ಮಕ್ಕಾ, ಮದೀನಾ ಮಸೀದಿಗಳ ತರಾವೀಹ್ ನಮಾಝ್‌ನಲ್ಲಿ ಕಡಿತ
ಮಕ್ಕಾ (ಸೌದಿ ಅರೇಬಿಯ), ಎ. 12: ರಮಝಾನ್ ಅವಧಿಯಲ್ಲಿ ಮಕ್ಕಾದ ಗ್ರಾಂಡ್ ಮಸೀದಿ ಮತ್ತು ಮದೀನಾದ ಪ್ರವಾದಿ ಮಸೀದಿಯಲ್ಲಿ ತರಾವೀಹ್ ಪ್ರಾರ್ಥನೆಗಳ ಅವಧಿಯನ್ನು 20 ರಕಅತ್‌ಗಳಿಂದ 10 ರಕಅತ್‌ಗಳಿಗೆ ಕಡಿತಗೊಳಿಸಲಾಗುವುದು. ಎರಡು ಪವಿತ್ರ ಮಸೀದಿಗಳ ಉಸ್ತುವಾರಿಯಾಗಿರುವ ಸೌದಿ ಅರೇಬಿಯ ದೊರೆ ಸಲ್ಮಾನ್ ಬಿನ್ ಅಬ್ದುಲ್ಲಝೀಝ್‌ರ ಆದೇಶದಂತೆ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
ಪವಿತ್ರ ತಿಂಗಳಲ್ಲಿ ಶ್ರದ್ಧಾಳುಗಳನ್ನು ಕೊರೋನ ವೈರಸ್‌ನಿಂದ ರಕ್ಷಿಸುವ ಉದ್ದೇಶದ ಕೋವಿಡ್ ಸುರಕ್ಷತಾ ಕ್ರಮಗಳ ಭಾಗವಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಎರಡು ಪವಿತ್ರ ಮಸೀದಿಗಳ ವ್ಯವಹಾರವನ್ನು ನೋಡಿಕೊಳ್ಳುವ ಸಮಿತಿಯ ಅಧ್ಯಕ್ಷ ಶೇಖ್ ಅಬ್ದುಲ್ ರಹ್ಮಾನ್ ಅಲ್ ಸುದೈಸ್ ಹೇಳಿದ್ದಾರೆ ಎಂದು ಸೌದಿ ಗಝೆಟ್ ತಿಳಿಸಿದೆ.
Next Story