ವರ್ಷಗಳಿಂದ ಅನಿವಾಸಿ ಭಾರತೀಯರಿಗೆ ಆಶಾಕಿರಣವಾಗಿ ಮೂಡಿ ಬಂದಿರುವ ಐಎಫ್ಎಫ್ ನ ಕಾರ್ಯಚಟುವಟಿಕೆಗಳ ಬಗ್ಗೆ ಕಾರ್ಯಕ್ರಮದಲ್ದಿ ನೆರೆದಿದ್ದ ಗಣ್ಯರು ಪ್ರಶಂಸಿದರು.
ಕಾರ್ಯಕ್ರಮದಲ್ಲಿ ಐಎಫ್ಎಫ್ ಕಾರ್ಯಚಟುವಟಿಕೆಗಳ ಕುರಿತು ಸಲೀಮ್ ಜಿಕೆ ಯವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಐಎಫ್ಎಫ್ ಜಿಝಾನ್ ಕರ್ನಾಟಕ ಚಾಪ್ಟರ್ ಕಾರ್ಯದರ್ಶಿ ಹನೀಫ್ ಜೋಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಶರಫುದ್ದೀನ್ (ಕಾರ್ಯದರ್ಶಿ ಐಎಫ್ಎಫ್ ಅಸೀರ್) ವಂದಿಸಿದರು.