varthabharthi


ರಾಷ್ಟ್ರೀಯ

ಪ.ಬಂಗಾಳ ಚುನಾವಣೆ: ರಿಕ್ಷಾ ಎಳೆಯುವವನ ಮನೆಯಲ್ಲಿ ಅಮಿತ್ ಶಾ ಭೋಜನ

ವಾರ್ತಾ ಭಾರತಿ : 7 Apr, 2021

photo: ANI

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಇನ್ನೂ ಐದು ಸುತ್ತಿನ ಮತದಾನ ಬಾಕಿ ಉಳಿದಿದ್ದು, ಪ್ರಚಾರದ ಅಬ್ಬರದ ಜೋರಾಗಿ ನಡೆಯುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೌರಾ ಜಿಲ್ಲೆಯ ಡೊಮ್‌ಜೂರ್‌ನಲ್ಲಿರುವ ರಿಕ್ಷಾ ಎಳೆಯುವವನ ಮನೆಯಲ್ಲಿ ಬುಧವಾರ ಭೋಜನ ಮಾಡಿದರು.

ಎಪ್ರಿಲ್ 10 ರಂದು ಮತದಾನ ನಡೆಯುವ ಡೊಮ್‌ಜೂರ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೀಬ್ ಬ್ಯಾನರ್ಜಿ ಅವರು ಶಾಗೆ ಸಾಥ್ ನೀಡಿದರು, ಬಂಗಾಳದ ಮಾಜಿ ಅರಣ್ಯ ಸಚಿವರಾಗಿದ್ದ ಬ್ಯಾನರ್ಜಿ ತೃಣಮೂಲದಿಂದ ಬಿಜೆಪಿಗೆ ಪಕ್ಷಾಂತರವಾಗಿರುವ ಹಲವು ಪ್ರಮುಖ ನಾಯಕರ ಪೈಕಿ ಒಬ್ಬರಾಗಿದ್ದಾರೆ.

"ನಾನು ಕೇವಲ ಒಂದು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ್ದೇನೆ ಆದರೆ, ನಾನು ಅಲ್ಲಿ ನೋಡಿದ ಉತ್ಸಾಹದ ನೆಲೆಯಲ್ಲಿ ರಾಜೀಬ್ ಬ್ಯಾನರ್ಜಿ ಬಹುಮತದಿಂದ ಗೆಲ್ಲುತ್ತಾರೆ ಎಂಬ ವಿಶ್ವಾಸ ನನಗಿದೆ. ಅವರ (ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ) ನಡವಳಿಕೆ ಹಾಗೂ ಭಾಷಣಗಳಲ್ಲಿ ಹತಾಶೆಯನ್ನು ಕಾಣಬಹುದು'' ಎಂದು ಎಎನ್‌ಐಗೆ ಶಾ ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)