ಜಿಎಂಯುನಿಂದ ಪ್ರಿಸಿಷನ್ ಮೆಡಿಸಿನ್ ನಲ್ಲಿ ನೂತನ ಪಿ.ಎಚ್.ಡಿ ಕಾರ್ಯಕ್ರಮ ಆರಂಭ
ದುಬೈ, ಎ. 8: ಅಜ್ಮಾನ್ ಗಲ್ಫ್ ಮೆಡಿಕಲ್ ವಿವಿಯ ಕಾಲೇಜ್ ಆಫ್ ಮೆಡಿಸಿನ್ ಆ್ಯಂಡ್ ಟಿ.ಆರ್.ಐ.ಪಿ.ಎಂ ಪ್ರಿಸಿಷನ್ ಮೆಡಿಸಿನ್ನಲ್ಲಿ ನೂತನ ಪಿಎಚ್ಡಿ ಕಾರ್ಯಕ್ರಮಕ್ಕೆ ಯುಎಇಯ ಶಿಕ್ಷಣ ಸಚಿವಾಲಯದ ಕಮಿಷನ್ ಫಾರ್ ಅಕಾಡಮಿಕ್ ಅಕ್ರೆಡಿಟೇಷನ್ನಿಂದ ಮಾನ್ಯತೆ ಲಭಿಸಿದೆ.
ಬದಲಾಗುತ್ತಿರುವ ಆರೋಗ್ಯ ರಕ್ಷಣೆ ಕೇಂದ್ರದಲ್ಲಿ ಆರೋಗ್ಯ ವೃತ್ತಿಪರತೆ ಹಿನ್ನೆಲೆಯೊಂದಿಗೆ ವಿಜ್ಞಾನಿಗಳು ಮತ್ತು ಸಂಶೋಧಕರನ್ನು ರೂಪಿಸುವುದು ಪ್ರಿಸಿಷನ್ ಮೆಡಿಸಿನ್ನಲ್ಲಿ ಈ ಡ್ಯುಯಲ್ ಪಿಎಚ್ಡಿ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಫ್ರಾನ್ಸ್ ನ ಪ್ಯಾರಿಸ್-ಸ್ಯಾಕ್ಲೆ ವಿವಿಯ ಸಹಭಾಗಿತ್ವದೊಂದಿಗೆ ಆರಂಭಿಸಲಾಗಿರುವ ಪಿಎಚ್ಡಿ ಕೋರ್ಸ್ ಡ್ಯುಯಲ್ ಡಿಗ್ರಿ ಕಾರ್ಯಕ್ರಮವಾಗಿದ್ದು, ಅಂತರಾಷ್ಟ್ರೀಯ ವಿನಿಮಯಗಳನ್ನು ಉತ್ತೇಜಿಸಲು, ವೈಜ್ಞಾನಿಕ ಸಹಕಾರವನ್ನು ಹೆಚ್ಚಿಸಲು, ಗಲ್ಫ್ ಮೆಡಿಕಲ್ ವಿವಿಯಲ್ಲಿ ಸಂಶೋಧನೆ ಮತ್ತು ಉನ್ನತ ಶಿಕ್ಷಣದ ಅಭಿವೃದ್ಧಿಗಾಗಿ ಮತ್ತು ಈ ಕೋರ್ಸ್ನಲ್ಲಿ ಪ್ರವೇಶಕ್ಕೆ ಯುಎಇ ಪ್ರಜೆಗಳಿಗೆ ಆದ್ಯತೆಯನ್ನು ನೀಡುವ ಮೂಲಕ ಇಲ್ಲಿಯ ಸಮುದಾಯಕ್ಕೆ ಮೌಲ್ಯವನ್ನು ಒದಗಿಸಲು ನಾವು ಪರಸ್ಪರ ಕೈಜೋಡಿಸಿದ್ದೇವೆ ಎಂದು ಜಿಎಂಯು ಚಾನ್ಸಲರ್ ಪ್ರೊ.ಹೋಶಮ್ ಹಾಮ್ದಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಿಸಿಷನ್ ಮೆಡಿಸಿನ್ನಲ್ಲಿ ಡ್ಯುಯೆಲ್ ಪಿಎಚ್ಡಿ ವಿದ್ಯಾರ್ಥಿಗಳು ಗಲ್ಫ್ ಮೆಡಿಕಲ್ ವಿವಿ ಮತ್ತು ಪ್ಯಾರಿಸ್-ಸ್ಯಾಕ್ಲೆ ವಿವಿಯಿಂದ ತಲಾ ಒಂದರಂತೆ ಎರಡು ಪಿಎಚ್ಡಿ ಪದವಿಗಳನ್ನು ಪಡೆಯುತ್ತಾರೆ.