varthabharthi


ಅಂತಾರಾಷ್ಟ್ರೀಯ

ಕೋವಿಡ್ ಪ್ರಕರಣ ಹೆಚ್ಚಳ ಹಿನ್ನೆಲೆ

ಭಾರತದಿಂದ ಪ್ರಯಾಣಿಕರ ಪ್ರವೇಶ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ನ್ಯೂಝಿಲ್ಯಾಂಡ್

ವಾರ್ತಾ ಭಾರತಿ : 8 Apr, 2021

ವೆಲ್ಲಿಂಗ್ಟನ್: ದಕ್ಷಿಣ ಏಶ್ಯಾದ ದೇಶದಿಂದ ಹೆಚ್ಚಿನ ಸಂಖ್ಯೆಯ ಕೊರೋನ ಪಾಸಿಟಿಸ್ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ನ್ಯೂಝಿಲ್ಯಾಂಡ್ ತನ್ನ ದೇಶದ ನಾಗರಿಕರು ಸೇರಿದಂತೆ ಭಾರತದ ಎಲ್ಲ ಪ್ರಯಾಣಿಕರ ಪ್ರವೇಶವನ್ನು ಸುಮಾರು 2 ವಾರಗಳ ಕಾಲ ತಾತ್ಕಾಲಿಕವಾಗಿ  ಸ್ಥಗಿತಗೊಳಿಸಿದೆ.

ತಾತ್ಕಾಲಿಕ ಸ್ಥಗಿತವು  ಎಪ್ರಿಲ್ 11ರಿಂದ ಆರಂಭವಾಗಿ ಎಪ್ರಿಲ್ 28ರ ತನಕ ಇರಲಿದೆ.
ನ್ಯೂಝಿಲ್ಯಾಂಡ್ ತನ್ನ ಗಡಿಯಲ್ಲಿ ಗುರುವಾರ 23 ಹೊಸ ಕೊರೋನ ಪ್ರಕರಣಗಳನ್ನು ದಾಖಲಿಸಿದೆ. ಈ ಪೈಕಿ ಭಾರತದಿಂದ ಬಂದಿದ್ದ 17 ಜನರು ಸೇರಿದ್ದರು. ಹೀಗಾಗಿ ಈ ಹೆಜ್ಜೆ ಇಟ್ಟಿದೆ.

"ನಾವು ಭಾರತದಿಂದ ಆಗಮಿಸುವ ಪ್ರಯಾಣಿಕರಿಗಾಗಿ ನ್ಯೂಝಿಲ್ಯಾಂಡ್ ಪ್ರವೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದ್ದೇವೆ'' ಎಂದು ಪ್ರಧಾನಿ ಜಸಿಂಡಾ ಅರ್ಡೆರ್ನ್ ಆಕ್ಲೆಂಡ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭಾರತದಲ್ಲೀಗ ಕೊರೋನ ವೈರಸ್ ನ ಎರಡನೇ ಅಲೆ ಕಾಣಿಸಿಕೊಂಡಿದೆ. ದಿನದಿಂದ ದಿನಕ್ಕೆ ಕೊರೋನ ಹೊಸ ಪ್ರಕರಣಗಳು ಹೆಚ್ಚಾಗುತ್ತಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)