ಜೈಪುರದ ಆಸ್ಪತ್ರೆಯಿಂದ 320 ಡೋಸ್ ಕೋವ್ಯಾಕ್ಸಿನ್ ಲಸಿಕೆಗಳ ಕಳವು !
ಜೈಪುರ: ಭಾರತ್ ಬಯೋಟೆಕ್ ನ ಕೋವಿಡ್ ಲಸಿಕೆ ಕೋವ್ಯಾಕ್ಸಿನ್ ನ 320 ಡೋಸ್ ಗಳನ್ನು ಆಸ್ಪತ್ರೆಯಿಂದಲೇ ಕಳವುಗೈದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಕೋವ್ಯಾಕ್ಸಿನ್ ನ 32 ಬಾಟಲ್ ಗಳನ್ನು ಕೋಲ್ಡ್ ಸ್ಟೋರೇಜ್ ನಿಂ ಲಸಿಕೆ ಕೇಂದ್ರಕ್ಕೆ ಸಾಗಿಸುವ ದಾರಿಯಲ್ಲಿ ಕಳ್ಳತನ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಕೋವ್ಯಾಕ್ಸಿನ್ ಲಸಿಕೆಯ ಒಂದು ಬಾಟಲ್ ನಲ್ಲಿ 10 ಡೋಸ್ ಗಳಿವೆ. 32 ಬಾಟಲ್ ಗಳಲ್ಲಿ ಒಟ್ಟು ೩೨೦ ಡೋಸ್ ಗಳಷ್ಟು ಲಸಿಕೆಯಿದ್ದು, ಸಾಗಣೆಯ ಸಮಯದಲ್ಲಿ ಕಳ್ಳತನ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಜೈಪುರದ ಶಾಸ್ತ್ರಿ ನಗರದ ಕನ್ವತಿಯಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಈ ಕುರಿತಾದಂತೆ ಆಸ್ಪತ್ರೆಯ ಮುಖ್ಯಸ್ಥರು ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ಮಾತನಾಡಿದ ಮುಖ್ಯ ವೈದ್ಯಕೀಯ ಅಧಿಕಾರಿ ನರೋತ್ತಮ ಶರ್ಮಾ, "ಆಸ್ಪತ್ರೆಯಿಂದ 320 ಡೋಸ್ ಕೋವ್ಯಾಕ್ಸಿನ್ ನಾಪತ್ತೆಯಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಸಿದ್ದೇವೆ ಮತ್ತು ಪೊಲೀಸ್ ಪ್ರಕರಣ ದಾಖಲಿಸಿದ್ದೇವೆ. ಇಷ್ಟು ಪ್ರಮಾಣದ ಲಸಿಕೆಗಳು ಕಾಣೆಯಾಗಿರುವುದು ನಮಗೆ ಆಘಾತ ಉಂಟು ಮಾಡಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಲಸಿಕಾ ಅಭಿಯಾನವನ್ನು ಮುಂದುವರಿಸಲು ಬೇಕಾದಷ್ಟು ಲಸಿಕೆ ನಮ್ಮಲ್ಲಿಲ್ಲ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕಳೆದ ವಾರ ಹೇಳಿಕೆ ನೀಡಿದ್ದರು.