varthabharthi


ರಾಷ್ಟ್ರೀಯ

ಮಹಾರಾಷ್ಟ್ರ: ಒಂದೇ ದಿನ 322 ಮಂದಿ ಕೊರೋನ ಸೋಂಕಿತರು ಮೃತ್ಯು

ವಾರ್ತಾ ಭಾರತಿ : 8 Apr, 2021

ಮುಂಬೈ : ಮಹಾರಾಷ್ಟ್ರದಲ್ಲಿ ಬುಧವಾರ ಒಂದೇ ದಿನ 59,907 ಹೊಸ ಕೋವಿಡ್-19 ಪ್ರಕರಣಗಳು ಸೇರ್ಪಡೆಯಾಗಿದ್ದು, 322 ಮಂದಿ ಸೋಂಕಿತರು ಕೊನೆಯುಸಿರೆಳೆದಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 31.73 ಲಕ್ಷಕ್ಕೇರಿದ್ದು, ಒಟ್ಟು ಮೃತರ ಸಂಖ್ಯೆ 56,652ಕ್ಕೆ ಹೆಚ್ಚಿದೆ.

ಇದು ಮಹಾರಾಷ್ಟ್ರದಲ್ಲಿ ಒಂದೇ ದಿನ ದಾಖಲಾದ ಗರಿಷ್ಠ ಪ್ರಕರಣವಾಗಿದೆ. ಇದಕ್ಕೂ ಮುನ್ನ ಎ. 4ರಂದು ಗರಿಷ್ಠ ಅಂದರೆ 57,074 ಪ್ರಕರಣ ಗಳು ಸೇರ್ಪಡೆಯಾಗಿದ್ದವು. ರಾಜ್ಯದಲ್ಲಿ ಇದೀಗ 5,01,559 ಸಕ್ರಿಯ ಪ್ರಕರಣಗಳಿವೆ. ಮುಂಬೈನಲ್ಲಿ ಒಂದೇ ದಿನ 10,442 ಪ್ರಕರಣಗಳು ವರದಿಯಾಗಿದ್ದು, 24 ಮಂದಿ ಸಾವನ್ನಪ್ಪಿದ್ದಾರೆ. ಇದರಿಂದ ನಗರದ ಒಟ್ಟು ಪ್ರಕರಣಗಳ ಸಂಖ್ಯೆ 4.83 ಲಕ್ಷಕ್ಕೇರಿದ್ದು, ಸಾವಿನ ಸಂಖ್ಯೆ 11,856 ಆಗಿದೆ. ಇದಿವರೆಗೆ 26.13 ಲಕ್ಷ ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಿಸಿದೆ.

ಬುಧವಾರ ದಾಖಲೆ ಅಂದರೆ 2,31,250 ಪರೀಕ್ಷೆ ನಡೆಸಲಾಗಿದ್ದು, ರಾಜ್ಯದಲ್ಲಿ ಒಟ್ಟು ಪರೀಕ್ಷೆ ಮಾಡಲಾದ ಮಾದರಿಗಳ ಸಂಖ್ಯೆ 2,11,48,736 ಆಗಿದೆ. ರಾಜ್ಯದಲ್ಲಿ ಗುಣಮುಖರಾದವರ ದರ 82.36 ಶೇಕಡಾ ಇದ್ದು, ಮರಣದರ 1.79 ಶೇಕಡ ಆಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)