ರಂಝಾನ್ ಅವಧಿಯಲ್ಲಿ ಒಮ್ಮೆ ಮಾತ್ರ ಉಮ್ರಾ ನಿರ್ವಹಣೆಗೆ ಅವಕಾಶ
ರಿಯಾದ್ (ಸೌದಿ ಅರೇಬಿಯ), ಎ. 14: ಈ ರಮಝಾನ್ ಅವಧಿಯಲ್ಲಿ ಒಮ್ಮೆ ಮಾತ್ರ ಉಮ್ರಾ ನಿರ್ವಹಿಸುವುದಕ್ಕಾಗಿ ಯಾತ್ರಿಕರಿಗೆ ಪರವಾನಿಗೆ ನೀಡಲಾಗುವುದು ಎಂದು ಸೌದಿ ಅರೇಬಿಯದ ಹಜ್ ಮತ್ತು ಉಮ್ರಾ ಸಚಿವಾಲಯ ಘೋಷಿಸಿದೆ.
ಪವಿತ್ರ ಮಕ್ಕಾ ನಗರದಲ್ಲಿರುವ ಗ್ರಾಂಡ್ ಮಸೀದಿಯಲ್ಲಿ ದಿನದ ಎಲ್ಲ ಐದು ಪ್ರಾರ್ಥನೆಗಳನ್ನು ಮಾಡುವುದಕ್ಕಾಗಿಯೂ ಶ್ರದ್ಧಾಳುಗಳು ಈಗ ಪರವಾನಿಗೆಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಸಚಿವಾಲಯವು ಸೌದಿ ಗಝೆಟ್‌ನಲ್ಲಿ ತಿಳಿಸಿದೆ.
ಈಗಾಗಲೇ ಉಮ್ರಾ ಪರ್ಮಿಟ್ ಹೊಂದಿರುವವರು ಅದರ ಅವಧಿ ಮುಕ್ತಾಯಗೊಳ್ಳದೆ ಇನ್ನೊಂದು ಪರ್ಮಿಟ್‌ಗಾಗಿ ಅರ್ಜಿ ಹಾಕುವಂತಿಲ್ಲ ಎಂದು ಸಚಿವಾಲಯವು ಸ್ಪಷ್ಟಪಡಿಸಿದೆ.
ಗ್ರಾಂಡ್ ಮಸೀದಿಯಲ್ಲಿ ದೈನಂದಿನ ಪ್ರಾರ್ಥನೆ ಸಲ್ಲಿಸಲು ನೀಡಲಾಗುವ ಪರ್ಮಿಟ್ ಒಂದು ದಿನದ ಐದು ಪ್ರಾರ್ಥನೆಗಳಿಗೆ ಮಾತ್ರ ಸಿಂಧುವಾಗಿರುತ್ತದೆ. ಪ್ರಸಕ್ತ ರಂಝಾನ್ ಅವಧಿಯಲ್ಲಿ, ಚಾಲ್ತಿಯಲ್ಲಿರುವ ದೈನಂದಿನ ಪ್ರಾರ್ಥನೆ ಪರ್ಮಿಟ್‌ನ ಅವಧಿ ಮುಗಿದ ಬಳಿಕ ಶ್ರದ್ಧಾಳುಗಳು ಹೆಚ್ಚುವರಿ ಪರ್ಮಿಟ್‌ಗಳಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
Next Story