varthabharthi


ಕರಾವಳಿ

ಎಸ್ಸೆಸ್ಸೆಫ್ ನಿಂದ ಯಮೀನಿ ಕಾನ್ಫರೆನ್ಸ್

ವಾರ್ತಾ ಭಾರತಿ : 8 Apr, 2021

ಮಂಗಳೂರು : ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯಿಂದ ಯಮೀನಿ ಕಾನ್ಫರೆನ್ಸ್ ಮುತ-ಅಲ್ಲಿಂ ಸಂಗಮ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ಅಧ್ಯಕ್ಷತೆಯಲ್ಲಿ ಅಲ್ ಮದೀನಾ ಮಂಜನಾಡಿಯಲ್ಲಿ ನಡೆಯಿತು.

ಎಸ್ಸೆಸ್ಸೆಫ್ ಮುಖವಾಣಿ ಇಶಾರ ಪಾಕ್ಷಿಕದ ಪ್ರಧಾನ ಸಂಪಾದಕ ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಮೊಂಟುಗೋಳಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಎಸ್.ವೈ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್,ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಹಾಫಿಳ್ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ,ಎಸ್ಸೆಸ್ಸೆಫ್ ರಾಜ್ಯ ದಅವಾ ಕಾರ್ಯದರ್ಶಿ ಕೆ.ಎಂ ಮುಸ್ತಫಾ ನಈಮಿ ಸಖಾಫಿ ಹಾವೇರಿ ತರಗತಿ ನಡೆಸಿದರು.

ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್  ಮಾಸ್ಟರ್ ಮರಿಕ್ಕಳ, ಅಲ್ ಮದೀನಾ ಮಸ್ಜಿದ್ ಮುದರ್ರಿಸ್ ಮಹಮ್ಮದ್ ಕುಂಞಿ  ಅಂಜದಿ ಸಂದೇಶ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಉಸ್ತಾದುಲ್ ಅಸಾತೀದ್ ತಾಜುಶ್ಶರೀಅ: ಶೈಖುನಾ ಅಲೀ ಕುಂಞಿ ಉಸ್ತಾದ್ ಅನುಸ್ಮರಣೆ ನಡೆಸಲಾಯಿತು. ಎಸ್ಸೆಸ್ಸೆಫ್ ರಾಜ್ಯ ನಾಯಕ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಸ್ವಾಗತಿಸಿದರು. ಯಾಸೀನ್ ಸಖಾಫಿ ವಂದಿಸಿದರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)